ಪೇಪರ್‌ ಸಹಿತ ಆರೋಗ್ಯ ಸೇವೆ


Team Udayavani, Dec 30, 2018, 12:30 AM IST

ban30121801.jpg

ಬೆಂಗಳೂರು: ನಿಮ್ಮ ಮನೆಯಲ್ಲಿ ಗರ್ಭಿಣಿಯರಿದ್ದಾರೆಯೇ? ಐದು ವರ್ಷದೊಳಗಿನ ಮಕ್ಕಳಿದ್ದಾರೆಯೇ? ಹೊಸ ವರ್ಷ ಆರಂಭದಿಂದ ಆರೋಗ್ಯ ಕೇಂದ್ರಗಳ ಕಿರಿಯ ಮಹಿಳಾ ಸಹಾಯಕಿಯರು ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಟ್ಯಾಬ್‌ ಹಿಡಿದುಕೊಂಡು ಮನೆ ಬಾಗಿಲಿಗೆ ಬರಲಿದ್ದಾರೆ. ಗರ್ಭಿಣಿಯರಿಗೆ ಕಾಲಕಾಲಕ್ಕೆ ನೀಡಬೇಕಾದ ಚುಚ್ಚುಮದ್ದು, ಮಕ್ಕಳಿಗೆ ನೀಡಬೇಕಾದ ಲಸಿಕೆ ಇತ್ಯಾದಿ ವಿವರಗಳನ್ನು ಅವರೇ ಕಾಲಕಾಲಕ್ಕೆ ನೆನಪು ಮಾಡಿಕೊಡಲಿದ್ದಾರೆ. 

ರಾಜ್ಯದಲ್ಲಿ ನವಜಾತ ಶಿಶುಗಳ ಮತ್ತು ತಾಯಂದಿರ ಮರಣ ಪ್ರಮಾಣ ಕುಗ್ಗಿಸುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಕಾರ್ಯಚಟುವಟಿಕೆಯನ್ನು ಜ.1ರಿಂದ ಕಾಗದ ಮುಕ್ತಗೊಳಿಸಲು (ಪೇಪರ್‌ಲೆಸ್‌) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ 7,737 ಕಿರಿಯ ಆರೋಗ್ಯ ಸಹಾಯಕಿಯರಿಗೆ ಟ್ಯಾಬ್‌ಗಳನ್ನು ಒದಗಿಸಿದೆ.

ಈ ಟ್ಯಾಬ್‌ಗಳಲ್ಲಿ ಗರ್ಭಿಣಿ, ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೋಗ್ಯ ಮಾಹಿತಿ ಒಳಗೊಂಡ ಕೇಂದ್ರ ಸರ್ಕಾರದ ಅನ್ಮೋಲ್‌ ಆ್ಯಪ್‌ ಅಳವಡಿಸಿದ್ದು, ಆರೋಗ್ಯ ಸಹಾಯಕಿಯರು ತಾವು ಸಂಗ್ರಹಿಸುವ ಮಾಹಿತಿಗಳನ್ನು ನೇರವಾಗಿ ಡಿಜಿಟಲ್‌ ರೂಪದಲ್ಲಿ ಅನ್ಮೋಲ್‌ ಆ್ಯಪ್‌ಗೆ ಸೇರ್ಪಡೆಗೊಳಿಸಲಿದ್ದಾರೆ. ಪ್ರಸ್ತುತ ಟ್ಯಾಬ್‌ ಬಳಕೆಯ ಕುರಿತು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. 

ಇಲಾಖೆಯಿಂದ 5,000 ಜನಸಂಖ್ಯೆಗೆ ಒಬ್ಬ ಕಿರಿಯ ಆರೋಗ್ಯ ಸಹಾಯಕಿಯರನ್ನು ನಿಯೋಜಿಸಲಾಗಿರುತ್ತದೆ. ಅವರು ತಮ್ಮ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗೂ ಭೇಟಿ ನೀಡಿ ಗರ್ಭಿಣಿಯರ, ನವಜಾತ ಶಿಶುಗಳ ಆರೋಗ್ಯ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಬರೆದುಕೊಂಡು, ಆನಂತರ ದಾಖಲಾತಿ ಪುಸ್ತಕಕ್ಕೆ ಸೇರಿಸಿ ತಿಂಗಳ ನಂತರ ಅದನ್ನು ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕಂಪ್ಯೂಟರ್‌ಗೆ ಸೇರಿಸಬೇಕಿತ್ತು. ಇಲ್ಲಿ ದತ್ತಾಂಶಗಳು ಕೈತಪ್ಪುವ ಸಾಧ್ಯತೆ ಹೆಚ್ಚಿತ್ತು. ಅಲ್ಲದೇ ಸಹಾಯಕಿಯರಿಗೆ ಬರೆಯುವುದೇ ಸಾಕಷ್ಟು ಶ್ರಮವಾಗುತ್ತಿತ್ತು. ಈಗ ಟ್ಯಾಬ್‌ ವಿತರಣೆಯಿಂದ ಮಾಹಿತಿ ಸಂಗ್ರಹಣೆ, ಸಂರಕ್ಷಣೆ ಹಾಗೂ ಸಂವಹನಕ್ಕೆ ಸಹಾಯಕವಾಗಲಿದೆ. ಈ ಟ್ಯಾಬ್‌ಗ ಅವಶ್ಯಕವಿರುವ ಇಂಟರ್‌ನೆಟ್‌ಗೆ ಸ್ಥಳೀಯ ಉತ್ತಮ ಸಿಮ್‌ ಖರೀದಿಸಿಲು ಇಲಾಖೆ ಸೂಚಿಸಿದ್ದು, ಪ್ರತಿ ತಿಂಗಳು ತಲಾ 190 ರೂ. ಇಂಟರ್‌ನೆಟ್‌ ಶುಲ್ಕ ನೀಡಲಿದೆ.

ಆರೋಗ್ಯ ಸಹಾಯಕಿಯರು ಟ್ಯಾಬ್‌ನಲ್ಲಿ ದತ್ತಾಂಶ ದಾಖಲಿಸುವುದರಿಂದ ಗರ್ಭಿಣಿಯ ಆರೋಗ್ಯ ಸ್ಥಿತಿಗತಿ, ತಾಯಿ ಹಾಗೂ ಮಗುವಿಗೆ ನೀಡಬೇಕಾದ ಚಿಕಿತ್ಸೆ, ಚುಚ್ಚುಮದ್ದು, ಪೌಷ್ಠಿಕತೆಗಳ ಕುರಿತಾದ ಎಲ್ಲಾ ಮಾಹಿತಿಯೂ ಕ್ಷಣ ಮಾತ್ರದಲ್ಲಿ ಸಿಗುತ್ತದೆ. ಇದರಿಂದಾಗಿ ಅವರ ಆರೋಗ್ಯ ಕುರಿತು ಹೆಚ್ಚಿನ ನಿಗಾವಹಿಸಿ ಗರ್ಭಿಣಿ, ನವಜಾತ ಶಿಶುಗಳ ಮತ್ತು ತಾಯಂದಿರ ಮರಣ ಪ್ರಮಾಣ ಕುಗ್ಗಿಸಬಹುದು ಎನ್ನುತ್ತಾರೆ ಮಕ್ಕಳ ಆರೋಗ್ಯ ಘಟಕದ ಉಪ ನಿರ್ದೇಶಕರು.

ಈ ಟ್ಯಾಬ್‌ ಕೇವಲ ಗರ್ಭಿಣಿ, ತಾಯಿ ಹಾಗೂ ಮಕ್ಕಳ ಮಾಹಿತಿ ಸಂಗ್ರಹಣೆಗೆ ಸೀಮಿತವಾಗದೇ, ಬದಲಾದ ಜೀವನ ಶೈಲಿಯಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿರುವ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್‌ನಂತಹ ಅಸಾಂಕ್ರಾಮಿಕ ರೋಗಗಳ ಸಮೀಕ್ಷೆಗೆ ನೆರವಾಗಲಿದೆ. ಗ್ರಾಮೀಣ ಭಾಗದ 30 ವರ್ಷ ಮೇಲ್ಪಟ್ಟವರನ್ನು ಅಸಾಂಕ್ರಾಮಿಕ ರೋಗಗಳ ಪರೀಕ್ಷೆ ನಡೆಸಿ ರೋಗ ಪತ್ತೆಯಾದಲ್ಲಿ ಅವರ ಮಾಹಿತಿಯನ್ನು ದಾಖಲಿಸಿಕೊಂಡು ನಿರಂತರವಾಗಿ ಅವರ ಆರೋಗ್ಯ ಹಾಗೂ ಚಿಕಿತ್ಸೆಯ ಮಾಹಿತಿ ಪಡೆಯಲು ಕೂಡಾ ಈ ಟ್ಯಾಬ್‌ಗಳನ್ನು ಉಪಯೋಗಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಒಂದಂಕಿ ಇಳಿದ ನವಜಾತ ಶಿಶು ಮರಣ ದರ
ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಕಳೆದ 3 ವರ್ಷಕ್ಕಿಂತ ಕಡಿಮೆಯಾಗಿದೆ. ಹುಟ್ಟಿದ ದಿನದಿಂದ 28 ದಿನಗಳ ಒಳಗೆ ಮರಣ ಹೊಂದುವ ಮಕ್ಕಳ ಪ್ರಮಾಣವನ್ನು ನವಜಾತ ಶಿಶುಗಳ ಮರಣ ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಸಾವಿರ ಮಕ್ಕಳಿಗೆ ಎಷ್ಟು ಮಕ್ಕಳು ಮೃತಪಟ್ಟಿದ್ದಾರೆ ಎಂಬುದರ ಮೇಲೆ ಸರಾಸರಿ ಲೆಕ್ಕ ಹಾಕಲಾಗುತ್ತದೆ. ಆರೋಗ್ಯ ಇಲಾಖೆ ವರದಿಯಂತೆ (ಎಚ್‌ಎಂಐಎಸ್‌) ಕಳೆದ 3 ವರ್ಷ ನವಜಾತ ಶಿಶುಗಳ ಮರಣ ಪ್ರಮಾಣ 13 (ಒಂದು ಸಾವಿರಕ್ಕೆ) ಇತ್ತು, ಆದರೆ, ಈ ವರ್ಷ 12ಕ್ಕೆ ಇಳಿದಿದೆ. ಜಿಲ್ಲಾವಾರು ಕಲಬುರಗಿ ಮತ್ತು ಹಾಸನ ಪ್ರಥಮ ಸ್ಥಾನದಲ್ಲಿದ್ದರೆ, ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿದೆ.

ಮನೆ ಹೆರಿಗೆ ಕಡಿಮೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರ ನಿರಂತರವಾಗಿ ಗರ್ಭಿಣಿಯರಿಗೆ ಮಾಹಿತಿ ನೀಡುತ್ತಿದ್ದಾರೆ. ಇದರಿಂದಾಗಿ ಶಿಶು ಮತ್ತು ತಾಯಿ ಮರಣ ಪ್ರಮಾಣ ಕಡಿಮೆಯಾಗಿದೆ. ಟ್ಯಾಬ್‌ ವಿತರಣೆಯು ಆರೋಗ್ಯ ಸಹಾಯಕಿಯರಿಗೆ ಸಾಕಷ್ಟು ನೆರವಾಗಲಿದೆ. ಪ್ರಸ್ತುತ ತರಬೇತಿ ನೀಡುತ್ತಿದ್ದು, ಜ.1ರಿಂದ ಟ್ಯಾಬ್‌ ಬಳಕೆ ಆರಂಭವಾಗಲಿದ್ದು, ಇಲಾಖೆಯ ಹೊಸ ಯೋಜನೆಗಳ ಡಿಜಿಟಲ್‌ ಮಾಹಿತಿ ಸಂಗ್ರಹಣೆಗೂ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
– ಡಾ.ಪ್ರಭುದೇವ್‌ ಗೌಡ, ಮಕ್ಕಳ ಆರೋಗ್ಯ ವಿಭಾಗ ಉಪನಿರ್ದೆಶಕರು

– ಜಯಪ್ರಕಾಶ್‌ ಬಿರಾದಾರ್‌
 

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-thirthahalli

Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.