ಮುಖ್ಯಮಂತ್ರಿ ಸಹಿತ ಗಣ್ಯರಿಗೆ ಆಹ್ವಾನ: ಸೊರಕೆ
Team Udayavani, Dec 30, 2018, 7:53 AM IST
ಪುತ್ತೂರು: ಐತಿಹಾಸಿಕ ಪುತ್ತೂರು ಕೋಟಿ -ಚೆನ್ನಯ ಜೋಡುಕರೆ ಕಂಬಳ ಜ. 19ರಂದು ನಡೆಯಲಿದೆ. ಅಂದು ಜಿಲ್ಲೆಯಲ್ಲಿ ದೊಡ್ಡಮಟ್ಟದ ಕಾರ್ಯಕ್ರಮಗಳು ನಡೆಯಲಿರುವುದರಿಂದ ಕಂಬಳಕ್ಕೂ ಮುಖ್ಯಮಂತ್ರಿಗಳ ಸಹಿತ ಗಣ್ಯರನ್ನು ಆಹ್ವಾನಿಸಲಾಗುವುದು ಎಂದು ಮಾಜಿ ಸಚಿವ, ಪುತ್ತೂರು ಕಂಬಳ ಸಮಿತಿ ಗೌರವಾಧ್ಯಕ್ಷ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ. ದರ್ಬೆ ನಿರೀಕ್ಷಣಾ ಮಂದಿರದಲ್ಲಿ ಶನಿವಾರ ನಡೆದ ಕೋಟಿ -ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಸಿದ್ಧತಾ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಾರಿ ಪುತ್ತೂರು ಕಂಬಳಕ್ಕೆ ಜನವರಿ ತಿಂಗಳಲ್ಲೇ ಅವಕಾಶ ಲಭಿಸಿದೆ. ಈ ನಿಟ್ಟನಲ್ಲಿ ಕಂಬಳ ಕರೆ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಜಯಕರ್ನಾಟಕದ ಮುಂದಾಳತ್ವದೊಂದಿಗೆ ಸಂಸ್ಥಾಪಕ ಎನ್. ಮುತ್ತಪ್ಪ ರೈ ಅವರ ಸಾರಥ್ಯದಲ್ಲಿ ನಡೆಯುವ ಕಂಬಳ ಕೂಟವು ಈ ಬಾರಿಯೂ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ. ಈ ನಿಟ್ಟಿನಲ್ಲಿ ಕಂಬಳ ಸಮಿತಿ ಅನುಭವಿ ಪದಾಧಿಕಾರಿಗಳು, ಕಂಬಳಾಭಿಮಾನಿಗಳು ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
ಗಣ್ಯರ ಆಗಮನ
ರಾಜ್ಯದ ಮೈತ್ರಿ ಸರಕಾರ ರೈತರಿಗೆ ಪ್ರಾಧಾನ್ಯ ನೀಡುವ ಸರಕಾರ. ಜ. 19ರಂದು ಮುಖ್ಯಮಂತ್ರಿಗಳು ಮಂಗಳೂರಿಗೆ ಆಗಮಿಸುವ ಕಾರ್ಯಕ್ರಮವಿದೆ. ಇದರ ಜತೆಗೆ ಕಡಬ, ಮೂಡುಬಿದಿರೆ ತಾಲೂಕುಗಳಿಗೆ ಚಾಲನೆ ನೀಡುವ ಸಾಧ್ಯತೆಯೂ ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸಹಿತ ವಿಐಪಿಗಳನ್ನು ಆಹ್ವಾನಿಸುತ್ತೇವೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸ್ಪೀಕರ್ ಪ್ರತಾಪ್‌ಚಂದ್ರ, ಸಚಿವೆ ಜಯಮಾಲಾ ಅವರನ್ನು ಆಹ್ವಾನಿಸಲಾಗಿದ್ದು, ಚಿತ್ರನಟ, ನಟಿಯರು ಪಾಲ್ಗೊಳ್ಳುವರು ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕೋಟಿ -ಚೆನ್ನಯ ಕಂಬಳ ಸಮಿತಿ ಸಂಚಾಲಕ ಎನ್. ಸುಧಾಕರ ಶೆಟ್ಟಿ, ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಪಿ.ವಿ., ಕೋಶಾಧಿಕಾರಿ ಪ್ರಸನ್ನ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು, ಎಲಿಕ ಜಯರಾಜ್, ಜತೆ ಕಾರ್ಯದರ್ಶಿ ಪ್ರೇಮಾನಂದ ನಾೖಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪ್ರಮುಖರಾದ ಶಶಿಕಿರಣ್ ರೈ, ಮುರಳೀಧರ ರೈ ಮಠಂತಬೆಟ್ಟು, ಶ್ರೀರಾಂ ಪಕ್ಕಳ, ಜಯಪ್ರಕಾಶ್ ನೂಜಿಬೈಲು, ಪ್ರವೀಣ್‌ಚಂದ್ರ ಆಳ್ವ, ಇಸಾಕ್ ಸಾಲ್ಮರ, ರೋಶನ್ ರೈ, ಹಸೈನಾರ್ ಬನಾರಿ, ಶಿವರಾಮ ಆಳ್ವ, ನವೀನ್‌ಚಂದ್ರ ನಾೖಕ್, ಪ್ರವೀಣ್ ನಾೖಕ್, ನೇಮಾಕ್ಷ ಸುವರ್ಣ, ಮಹಾಬಲ ರೈ ಉಪಸ್ಥಿತರಿದ್ದರು. ಕೃಷ್ಣ ಪ್ರಸಾದ್ ಆಳ್ವ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಮೌನ ಪ್ರಾರ್ಥನೆ
ಕಂಬಳ ಕೋಣಗಳ ಮೂಲಕ ಕಂಬಳ ಕೂಟಕ್ಕೆ ಹುರುಪನ್ನು ತುಂಬುತ್ತಿದ್ದು, ಇತ್ತೀಚೆಗೆ ನಿಧನ ಹೊಂದಿದ ವಿನು ವಿಶ್ವನಾಥ ಶೆಟ್ಟಿ ಅವರಿಗೆ ಪುತ್ತೂರು ಕಂಬಳ ಸಮಿತಿ ವತಿಯಿಂದ ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.