ಕಂಚಿನ ಪಾತ್ರೆಗೆ ಬಹು ಮೆಚ್ಚುಗೆ
Team Udayavani, Dec 29, 2018, 7:36 AM IST
ಕಂಚಿನ ಪಾತ್ರೆಗಳೊಂದಿಗೆ ಅವಿನಾಭಾವ ಸಂಬಂಧ ಎಲ್ಲರಿಗೂ ಇದೆ. ತಂಬಿಗೆ, ಬಟ್ಟಲು, ಲೋಟ ಎನ್ನುವ ಒಂದಾದರೂ ಕಂಚಿನ ಪಾತ್ರೆ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ಇಂಥ ಪಾತ್ರೆಗಳು ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ಮನೆಯ ಘನತೆ, ಗೌರವದ ಪ್ರತೀಕವಾಗಿದ್ದವು. ಹೀಗಾಗಿ ಇಂದಿಗೂ ಬಹುತೇಕ ಎಲ್ಲರ ಮನೆಯಲ್ಲೂ ಕಂಚಿನ ಪಾತ್ರೆಗಳು ಉಳಿದುಕೊಂಡಿವೆ.
ದೇವರ ಪೂಜಾ ಕೈಂಕರ್ಯಗಳಿಗೆ ಹೆಚ್ಚಾಗಿ ಬಳಕೆಯಾಗುವ ಕಂಚಿನ ಪಾತ್ರೆಗಳು ತನ್ನ ವಿಶೇಷ ಬಣ್ಣದಿಂದಲೇ ಎಲ್ಲರನ್ನು ಸೆಳೆಯುತ್ತವೆ. ಮುಖ್ಯವಾಗಿ ದೀಪ, ಕುಸುರಿ ಕೆತ್ತನೆಯ ಚೆಂಬು, ಕಾಲು ದೀಪ, ಮಂಗಳಾರತಿ ತಟ್ಟೆ, ವಾಸ್ತು ಪಾತ್ರೆ, ಅರಿಸಿನ ಕುಂಕುಮ ಪಾತ್ರೆ, ಘಂಟೆ ಹೀಗೆ ದೇವರ ಪೂಜೆಗೆ ಆವಶ್ಯಕತೆ ಇರುವ ಎಲ್ಲ ಪಾತ್ರೆಗಳು ಕಂಚಿನದ್ದಾಗಿರುತ್ತವೆ. ಇವುಗಳು ಅಗ್ಗವಾಗಿರುವುದರಿಂದ ಮತ್ತು ನಿರ್ವಹಣೆ ಸುಲಭವಾಗಿರುವುದರಿಂದ ಬಹುತೇಕ ಎಲ್ಲರೂ ಕಂಚಿನ ಪಾತ್ರೆಗಳನ್ನೇ ಇಷ್ಟಪಡುತ್ತಾರೆ.
ವಿವಿಧ ಆಕೃತಿ, ಕೆತ್ತನೆಗಳನ್ನೊಳಗೊಂಡ ಕಂಚಿನ ಬಟ್ಟಲು, ಲೋಟ ಈಗಲೂ ಜನಪ್ರಿಯವಾಗಿವೆ. ಸಾಂಪ್ರದಾಯಿಕತೆಯನ್ನು ನೆಚ್ಚುವವರು ಇದನ್ನೇ ಹೆಚ್ಚಾಗಿ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಡುಗೆಯ ಪಾತ್ರೆಗಳೂ ಹೊರಭಾಗದಲ್ಲಿ ಕಂಚಿನ ಲೇಪನ ಪಡೆದು ಬರುತ್ತಿದ್ದು, ಅತ್ಯಂತ ಸುಂದರವಾಗಿ ಕಾಣುವ ಇಂಥ ಪಾತ್ರೆಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯೂ ಇದೆ. ಮನೆಯ ಸೌಂದರ್ಯವೃದ್ಧಿಯಲ್ಲೂ ಇಂಥ ಪಾತ್ರೆಗಳು ವಿಶೇಷ ಪ್ರಾಮುಖ್ಯ ಪಡೆದುಕೊಂಡಿವೆ.
ನಿರ್ವಹಣೆ ಹೇಗೆ?
ಇದನ್ನು ಸೋಪ್ ವಾಟರ್ ಬಳಸಿ ನೀರಿನಿಂದ ತೊಳೆಯಬಹುದು.
ಇದರ ಪಾಲಿಶ್ ಹೋಗದಂತೆ ತೊಳೆಯುವಾಗ ಜಾಗ್ರತೆ ವಹಿಸಿ.
ಇದರ ಮೇಲಿನ ಕಲೆ ಹೋಗಲು ತೊಳೆಯುವಾಗ ನಿಂಬೆ ಹಣ್ಣಿನ ರಸ, ವಿನೇ ಗರ್, ಉಪ್ಪು ಅಥವಾ ಹುಳಿ, ಅಡುಗೆ ಸೋಡ ಬಳಸಬಹುದು.
ಜಾಗ್ರತೆಯಿಂದ ಹಿಡಿದುಕೊಳ್ಳಬೇಕು. ಕೈ ಜಾರಿ ಕೆಳಗೆ ಬಿದ್ದರೆ ನಜ್ಜುಗುಜ್ಜಾಗುವ ಸಾಧ್ಯತೆ ಇದೆ.
ಯಾವುದೇ ಕಾರ ಣಕ್ಕೂ ಖಾಲಿ ಪಾತ್ರೆಯನ್ನು ಬಿಸಿ ಮಾಡಕೂಡದು.
ಸಣ್ಣ ಬಿರುಕು ಕಾಣಿಸಿಕೊಂಡರೆ, ನಜ್ಜುಗುಜ್ಜಾದರೆ ಕೂಡಲೇ ಸರಿ ಮಾಡಿಸಿ.
ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.