ಮಧುಕರ್‌ಗೆ ಭಾವಪೂರ್ಣ ವಿದಾಯ


Team Udayavani, Dec 30, 2018, 6:47 AM IST

bhavapoorna.jpg

ಬೆಂಗಳೂರು: ಇಪತ್ತು ವರ್ಷಗಳ ಸೇವಾ ಅವಧಿಯಲ್ಲಿ ನೇರ ವ್ಯಕ್ತಿತ್ವ, ನೇರ ಮಾತು, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡಿದ್ದ ಡಾ.ಮಧುಕರ್‌ ಶೆಟ್ಟಿ ಐಪಿಎಸ್‌ ಎಂಬ ಅಜಾನುಬಾಹು, ಯಲಹಂಕದ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆಯ ಆವರಣದಲ್ಲಿ ತ್ರಿವರ್ಣಧ್ವಜ ಹೊದ್ದು ತಣ್ಣಗೆ ಮಲಗಿದ್ದರು…

ಮಧುಕರ್‌ ಶೆಟ್ಟಿ ಪಾರ್ಥಿವ ಶರೀರದ ಸಮೀಪ ಕುಳಿತಿದ್ದ ಪತ್ನಿ, ಪುತ್ರಿ ಹಾಗೂ ಸಂಬಂಧಿಕರ  ನೋವಿನ ಕಣ್ಣೀರು. ಮೈದಾನದ ಸುತ್ತಮುತ್ತಲು ನೀರವ ಮೌನ, ಹಿರಿಯ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಎಲ್ಲ ಪೊಲೀಸರ ಮುಖದಲ್ಲೂ ಕುಟುಂಬ ಸದಸ್ಯನನ್ನು ಕಳೆದುಕೊಂಡ ಹೆಪ್ಪುಗಟ್ಟಿದ್ದ ನೋವು. ಭಾವುಕತೆ. ಮಧುಕರ್‌ ಶೆಟ್ಟಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ. ಹಿರಿಯ ಪೊಲೀಸ್‌ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಸಾವಿರಾರು ಮಂದಿ ಅಂತಿಮ ನಮನ ಪಡೆದವರ ಕಣ್ಣಂಚಲ್ಲಿ ನೀರು.. ಶನಿವಾರ ಮಧ್ಯಾಹ್ನ  2 ಗಂಟೆಯಿಂದ ಸಂಜೆ 5.30ರವರೆಗೆ ಕಂಡುಬಂದ ಚಿತ್ರಣವಿದು.

ಗೃಹ ಸಚಿವ ಎಂ.ಬಿ.ಪಾಟೀಲ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು, ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮಧುಕರ್‌ ಶೆಟ್ಟಿ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ದುಃಖದ ಮಡುವಲ್ಲಿದ್ದ ಮಧುಕರ್‌ ಶೆಟ್ಟಿ ಅವರ ಪತ್ನಿ ಹಾಗೂ ಪುತ್ರಿಗೆ ಸಾಂತ್ವನ ಹೇಳಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಗೃಹ ಸಚಿವರು ಪಾರ್ಥೀವ ಶರೀರದ ಸಮೀಪ ಕುಳಿತು ನೋವಿನಲ್ಲಿ ಭಾಗಿಯಾದರು.

ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಬಿಎಂಪಿ ಮೇಯರ್‌ ಗಂಗಾಂಬಿಕೆ, ಆಯುಕ್ತ ಮಂಜುನಾಥ್‌ ಪ್ರಸಾದ್‌ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿ  ಕಂಬನಿ ಮಿಡಿದರು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಐಪಿಎಸ್‌ ಅಧಿಕಾರಿಗಳು, ಡಿಸಿಪಿಗಳು, ತುಮಕೂರು ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮಧುಕರ್‌ ಶೆಟ್ಟಿ ಅವರ ಪಾರ್ಥೀವ ಶರೀರದ ದರ್ಶನ ಪಡೆದು, ಅಗಲಿದ ಕುಟುಂಬ ಸದಸ್ಯನಿಗೆ ಭಾವಪೂರ್ಣ ವಿದಾಯ ಹೇಳಿದರು. ನಿವೃತ್ತ ಡಿಜಿಪಿ ಶಂಕರ ಬಿದರಿ, ನಿವೃತ್ತ ಅಧಿಕಾರಿಗಳಾದ ಸಂಗ್ರಾಮ್‌ ಸಿಂಗ್‌, ನಾಗರಾಜ್‌ ಸೇರಿದಂತೆ ಇನ್ನೂ ಹಲವು ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ತಮ್ಮ ಕಾರ್ಯವೈಖರಿಯಿಂದ ಜನಾನುರಾಗಿ ಅಧಿಕಾರಿ ಎನಿಸಿಕೊಂಡಿದ್ದ ಮಧುಕರ್‌ ಶೆಟ್ಟಿ ಅವರ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಆಗಮಿಸಿದ್ದರು. ಯುವಕರು, ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಅಗಲಿದ ಅಧಿಕಾರಿಯ ಕಾರ್ಯವೈಖರಿ ಸ್ಮರಿಸಿಕೊಳ್ಳುತ್ತಿದ್ದರು. ಅಲ್ಲದೆ, ಅಂತಿಮ ದರ್ಶನ ಪಡೆದು, ಕಣ್ಣೀರು ಹಾಕಿದರು. ಯುವಕನೊಬ್ಬ ಅಂತಿಮ ನಮನ ಸಲ್ಲಿಸಲು ಬಂದಾಗ ಪಾರ್ಥೀವ ಶರೀರ ಇರಿಸಿದ್ದ ಪೆಟ್ಟಿಗೆ ಹಿಡಿದು ಅಳುವುದನ್ನು ಕಂಡು ಎಲ್ಲರೂ ಕ್ಷಣ ಕಾಲ ಸ್ಥಂಭೀಭೂತರಾದರು. ಬಳಿಕ ಪೊಲೀಸರು ಆತನನ್ನು ಸಮಾಧಾನ ಪಡಿಸಿ ಕರೆದೊಯ್ದರು.

ಪೊಲೀಸ್‌ ಸಿಬ್ಬಂದಿ ಮಧುಕರ್‌ ಶೆಟ್ಟಿ ಅವರ ವ್ಯಕ್ತಿತ್ವ, ನೇರವಂತಿಕೆ, ಪ್ರಾಮಾಣಿಕ ಸೇವೆಯ ಬಗ್ಗೆ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ದೃಶ್ಯಗಳು ಕಂಡು ಬಂದವು. ಈ ವೇಳೆ ಉದಯವಾಣಿ ಜತೆ ಅಭಿಪ್ರಾಯ ಹಂಚಿಕೊಂಡ ಅಧಿಕಾರಿಯೊಬ್ಬರು, ಇಲಾಖೆಯಲ್ಲಿ ಮಧುಕರ್‌ ಶೆಟ್ಟಿ ಅವರೊಬ್ಬ ಪ್ರಾಮಾಣಿಕ ಅಧಿಕಾರಿ. ಸಹೋದ್ಯೋಗಿಗಳನ್ನು ಕುಟುಂಬ ಸದಸ್ಯರಂತೆ ನೋಡುತ್ತಿದ್ದರು. ಕಷ್ಟ ಎಂದರೆ ನಮ್ಮ ಮೊರೆ ಆಲಿಸುತ್ತಿದ್ದರು. ಗೊತ್ತಿಲ್ಲದ ಸಂಗತಿಗಳನ್ನು ಕಲಿಸಿ, ಧೈರ್ಯದಿಂದ ಮುನ್ನುಗ್ಗಿ ಎಂದು ಹುರಿದುಂಬಿಸಿ ಯಶಸ್ಸು ಪಡೆಯುವಂತೆ ಮಾಡುತ್ತಿದ್ದರು. ಅಂತಹ ಹಿರಿಯ ಅಣ್ಣನನ್ನು ಕಳೆದುಕೊಂಡು ಬಿಟ್ಟೆವು ಎಂದು ಕಣ್ಣೀರು ಹಾಕಿದರು.

ಮಧುಕರ್‌ ಶೆಟ್ಟಿ ಅವರ ಅಧೀನದಲ್ಲಿ ಕೆಲಸ ಮಾಡಿದ್ದ ಪೊಲೀಸ್‌ ಪೇದೆಯಂತೂ, “ಜೀವನದಲ್ಲಿ ನೇರವಂತಿಕೆ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆಯಂತಹ ಅಮೂಲ್ಯ ಗುಣಗಳನ್ನು ಅವರು ನಮಗೆ ಧಾರೆ ಎರೆದವರು. ವ್ಯವಸ್ಥೆಯೊಂದಿಗೆ ಅವರು ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಅವರ ಜತೆ ಕೆಲಸ ಮಾಡಿದ್ದು ನನ್ನ ಪುಣ್ಯ. ನಮ್ಮ ಸಂಕಷ್ಟ ಹೇಳಿಕೊಳ್ಳಲು ಅವರೇ ಇಂದು ನಮ್ಮೊಂದಿಗಿಲ್ಲ,’ ಎಂದು ಭಾವುಕರಾದರು.

ಪತ್ನಿ, ಪುತ್ರಿಗೆ ಸಾಂತ್ವನ!: ಪಾರ್ಥೀವ ಶರೀರದ ಸಮೀಪ ಕುಳಿತಿದ್ದ ಮಧುಕರ್‌ ಶೆಟ್ಟಿ ಅವರ ಪತ್ನಿ ಹಾಗೂ ಪುತ್ರಿಯ ನೋವಿನ ಕಣ್ಣೀರು ನೋಡಿದ ಎಲ್ಲರೂ ಭಾವುಕರಾದರು. ತಂದೆಯ ಮುಖವನ್ನು ದಿಟ್ಟಿಸಿ ನೋಡಿ ಬಿಕ್ಕಳಿಸಿ ಅಳುತ್ತಿದ್ದ ಮಗಳ ಕೈ ಹಿಡಿದ ತಾಯಿ, ಎದೆಗಪ್ಪಿ ಸಮಾಧಾನ ಮಾಡುತ್ತಿದ್ದ ದೃಶ್ಯ ಪೊಲೀಸ್‌ ಅಧಿಕಾರಿಗಳು ಸೇರಿ ಎಲ್ಲರಲ್ಲೂ ಕಣ್ಣೀರು ತರಿಸಿತು.

ಹಾಡಿನ ಮೂಲಕ ನಮನ: ಹೈದ್ರಾಬಾದ್‌ನ ನಿವಾಸದಲ್ಲಿ ಮಧುಕರ್‌ ಅವರಿಗೆ ಅಂತಿಮ ನಮನ ಸಲ್ಲಿಸುವ ವೇಳೆ ವೇಳೆ ಸಹೋದ್ಯೋಗಿ ಐಪಿಎಸ್‌ ಅಧಿಕಾರಿ ಪವನ್‌ ಕುಮಾರ್‌, ಮಧುಕರ್‌ ಶೆಟ್ಟಿ ಅವರ ಇಷ್ಟದ ಹಾಡು ಹೇಳಿ ಕಣ್ಣೀರು ಹಾಕಿದರು. ಮಧುಕರ್‌ ಅವರ ಮುಖ ನೋಡಿ,” ಜಿಂದಗೀ ಕಾ ಸಫ‌ರ್‌, ಯೇ ಕೈಸಾ ಸಫ‌ರ್‌… ಹಾಡಿನ ಸಾಲುಗಳನ್ನು ಹೇಳಿ ಪವನ್‌ ಕುಮಾರ್‌ ಬಿಕ್ಕಿ ಬಿಕ್ಕಿ ಅತ್ತರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಇದುವರೆಗೂ 1 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

ಪಾರ್ಥೀವ ಶರೀರದ ಪಕ್ಕ ನಿಶ್ಯಬ್ದವಾಗಿದ್ದ ಸಮವಸ್ತ್ರ!: ಯಲಹಂಕದ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆ ಮೈದಾನದಲ್ಲಿ ತ್ರಿವರ್ಣಧ್ವಜ ಹೊದ್ದು ಮಧುಕರ್‌ ಶೆಟ್ಟಿ ಚಿರನಿದ್ದೆಯಲ್ಲಿದ್ದರು. ಅದರ ಸಮೀಪ ಅವರು ಧರಿಸುತ್ತಿದ್ದ ಸಮವಸ್ತ್ರ, ಬೇಟನ್‌, ಟೋಪಿ, ಬೂಟು ಇಡಲಾಗಿತ್ತು. ಅಂತಿಮ ದರ್ಶನ ಪಡೆದ ಅಧಿಕಾರಿಗಳಳು ಸಮವಸ್ತ್ರ ನೋಡಿ ಭಾವುಕರಾಗುತ್ತಿದ್ದರು.

ಮಧುಕರ್‌ ಶೆಟ್ಟಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ವ್ಯವಸ್ಥೆಯನ್ನು ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ನೇತೃತ್ವದಲ್ಲಿ ನಡೆಯಿತು. ಖುದ್ದು ಸ್ಥಳದಲ್ಲಿ ಹಾಜರಿದ್ದ ಆಯುಕ್ತರು, ಪ್ರತಿಯೊಂದು ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದರು. ಆ್ಯಂಬುಲೆನ್ಸ್‌ನಲ್ಲಿ ಬಂದು ಇಳಿದ ಮಧುಕರ್‌ ಶೆಟ್ಟಿ ಅವರ ಪತ್ನಿ ಹಾಗೂ ಪುತ್ರಿಯನ್ನು ಬರಮಾಡಿಕೊಂಡ ಆಯುಕ್ತರು, ಸಾಂತ್ವನ‌ ಹೇಳಿ ಧೈರ್ಯ ಹೇಳಿದ್ದು ವಿಶೇಷವಾಗಿತ್ತು.

ಯಡಿಯೂರಪ್ಪ ಸಂತಾಪ: ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ಅವರು ಅಕಾಲಿಕವಾಗಿ ನಿಧನರಾಗಿರುವುದು ಅತ್ಯಂತ ದುಃಖಕರ ಸಂಗತಿ. ನೇರ ನಡೆ, ನುಡಿಯ ಅಧಿಕಾರಿಯಾಗಿದ್ದ ಮಧುಕರ್‌ ಶೆಟ್ಟಿ ಅವರನ್ನು ಕಳೆದುಕೊಂಡಿರುವುದು ಪೊಲೀಸ್‌ ಇಲಾಖೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಸಂತಾಪ ಸಲ್ಲಿಸಿದ್ದಾರೆ.

ಇಂತಹ ನಿಷ್ಠ ಅಧಿಕಾರಿಯನ್ನು ರಾಜ್ಯ ಮರೆಯುವಂತಿಲ್ಲ. ಹಾಗಾಗಿ ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿ, ಯಲಹಂಕದ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆ ಹಾಗೂ ಚನ್ನಪಟ್ಟಣ ಪೊಲೀಸ್‌ ತರಬೇತಿ ಶಾಲೆ ಪೈಕಿ ಯಾವುದಾದರೂ ಒಂದಕ್ಕೆ ಮಧುಕರಶೆಟ್ಟಿ ಅವರ ಹೆಸರನ್ನಿಡಬೇಕು. ಪ್ರತಿವರ್ಷ ಉತ್ಕೃಷ್ಟ ಸೇವೆ ಸಲ್ಲಿಸಿದ ಪೊಲೀಸ್‌ ಅಧಿಕಾರಿಗಳಿಗೆ ನೀಡುವ ಮುಖ್ಯಮಂತ್ರಿ ಪದಕವನ್ನು ಮಧುಕರ ಶೆಟ್ಟಿ ಅವರ ಹೆಸರಿನಲ್ಲಿ ನೀಡುವ ಮೂಲಕ ಅಧಿಕಾರಿಯವರ ಆದರ್ಶಗಳನ್ನು ಜೀವಂತವಾಗಿಡಬೇಕು ಎಂದು ಒತ್ತಾಯಿಸಿದ್ದಾರೆ.

ಮಧುಕರ್‌ ಶೆಟ್ಟಿ ಒಬ್ಬ ಶ್ರೇಷ್ಠ ಹಾಗೂ ಪ್ರಾಮಾಣಿಕ ಅಧಿಕಾರಿ. ಪೊಲೀಸ್‌ ಇಲಾಖೆಯ ಅತ್ಯಂತ ಹೆಮ್ಮೆಯ ಅಧಿಕಾರಿಯಾಗಿದ್ದ ಮಧುಕರ್‌ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ. ಅವರದ್ದು ಮಾದರಿ ವ್ಯಕ್ತಿತ್ವ.
-ನೀಲಮಣಿ ಎನ್‌. ರಾಜು, ಡಿಜಿಪಿ 

ರಾಜ್ಯಕ್ಕೆ ಮಧುಕರ್‌ ಶೆಟ್ಟಿ ಅವರ ಸಾವು ತುಂಬಲಾರದ ನಷ್ಟ. ಅತ್ಯಂತ ನಿಷ್ಠೆಯಿಂದ, ಯಾವುದೇ ಒತ್ತಡಗಳಿಗೆ ಮಣಿಯದೆ ಅವರು ಕೆಲಸ ಮಾಡಿದ್ದಾರೆ. ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಿದವರು ಮಧುಕರ್‌.
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ 

ದೇಶಕ್ಕೆ ಮಧುಕರ್‌ ಶೆಟ್ಟಿ ಅವರಂತಹ ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಅಗತ್ಯವಿದೆ. ಅಂಥವರಿಂದ ಮಾತ್ರ ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯ. ಮಧುಕರ್‌ ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ತುಂಬಾ ಗೌರವವಿದೆ. 
-ನ್ಯಾ. ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತ

ಮಧುಕರ್‌ ನನ್ನ ಜತೆ ಎರಡು ವರ್ಷ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸಿದ್ದಾರೆ. ನೇರವಂತಿಕೆ ಅಧಿಕಾರಿ. ಯಾವುದೇ ಸಂಧರ್ಭದಲ್ಲೂ ಅವರು ಭಯ ಪಡುತ್ತಿರಲಿಲ್ಲ. ಅವರ ಸಾವು ಇಲಾಖೆಗಾದ ದೊಡ್ಡ ನಷ್ಟ.
-ರೂಪಕುಮಾರ್‌ ದತ್ತಾ, ನಿವೃತ್ತ ಡಿಜಿಪಿ 

ತಮ್ಮ 20 ವರ್ಷಗಳ ಸೇವಾ ಅವಧಿಯಲ್ಲಿ ಮಧುಕರ್‌ ಅನುಕರಣೀಯ ಸೇವೆ ಸಲ್ಲಿಸಿದ್ದಾರೆ. ಪ್ರಾಮಾಣಿಕತೆ ಅವರ ಗುಣ. ವೀರಪ್ಪನ್‌ ವಿರುದ್ಧದ ವಿಶೇಷ ಕಾರ್ಯಾಚರಣೆ ಪಡೆಯಲ್ಲಿ ಪಾಲ್ಗೊಂಡಿದ್ದಕ್ಕೆ ಸರ್ಕಾರ ನೀಡಿದ ಗೌರವ ಧನವನ್ನೇ ಅವರು ಸ್ವೀಕರಿಸಿರಲಿಲ್ಲ. ಅಂತಹ ದಿಟ್ಟ ಹಾಗೂ ಪ್ರಾಮಾಣಿಕ ಅಧಿಕಾರಿಯ ಸೇವೆಯನ್ನು ರಾಜ್ಯ ಬಳಸಿಕೊಳ್ಳಲಿಲ್ಲ ಎಂಬ ಕೊರಗಿದೆ.
-ಶಂಕರ್‌ ಬಿದರಿ, ನಿವೃತ್ತ ಡಿಜಿಪಿ

ಟಾಪ್ ನ್ಯೂಸ್

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.