ಹೆಣ್ಣಿನ ಆಂತರ್ಯದ ಧ್ವನಿ


Team Udayavani, Dec 29, 2018, 5:53 AM IST

nathicharami-2.jpg

ಇಷ್ಟಪಟ್ಟ ಹುಡುಗ ಮಹೇಶನನ್ನು ಮನೆಯವರ ವಿರೋದ ಲೆಕ್ಕಿಸದೆ ಮದುವೆಯಾದ ಹುಡುಗಿ ಗೌರಿ, ಅಲ್ಪ ಸಮಯದಲ್ಲೇ ಆತನನ್ನು ಕಳೆದುಕೊಳ್ಳುತ್ತಾಳೆ. ಮಹೇಶ ಕಣ್ಣೆದುರಿನಿಂದ ಮರೆಯಾದರೂ, ಗೌರಿಯ ಮನದಲ್ಲಿ ಅಚ್ಚಳಿಯದೇ ಮನೆ ಮಾಡಿಕೊಂಡಿರುತ್ತಾನೆ. ಇನ್ನು ಗೌರಿ ಕೂಡ ಮಹೇಶನ ನೆನಪನ್ನು ಮನೆ-ಮನದಲ್ಲಿ ಹಸಿರಾಗಿರುವಂತೆಯೇ ನೋಡಿಕೊಂಡಿರುತ್ತಾಳೆ. ಕೈತುಂಬ ಸಂಬಳ ತರುವ ಕೆಲಸ, ಇರಲು ಒಳ್ಳೆಯ ಮನೆ, ಜೊತೆಗೆ ಮಹೇಶನೆಂಬ ಮನದ ಇನಿಯನ ನೆನಪು ಎಲ್ಲಾ ಇದ್ದರೂ, ಆಕೆಗೆ ಏನೋ ಕೊರಗು.

ಇನ್ನು ಏನೋ ಬೇಕೆಂಬ ಅಂತರಾಳದ ಹಂಬಲ. ಹಾಗಂತ ಜೊತೆಗಾರನೊಬ್ಬನಿರಬೇಕು ಎಂದು ಜೊತೆಗಿದ್ದವರು ಒತ್ತಾಯಿಸಿದರೂ, ಮತ್ತೂಂದು ಮದುವೆಗೆ ಗೌರಿ ತಯಾರಿಲ್ಲ. ಹಾಗಾದರೆ ಗೌರಿಯ ಮನದಾಳದ ಬಯಕೆ ಏನು? ಆಕೆ ಬಯಸುತ್ತಿರುವುದಾದರೂ ಏನು? ಆಕೆ ತನ್ನ ಅಂತರಾಳದ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾಳೆ? ಅದಕ್ಕೆ ಸಮಾಜದ ಪ್ರತಿಕ್ರಿಯೆ, ನಿಲುವುಗಳು ಹೇಗಿರುತ್ತದೆ? ಇವೆಲ್ಲದರ ಚಿತ್ರಣವೇ “ನಾತಿಚರಾಮಿ’ ಚಿತ್ರ. 

ವಿಧವೆಯೊಬ್ಬಳ ಆಂತರ್ಯ, ಪ್ರತಿನಿತ್ಯ ಆಕೆ ಎದುರಿಸುವ ಸವಾಲುಗಳು, ಸಮಾಜದ ನಿಲುವುಗಳು, ಒಂದು ಹೆಣ್ಣಿಗೆ ಗಂಡು ಸಾಂಗತ್ಯಕ್ಕೆ ಬೇಕೋ ಅಥವಾ ಸುಖಕ್ಕೆ ಬೇಕೋ, ಹೀಗೆ ಹತ್ತಾರು ವಿಷಯಗಳನ್ನು ಚರ್ಚಿಸುತ್ತ “ನಾತಿಚರಾಮಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ಮಂಸೋರೆ. ಇಂದಿಗೂ ಸಮಾಜ ಮುಕ್ತವಾಗಿ ಚರ್ಚಿಸಲು ಹಿಂಜರಿಯುವ ಸೂಕ್ಷ್ಮ ವಿಷಯವೊಂದನ್ನು ತೆರೆಮೇಲೆ ನಿರೂಪಿಸುವ ನಿರ್ದೇಶಕರ ಧೈರ್ಯ ಮೆಚ್ಚಬೇಕು.

ಆದರೆ ಇದನ್ನು ಮನರಂಜನೆಯಾಗಿ ನೋಡಬೇಕೋ, ಪ್ರಸ್ತುತ ಸಮಾಜದ ಗಂಭೀರ ಚರ್ಚೆಯ ವಿಷಯವಾಗಿ ನೋಡಬೇಕೋ ಎಂಬುದು ಮಾತ್ರ ಪ್ರೇಕ್ಷಕರಿಗೆ ಕೊನೆಯವರೆಗೂ ಗೊತ್ತಾಗುವುದಿಲ್ಲ. ಹಾಗೆಯೇ ಚಿತ್ರದ ಕಥೆ ಕೂಡ. ಇತ್ತೀಚೆಗೆ ಬರುತ್ತಿರುವ ಚಿತ್ರಗಳಿಗೆ ಹೋಲಿಸಿದರೆ “ನಾತಿಚರಾಮಿ’ ಹೊಸಬಗೆಯ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಮನರಂಜನೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಚಿತ್ರಮಂದಿರಕ್ಕೆ ಕಾಲಿಡುವ ಪ್ರೇಕ್ಷಕನಿಗೆ “ನಾತಿಚರಾಮಿ’ ತಕ್ಷಣಕ್ಕೆ ಇಷ್ಟವಾಗೋದು ಕಷ್ಟ. ಅದನ್ನು ಹೊರತುಪಡಿಸಿದರೆ, ಹೊಸಥರದ ಚಿತ್ರಗಳನ್ನು ನೋಡಿ, ಬೆಂಬಲಿಸಬೇಕು ಎನ್ನುವವರು “ನಾತಿಚರಾಮಿ’ಯನ್ನು ಒಮ್ಮೆ ನೋಡಿ ಬರಬಹುದು. ಚಿತ್ರದಲ್ಲಿ ಮಧ್ಯಮ ಕುಟುಂಬದ ಗಂಡನಾಗಿ ಸಂಚಾರಿ ವಿಜಯ್‌ ಅವರದ್ದು ಪ್ರಬುದ್ಧ ಅಭಿನಯ.

ವಿಧವೆ ಗೌರಿಯ ಪಾತ್ರದಲ್ಲಿ ಶ್ರುತಿ ಹರಿಹರನ್‌ ಅಭಿನಯ ಪರವಾಗಿಲ್ಲ. ಮಧ್ಯಮ ಕುಟುಂಬದ ಗೃಹಿಣಿಯಾಗಿ ಶರಣ್ಯ ಅಭಿನಯ ಗಮನ ಸೆಳೆಯುತ್ತದೆ. ಇನ್ನುಳಿದ ಕಲಾವಿದರ ಅಭಿನಯ ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ಇನ್ನು ಚಿತ್ರದ ಕಥೆ, ಸಂಗೀತ ಎಲ್ಲದರ ಹಿಂದೆಯೂ ಮಹಿಳೆಯರೇ ಇರುವುದರಿಂದ ಕೊಂಚ ಹೆಚ್ಚಾಗಿಯೇ “ಫಿಮೇಲ್‌ ಶ್ಯಾಡೋ’ ಚಿತ್ರದಲ್ಲಿ ಕಾಣುತ್ತದೆ. ಚಿತ್ರದ ಕೆಲವೊಂದು ದೃಶ್ಯಗಳು ವಾಸ್ತವಕ್ಕೆ ಬಲುದೂರವಿದ್ದರೂ, ಸಿನಿಮಾವಾಗಿದ್ದರಿಂದ ಅದನ್ನು ಒಪ್ಪಿಕೊಳ್ಳಲು ಅಡ್ಡಿಯಿಲ್ಲ.

ಚಿತ್ರ: ನಾತಿಚರಾಮಿ
ನಿರ್ದೇಶನ: ಮಂಸೋರೆ
ನಿರ್ಮಾಣ: ಜಗನ್ಮೋಹನ್‌ ರೆಡ್ಡಿ, ಶಿವಕುಮಾರ್‌ ರೆಡ್ಡಿ
ತಾರಾಗಣ: ಸಂಚಾರಿ ವಿಜಯ್‌, ಶ್ರುತಿ ಹರಿಹರನ್‌, ಶರಣ್ಯ, ಪೂರ್ಣಚಂದ್ರ, ಗೋಪಾಲಕೃಷ್ಣ, ಬಾಲಾಜಿ ಮನೋಹರ್‌, ಸೀತಾಕೋಟೆ ಮತ್ತಿತರರು

 
* ಜಿ.ಎಸ್‌ ಕಾರ್ತಿಕ ಸುಧನ್‌

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Love Reddy Movie Review

Love Reddy Movie Review: ಕಾಡುವ ಪ್ರೀತಿ ಹೊಸ ರೀತಿ

Tenant Movie Review

Tenant Movie Review: ಅಕ್ರಮ-ಸಕ್ರಮದಲ್ಲೊಂದು ಸಂಗ್ರಾಮ!

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.