ಮಹಾಯೋಜನೆ ಕರಡು ಪ್ರತಿಗೆ ಅನುಮೋದನೆ
Team Udayavani, Dec 30, 2018, 8:29 AM IST
ಸುಳ್ಯ : ಮಹಾಯೋಜನೆ ವರದಿಯಲ್ಲಿ ಕೆಲವು ಬದಲಾವಣೆಗೆ ಸದಸ್ಯರು ಸೂಚಿಸಿದ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಮಹಾ ಯೋಜನೆ ಕರಡು ಪ್ರತಿಗೆ ಸುಳ್ಯ ನಗರ ಪಂಚಾಯತ್ ವಿಶೇಷ ಸಾಮಾನ್ಯ ಸಭೆ ಅನುಮೋದನೆ ನೀಡಿದೆ. ನಗರ ಪಂಚಾಯತ್ಗೆ ಸಂಬಂಧಿಸಿದ ಮಹಾಯೋಜನೆಯ ನಕಾಶೆ ಮತ್ತು ವರದಿಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ನ.ಪಂ. ವಿಶೇಷ ಸಾಮಾನ್ಯ ಸಭೆ ಅಧ್ಯಕ್ಷೆ ಶೀಲಾವತಿ ಅವರ ಅಧ್ಯಕ್ಷತೆಯಲ್ಲಿ ನ.ಪಂ. ಸಭಾಂಗಣದಲ್ಲಿ ಶನಿವಾರ ನಡೆಯಿತು.
ತಾತ್ಕಾಲಿಕ ಪ್ರತಿಯನ್ನು ಸರಕಾರಕ್ಕೆ ಕಳುಹಿಸುವ ಮೊದಲು ವರದಿಯ ಬದಲಾವಣೆ ಬಗ್ಗೆ ಸದಸ್ಯರು ಉಲ್ಲೇಖೀಸಿದ ಅಂಶಗಳನ್ನು ಅದರಲ್ಲಿ ದಾಖಲಿಸಿಕೊಳ್ಳಬೇಕು. ಪೂರ್ಣ ಪ್ರಮಾಣದಲ್ಲಿ ಜಾರಿಗೆ ಮೊದಲು ಸಾರ್ವಜನಿಕರ, ಸಂಘ ಸಂಸ್ಥೆಗಳ ಸಭೆ ಕರೆದು ಅವರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಿ ಅಭಿಪ್ರಾಯ ಪಡೆದುಕೊಳ್ಳಬೇಕು. ಅನಂತರವರಷ್ಟೇ ಮಹಾಯೋಜನೆ ಅನುಷ್ಠಾನದ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ನ.ಪಂ. ಸದಸ್ಯರಾದ ಮುಸ್ತಾಪ ಕೆ.ಎಂ., ಎನ್.ಎ. ರಾಮಚಂದ್ರ, ಉಮ್ಮರ್ ಕೆ.ಎಸ್., ಗಿರೀಶ್ ಕಲ್ಲಗದ್ದೆ ಅವರು ಸಲಹೆ ನೀಡಿದರು.
ಆಕ್ಷೇಪಣೆಗೆ 60 ದಿನ ಕಾಲಾವಕಾಶ
ಮಹಾಯೋಜನೆಗೆ ಸಂಬಂಧಿಸಿ ನಗರ ಯೋಜಕ ಉಬೈದುಲ್ಲಾ, ಎಂಜಿನಿಯರ್ ಶಿವಕುಮಾರ್ ಮಾಹಿತಿ ನೀಡಿ, ಈಗ ಕರಡು ಪ್ರತಿಗಷ್ಟೆ ಅನುಮೋದನೆ ನೀಡುವುದು. ಇದು ಅಂತಿಮ ಅಲ್ಲ. ಕರಡು ಪ್ರತಿ ಪರಿಶೀಲನೆ ಆಗಿ 60 ದಿನಗಳ ಕಾಲ ಸಾರ್ವಜನಿಕರು ಆಕ್ಷೇಪಣೆ ದಾಖಲಿಸಲು ಅವಕಾಶ ಇದೆ. ಆ ವೇಳೆ ವರದಿಯಲ್ಲಿ ಸೇರಿಸಲು ಬಾಕಿ ಇರುವ, ಸೇರಿಸಿದ್ದನ್ನು ಕೈ ಬಿಡುವ ಬಗ್ಗೆ ಅಭಿಪ್ರಾಯ ಬಂದಲ್ಲಿ ಪರಿಗಣಿಸಲಾಗುವುದು. ಅನಂತರ ಅಂತಿಮ ವರದಿ ಸರಕಾರಕ್ಕೆ ಸಲ್ಲಿಕೆಯಾಗಿ ಅನುಷ್ಠಾನವಾಗುತ್ತದೆ ಎಂದರು.
ಐದು ವಾರ್ಡ್ಗೊಂದು ಸಭೆ
ಮಹಾಯೋಜನೆ ವರದಿಯ ಬಗ್ಗೆ ಐದು ವಾರ್ಡ್ ಜತೆ ಸೇರಿಸಿ ಸಾರ್ವಜನಿಕರ ಉಪಸ್ಥಿತಿಯಲ್ಲಿ ಸಭೆ ನಡೆಸಬೇಕು. ಅಲ್ಲಿ ಸಮರ್ಪಕ ಮಾಹಿತಿ ನೀಡಿ, ಜನರ ಅಭಿಪ್ರಾಯ ಆಲಿಸಬೇಕು. ಇದು 18 ಸದಸ್ಯರ ತೀರ್ಮಾನ ಎಂದೆನಿಸಬಾರದು. ನಗರದ ಎಲ್ಲರ ಅಭಿಮತದಂತೆ ಮಹಾಯೋಜನೆ ಅನುಷ್ಠಾನ ನಿರ್ಧಾರ ಆಗಲಿ ಎಂದು ಸದಸ್ಯರಾದ ಉಮ್ಮರ್, ಎನ್.ಎ. ರಾಮಚಂದ್ರ, ಮುಸ್ತಾಫ, ಪ್ರೇಮಾ ಟೀಚರ್ ಹೇಳಿದರು. ಇದಕ್ಕೆ ನಗರ ಯೋಜಕರು ಪ್ರತಿಕ್ರಿಯಿಸಿ, ಆಕ್ಷೇಪಣ ಅವಧಿಯಲ್ಲಿ ಸಭೆ ನಡೆಸಿ ಜನರ ಅಭಿಪ್ರಾಯ ಪಡೆದು ಅದರಂತೆ ವರದಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
2013ರ ಮೊದಲು ಕನ್ವರ್ಷನ್ ಆದ ಜಮೀನಿಗೆ ವಿನಾಯಿತಿ
ಮಹಾಯೋಜನೆ ಜಾರಿಗೆ ಮೊದಲು ಕನ್ವರ್ಷನ್ ಆದ ಜಮೀನುಗಳಿಗೆ ಸೂಡಾ ನಿಯಮ ಅನ್ವಯ ಆಗಬಾರದು ಎಂದು ಸದಸ್ಯ ಮುಸ್ತಾಫ ಹೇಳಿದರು. ಉತ್ತರಿಸಿದ ನಗರ ಯೋಜಕ ಉಬೈದುಲ್ಲಾ, 2013ರ ಮೊದಲು ಕನ್ವರ್ಷನ್ ಆಗಿ ನೋಂದಣಿ ಆಗಿರುವ ಜಮೀನುಗಳಿಗೆ ಮಂಗಳೂರು ಮಾದರಿಯಲ್ಲಿ ವಿನಾಯಿತಿ ನೀಡುವ ಅವಕಾಶ ಇದೆ. ಅವರು ಜಾಗ ನೀಡುವ ಬದಲು ಶೇ. 15ರಷ್ಟು ಹಣ ಪಾವತಿ ಮಾಡಿದರೆ ಸಾಕಾಗುತ್ತದೆ ಹಾಗೂ ಆ ಜಮೀನಿನ ಹಕ್ಕುದಾರರ ಒಳಗೆ ಪಾಲುಪಟ್ಟಿ ಆಗುವ ಸಂದರ್ಭದಲ್ಲಿಯೂ ಈ ವಿನಾಯಿತಿ ಇರಲಿದೆ. ಆದರೆ ಬೇರೆಯೊಬ್ಬರಿಗೆ ಮಾರಾಟ ಮಾಡುವುದಿದ್ದಲ್ಲಿ ಮಹಾಯೋಜನೆ ನಿಯಮ ಅನ್ವಯವಾಗುತ್ತದೆ ಎಂದರು. ಉಪಾಧ್ಯಕ್ಷೆ ಹರಿಣಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್, ಮತ್ತಡಿ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಪ್ರಥಮ ಡ್ರೋನ್ ಸರ್ವೆ
ರಾಜ್ಯದಲ್ಲಿ ಪ್ರಥಮ ಬಾರಿಗೆ ಸುಳ್ಯದ ನಗರದಲ್ಲಿ ಡ್ರೋನ್ ಆಧಾರಿತ ಸರ್ವೆ ನಡೆಸಲಾಗಿದೆ. ನ.ಪಂ. ಎಂಜಿನಿಯರ್ಗಳ ಉಪಸ್ಥಿತಿಯಲ್ಲಿ ಫಾರೆಸ್ಟ್, ಜನವಸತಿ, ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ. ಮಹಾಯೋಜನೆ ಜಾರಿಯಿಂದ ಅನುದಾನ ಹೆಚ್ಚಳ, ನಗರದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಉಬೈದುಲ್ಲಾ ಅವರು ಸದಸ್ಯರಲ್ಲಿ ವಿನಂತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.