ಬಾಕ್ಸಿಂಗ್ ಡೇ ಕದನ ಗೆದ್ದ ಭಾರತ


Team Udayavani, Dec 30, 2018, 3:51 AM IST

boxing.jpg

ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯವನ್ನು ಭಾರತ 137 ರನ್ ಗಾಲ ಅಂತರದಿಂದ ಗೆದ್ದು ಇದೇ ಮೊದಲ ಬಾರಿಗೆ ಬಾಕ್ಸಿಂಗ್ ಡೇ ಪಂದ್ಯ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ. ಈ ಮೂಲಕ ಭಾರತ ಬಾರ್ಡರ್ – ಗಾವಸ್ಕರ್ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. 

ನಾಲ್ಕನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 258 ರನ್ ಮಾಡಿದ್ದ ಆಸ್ಟ್ರೇಲಿಯಾ ರವಿವಾರದ ಆಟದಲ್ಲಿ  ಕೇವಲ 3  ರನ್ ಸೇರಿಸಿ ಸೋಲೊಪ್ಪಿಕೊಂಡಿತು. ದಿನದಾಟದ ಆರಂಭದಲ್ಲಿ ಕಾಣಿಸಿಕೊಂಡ ಮಳೆ ಭಾರತದ ಗೆಲುವಿಗೆ ಅಡ್ಡಲಾಗಿತ್ತು. ಆದರೆ ಭೋಜನ ಸಮಯದ ನಂತರ ನಿಂತ ಮಳೆಯಿಂದಾಗಿ ಮತ್ತೆ ಆರಂಭವಾದ ಆಟದಲ್ಲಿ ಭಾರತ ಕೇವಲ 4.3 ಓವರ್ ನಲ್ಲಿ ಆಸೀಸ್ ನ ಕೊನೆಯ ಎರಡು ವಿಕೆಟ್ ಪಡೆದು ಮೆಲ್ಬೋರ್ನ್ ಅಂಗಳದಲ್ಲಿ ವಿಜಯ ಪತಾಕೆ ಹರಿಸಿತು. 

ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದು ಭಾರತದ ಗೆಲುವಿಗೆ ಕಾರಣರಾದ ಜಸ್ಪ್ರೀತ್ ಬುಮ್ರಾಹ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜರಾದರು.

ಸಂಕ್ಷಿಪ್ತ ಸ್ಕೊರ್ : ಭಾರತ ಪ್ರಥಮ ಇನ್ನಿಂಗ್ಸ್; 7 ವಿಕೆಟ್ ಗೆ 443 ಡಿಕ್ಲೇರ್ 
ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್ : 151
ಭಾರತ ದ್ವಿತೀಯ ಇನ್ನಿಂಗ್ಸ್: 8 ವಿಕೆಟ್ ಗೆ 106 ಡಿಕ್ಲೇರ್ 
ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್; 261  

ಎಕ್ಸ್ಟ್ರಾ ಇನ್ನಿಂಗ್ಸ್
*ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲಿ ಅತೀ ಹೆಚ್ಚು ಟೆಸ್ಟ್ ಗೆಲುವು ಕಂಡ ಭಾರತೀಯ ನಾಯಕನೆಂಬ ಗಂಗೂಲಿ ದಾಖಲೆ ಸರಿದೂಗಿಸಿದರು . ಕೊಹ್ಲಿ ಒಟ್ಟು 24 ಪಂದ್ಯಗಳಿಂದ 11 ಗೆಲುವು. ಗಂಗೂಲಿ 28 ಪಂದ್ಯಗಳಿಂದ 11 ಗೆಲುವು. 
*  ಈ ಕ್ಯಾಲೆಂಡರ್ ವರ್ಷದಲ್ಲಿ ಭಾರತ ಅತೀ ಹೆಚ್ಚು ಅಂದರೆ 4 ವಿದೇಶಿ ಗೆಲುವು ಕಂಡಿತು. ( ಜೋಹಾನ್ಸ್ ಬರ್ಗ್, ಟ್ರೆಂಟ್ ಬ್ರಿಜ್, ಅಡಿಲೇಡ್, ಮೆಲ್ಬೋರ್ನ್ ) ಈ ಹಿಂದೆ 1968ರಲ್ಲಿ ಭಾರತ 3 ವಿದೇಶಿ ಗೆಲುವು ದಾಖಲಿಸಿತ್ತು. 
* ನಾಯಕ ಕೊಹ್ಲಿಯ ‘ ಟಾಸ್ ವಿನ್ ಮ್ಯಾಚ್ ವಿನ್ ‘ ಮತ್ತೆ ಮುಂದುವರಿಯಿತು. ಕೊಹ್ಲಿ ನಾಯಕನಾಗಿ ಒಟ್ಟು21 ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದು 18 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 3 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ವಿದೇಶದಲ್ಲಿ9 ಪಂದ್ಯದಲ್ಲಿ ಟಾಸ್ ಗೆದ್ದಿದ್ದು ಅದರಲ್ಲಿ 8 ರಲ್ಲಿ ಭಾರತ ವಿಜಯಿಯಾಗಿದೆ. ಬಾಂಗ್ಲಾದೇಶ ವಿರುದ್ದದ ಒಂದು ಪಂದ್ಯ ಡ್ರಾ ಆಗಿದೆ. 
* ಜಸ್ಪ್ರೀತ್ ಬುಮ್ರಾಹ್ ಪಾದಾರ್ಪಣೆ ಮಾಡಿದ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ದಾಖಲೆ ಬರೆದರು. (48 ವಿಕೆಟ್ ) ಬುಮ್ರಾಹ್ ಇದುವರೆಗೆ ಭಾರತದ  ನೆಲದಲ್ಲಿ ಒಂದೂ ಟೆಸ್ಟ್ ಪಂದ್ಯ ಆಡಿಲ್ಲ ಎನ್ನುವುದನ್ನು ಗಮನಿಸಬೇಕು.  
* ಬುಮ್ರಾಹ್ ಆಸ್ಟ್ರೇಲಿಯಾದಲ್ಲಿ ಒಂದು ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ವೇಗದ ಬೌಲರ್ ಆಗಿ ಮೂಡಿಬಂದರು. ( 9) ಈ ಹಿಂದೆ ಕಪಿಲ್ ದೇವ್ ಮತ್ತು ಅಜಿತ್ ಅಗರ್ಕರ್ ತಲಾ 8 ವಿಕೆಟ್ ಪಡೆದ ಸಾಧನೆ ಮಾಡಿದ್ದರು. 
* ರಿಷಭ್ ಪಂಥ್ ಪಾದಾರ್ಪಣೆ ವರ್ಷದಲ್ಲಿ ವಿಕೆಟ್ ಹಿಂದೆ  ಅತೀ  ಹೆಚ್ಚು ಬಳಿ ಪಡೆದ ಬ್ರಾಡ್ ಹ್ಯಾಡಿನ್ ದಾಖಲೆಯನ್ನು ಸರಿದೂಗಿಸಿದರು ( 42)
*ಇಶಾಂತ್ ಶರ್ಮ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 6ನೇ ಬೌಲರ್ ಎಂದೆನಿಸಿದರು( 267) ಇಶಾಂತ್  ಆಸ್ಟ್ರೇಲಿಯಾ ನಾಥನ್ ಲಿಯೋನ್ ವಿಕೆಟ್ ಪಡೆಯುದರೊಂದಿಗೆ ಬಿಷನ್ ಸಿಂಗ್ ಬೇಡಿಯವರ ದಾಖಲೆ ಮುರಿದರು. (ಬೇಡಿ 266)

ಟಾಪ್ ನ್ಯೂಸ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ಜೈಲು ಶಿಕ್ಷೆ

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ಜೈಲು ಶಿಕ್ಷೆ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.