ಐಸಿಸ್ ಮಹಿಳೆ ಪೈಶಾಚಿಕ ಕೃತ್ಯ
Team Udayavani, Dec 30, 2018, 12:30 AM IST
ಬರ್ಲಿನ್: ಐಸಿಸ್ ಉಗ್ರ ಸಂಘಟನೆಗೆ ಸೇರಿದ ಜರ್ಮನಿ ಮಹಿಳೆ, ಐದು ವರ್ಷದ ಮಗುವನ್ನು ಸುಡುವ ಬಿಸಿಲಿನಲ್ಲಿ ಬಿಟ್ಟು ನೀರಡಿಕೆಯಿಂದ ಸಾಯುವಂತೆ ಮಾಡಿದ್ದಾಳೆ. ಇರಾಕ್ನ ಮೊಸುಲ್ನಲ್ಲಿರುವ ಈ ಮಹಿಳೆಯನ್ನು ಜೆನ್ನಿಫರ್ ಡಬ್ಲೂ ಎಂದು ಗುರುತಿಸಲಾಗಿದ್ದು, 2015ರಲ್ಲಿ ಆಕೆಯ ಪತಿ ಮನೆಗೆಲಸಕ್ಕಾಗಿ ಆ ಮಗುವನ್ನು ಖರೀದಿಸಿದ್ದ!
ಮಗು ಅನಾರೋಗ್ಯದಿಂದ ಮಲಗಿದಾಗ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿತ್ತು. ಇದಕ್ಕೆ ಶಿಕ್ಷೆಯ ರೂಪದಲ್ಲಿ ಮಹಿಳೆಯ ಪತಿ ಮಗುವನ್ನು ಬಿಸಿಲಿನಲ್ಲಿ ಕಟ್ಟಿ ಹಾಕಿದ್ದ. ಮಹಿಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ತಡೆಯಲೂ ಇಲ್ಲ. ಬಿಸಿಲಲ್ಲಿ ಬಳಲಿ, ಬಾಯಾರಿದ ಮಗು ಕೊನೆಗೆ ಅಲ್ಲೇ ಕೊನೆಯುಸಿರೆಳೆದಿತ್ತು ಎಂದು ಜರ್ಮನಿಯ ತನಿಖಾಧಿಖಾರಿಗಳು ಹೇಳಿದ್ದು, ಮಹಿಳೆಯ ವಿರುದ್ಧ ಕೊಲೆ, ಯುದ್ಧಾಪರಾಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಜೆನ್ನಿಫರ್ 2014ರ ಆಗಸ್ಟ್ ನಲ್ಲಿ ಟರ್ಕಿ ಹಾಗೂ ಸಿರಿಯಾ ಮೂಲಕ ಇರಾಕ್ಗೆ ತೆರಳಿ ಅಲ್ಲಿ ಐಸಿಸ್ಗೆ ಸೇರಿದ್ದಳು. ಮಗು ಸಾವನ್ನಪ್ಪಿದ ಅನಂತರ ಈಕೆ ಹೊಸ ದಾಖಲೆಗಳನ್ನು ಪಡೆಯಲು ಜರ್ಮನ್ ರಾಯಭಾರ ಕಚೇರಿಗೆ ಆಗಮಿಸಿದ್ದಳು. ಆಗ ಈಕೆಯನ್ನು ಬಂಧಿಸಿ ಜರ್ಮನಿಗೆ ಕಳುಹಿಸಲಾಗಿದೆ. ಈಕೆ ಮೊಸುಲ್ನಲ್ಲಿ ಪಾರ್ಕ್ನ ಕಾವಲುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಳು. ಪಾರ್ಕ್ನಲ್ಲಿ ಮಹಿಳೆಯರು ಮುಸ್ಲಿಂ ಧರ್ಮಕ್ಕೆ ಅನುಗುಣವಾಗಿ ವರ್ತಿ ಸುತ್ತಿದ್ದಾರೆಯೇ ಎಂದು ನಿಗಾ ವಹಿಸುವುದು ಈಕೆಯ ಕೆಲಸವಾಗಿತ್ತು ಎಂದು ಜರ್ಮನಿ ಅಧಿಕಾರಿಗಳು ತಿಳಿಸಿದ್ದಾರೆ. ಈಕೆ ವಿರುದ್ಧ ಜರ್ಮನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪ ಸಾಬೀತಾದಲ್ಲಿ ಜೀವಾವಧಿ ಶಿಕ್ಷೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್ ಟ್ರಕ್ ಸ್ಫೋ*ಟದ ವ್ಯಕ್ತಿ!
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.