ಪ್ರಸಾದದಷ್ಟೇ ಸವಿರುಚಿ ಟೆಂಪಲ್‌ ಮೀಲ್ಸ್‌

Team Udayavani, Dec 29, 2018, 7:20 AM IST

11.jpg

ದೇವಾಲಯಗಳಲ್ಲಿ ನೀಡುವ ಪ್ರಸಾದದ ರುಚಿ ನಾಲಿಗೆಗೆ ಹತ್ತುವ ರೀತಿ ಬೇರೆ ಯಾವುದೂ ಹತ್ತುವುದಿಲ್ಲ. ಇದೇ ಕಾರಣಕ್ಕಾಗಿಯೇ ದೇವಸ್ಥಾನದ ಪ್ರಸಾದಕ್ಕೆ ಅತ್ಯಂತ ಮಹತ್ವವಿದೆ. ಒಂದು ಹೋಟೆಲ್‌ನಲ್ಲೂ ಕೂಡ ದೇವರ ಪ್ರಸಾದದಷ್ಟೇ ರುಚಿ ಇರುವ ಭೋಜನ, ಉಪಾಹಾರ ದೊರಕುತ್ತಿದೆ ಅಂದರೆ ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ? ಹೌದು, ನಾವು ಹೇಳಲು ಹೊರಟಿದ್ದು ಮಲ್ಲೇಶ್ವರಂನ‌ 7ನೇ ಅಡ್ಡರಸ್ತೆಯಲ್ಲಿರುವ ಟೆಂಪಲ್‌ ಮೀಲ್ಸ್‌ ಹೆಸರಿನ ಹೋಟೆಲ್‌ ಬಗ್ಗೆ.

ದೇವಾಲಯದ ಅನುಭವ…
ಟೆಂಪಲ್‌ ಮೀಲ್ಸ್‌ ಹೋಟೆಲಿನ ತಿನಿಸುಗಳ ವಿಶೇಷವೆಂದರೆ, ಇಲ್ಲಿ ಅಡುಗೆಗೆ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ. ಈ ಹೋಟೆಲಿನ ಮೇಲಂತಸ್ತು ಪ್ರವೇಶಿಸುತ್ತಿದ್ದಂತೆ ದೇವಾಲಯವನ್ನೇ ಹೋಲುವ ಪ್ರಾಂಗಣ, ಗೋಡೆಗಳ ಮೇಲೆÇÉಾ ಯಕ್ಷಗಾನ ಕಲಾವಿದರು ಬಳಸುವ ಮುಖವರ್ಣಿಕೆಗಳು ಕಣ್ಮನ ಸೆಳೆಯುತ್ತವೆ. ಆಗಾಗ್ಗೆ ಘಂಟೆಗಳ ನಿನಾದ ಕೇಳಿಸಿ ದೇವಾಲಯದ ಪ್ರಶಾಂತತೆ ಮನಸ್ಸಿನೊಳಗೂ ಮೂಡಿಬಿಡುತ್ತದೆ.

ಸಾಂಪ್ರದಾಯಿಕ ಶೈಲಿಯ ಭೋಜನ
ಬಾಳೆಎಲೆ ಊಟ ಇಲ್ಲಿನ ವಿಶೇಷ. ಊಟಕೆ ಅಣಿಯಾಗಿ ಕುಳಿತರೆ ಉಪ್ಪು, ಉಪ್ಪಿನಕಾಯಿ, ಕೋಸಂಬರಿ ಹಾಗೂ ಪಲ್ಯ ಬಾಳೆಎಲೆಯನ್ನು ಆವರಿಸುತ್ತೆ. ಕೋಸಂಬರಿ ಹಾಗೂ ಪಲ್ಯ ಸವಿದರೆ ತಕ್ಷಣ ನೆನಪಾಗುವುದು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲಿನ ಸಾಂಪ್ರದಾಯಿಕ ಊಟದ ರುಚಿ. ಗೋಡಂಬಿ, ದ್ರಾಕ್ಷಿಗಳಿಂದ ಸಮೃದ್ಧಗೊಂಡ ಪಾಯಸ ಸವಿಯುತ್ತಿರುವಾಗಲೇ ಬಾಳೆಎಲೆ ಸೇರುವ ಮೈಸೂರ್‌ ಪಾಕ್‌ ನಾಲಿಗೆಯನ್ನು ಜಾಗೃತಗೊಳಿಸುತ್ತದೆ.
ಇದಾದ ಮೇಲೆ ಅಕ್ಕಿರೊಟ್ಟಿ, ಬರುತ್ತದೆ. ನಂತರ ತೊವ್ವೆಗೆ ಅನ್ನ.  ಬಿಸಿ ಅನ್ನದ ಮೇಲೆ ಘಮ ಘಮಿಸುವ ತುಪ್ಪದ ಜೊತೆ ತೊವೆೆÌಯನ್ನು ಕಲಸಿ ತಿಂದು, ಮಂಗಳೂರು ತೊಂಡೆಕಾಯಿ ಸಾಂಬಾರ್‌ನ ರುಚಿ ನೋಡುವ ವೇಳೆಗೆ ಉದುರುದುರು ಅನ್ನ ಬರುತ್ತದೆ. ಘಮಘಮಿಸುವ ರಸಂನ ಪರಿಮಳಕ್ಕೆ ಮತ್ತೂಮ್ಮೆ ಅನ್ನ ಸವಿಯುವ ಆಸೆ ಬಾರದೇ ಇರದು. 

ಪಡುಕೋಣೆಯ ಜಾಣ ಗಣೇಶ್‌…
ಕುಂದಾಪುರದ ಪಡುಕೋಣೆಯವರಾದ ಗಣೇಶ್‌, ಟೆಂಪಲ್‌ ಮೀಲ್ಸ್‌ನ ಮಾಲೀಕರು. ಈ ಹೋಟೆಲ್‌ ಆರಂಭಿಸುವ ಮುನ್ನ ವಿಪ್ರೋ ಸೇರಿದಂತೆ ವಿವಿಧ ಐಟಿ ಕಂಪೆನಿಗಳಲ್ಲಿ ಸ್ಟೋರ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಚಿಕ್ಕಂದಿನಿಂದಲೂ ದೇವಾಲಯಗಳಲ್ಲಿ ಊಟದ ವಿಭಿನ್ನ ರುಚಿಯ ಬಗ್ಗೆ ಕುತೂಹಲವಿತ್ತು. ಅದೇ ರುಚಿ ಹೊಂದಿದೆ. ಊಟವನ್ನು ಜನರಿಗೆ ಉಣ ಬಡಿಸಬೇಕೆಂಬ ಸದುದ್ದೇಶದಿಂದ ಈ ಹೋಟೆಲ್‌ ಆರಂಭಿಸಿದೆ ಅನ್ನುತ್ತಾರೆ ಗಣೇಶ್‌.

90ರೂ ಗೆ ಸಾಂಪ್ರದಾಯಿಕ ಭೋಜನ…..
ಉಪ್ಪಿನ ಕಾಯಿ, ಕೋಸಂಬರಿ, ಚಟ್ನಿ, ಪಲ್ಯ, ಬಜ್ಜಿ/ ಹಪ್ಪಳ, ಚಪಾತಿ/ಪೂರಿ, ಪಾಯಸ, ಸ್ವೀಟ್ಸ್‌, ಅನ್ನ-ತೊವ್ವೆೆ-ತುಪ್ಪ, ಅನ್ನ-ರಸಂ, ಅನ್ನ-ಹುಳಿ, ಅನ್ನ- ಮೊಸರು

ರುಚಿಯ ಗುಟ್ಟು
ಆಹಾರ ತಯಾರಿಸಲು ಬಳಸುವ ತರಕಾರಿ, ಅಕ್ಕಿ ಹಾಗೂ ವಿವಿಧ ಧಾನ್ಯಗಳನ್ನು ದಕ್ಷಿಣ ಕನ್ನಡ ಜಿÇÉೆಯ ರೈತರಿಂದಲೇ ನೇರವಾಗಿ ಖರೀದಿಸುತ್ತೇನೆ. ನುರಿತ ಬಾಣಸಿಗರ ಅನುಭವವೇ ಈ ಹೋಟೆಲಿನ ಸವಿರುಚಿಯ ಹಿಂದಿರು ಗುಟ್ಟು ಎನ್ನುತ್ತಾರೆ ಗಣೇಶ್‌.

ದಿನಕ್ಕೊಂದು ಪಾಯಸ
ಹಬ್ಬ ಹರಿದಿನಗಳಲ್ಲಿ ಟೆಂಪಲ್‌ ಮೀಲ್ಸ್‌ನಲ್ಲಿ ವಿಶೇಷ ಮೆನುಗಳಿರುತ್ತವೆ. ಪ್ರತಿ ಶನಿವಾರ ಹಾಗೂ ಭಾನುವಾರ ಹೋಳಿಗೆ ಊಟ ಇಲ್ಲಿ ಕಾಯಂ. ಅಪ್ಪೆ ಮಿಡಿಯ ಉಪ್ಪಿನಕಾಯಿ, ಹಬ್ಬದೂಟದ ವಿಶೇಷ. ಖರ್ಜೂರ, ಸಬ್ಬಕ್ಕಿ, ಗೋಧಿ ಕಡಿ, ಶಾವಿಗೆ, ಅಂಜೂರ ಹೀಗೆ ಪ್ರತಿ ದಿನವೂ ಬಗೆಬಗೆಯ ಪಾಯಸಗಳು ಭೋಜನದೊಂದಿಗೆ ಇರುತ್ತವೆ. ಹಲಸಿನ ಹಣ್ಣಿನ ಪಾಯಸ  ಟೆಂಪಲ್‌ ಮೀಲ್ಸ್‌ನ  ಫೇವರೆಟ್‌ ಖಾದ್ಯ. 

ಗ್ರಾಹಕರು ಬಯಸಿದರೆ 10 ರಿಂದ 25 ಮಂದಿಗೆ ಆಗುವಷ್ಟು ಊಟವನ್ನು ಪ್ರತ್ಯೇಕ ಕ್ಯಾರಿಯರ್‌ಗಳಲ್ಲಿ ಮನೆಗೆ ತಲುಪಿಸುವ ಸೇವೆಯೂ ಇಲ್ಲಿ ಲಭ್ಯ. 
ಸಂಪರ್ಕ ಸಂಖ್ಯೆ : 9632203201, 080-23361212
ಹೋಟೆಲಿನ ಕೆಲಸದ ಅವಧಿ: ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ.
ಪುಷ್ಪಲತಾ. ಜೆ

ಟಾಪ್ ನ್ಯೂಸ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.