ವಿನಯ್ “ಅನಂತ’ನಿಗೆ ಕಿಚ್ಚ ಸುದೀಪ್ ಸಾಥ್
Team Udayavani, Dec 30, 2018, 11:14 AM IST
ಸುಧೀರ್ ಶಾನುಭೋಗ್ ನಿರ್ದೇಶನದ ರಾಯಲ್ ಸ್ಟಾರ್ ವಿನಯ್ ರಾಜ್ಕುಮಾರ್ ಅಭಿನಯದ “ಅನಂತು V/S ನುಸ್ರತ್’ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ವಿನಯ್ ರಾಜ್ಕುಮಾರ್ ಕರಿ ಕೋಟು ಧರಿಸಿ ವಕೀಲನ ಅವತಾರದಲ್ಲಿ ಕೋರ್ಟ್ನಲ್ಲಿ ನ್ಯಾಯದ ಪಾಠದ ಜೊತೆಗೆ ಪ್ರೀತಿ ಪಾಠವನ್ನು ಆರಂಭಿಸಿದ್ದಾರೆ. ವಕೀಲ ಅನಂತ ಕೃಷ್ಣ ಎಂಬ ಪಾತ್ರದಲ್ಲಿ ಅಭಿನಯಿಸಿರುವ ವಿನಯ್ಗೆ ಲತಾ ಹೆಗ್ಡೆ ನಾಯಕಿಯಾಗಿದ್ದಾರೆ.
ವಿನಯ್ ಇಲ್ಲಿ ಸಾಮಾನ್ಯ ವಕೀಲನಾದರೆ ಲತಾ ಹೆಗ್ಡೆ ಜಡ್ಜ್ ಪಾತ್ರಧಾರಿ ನುಸ್ರತ್ ಫಾತಿಮಾ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾಸ್ಯ ಮಿಶ್ರಿತ ನವಿರಾದ ಪ್ರೇಮಕಥೆಯಾಗಿದ್ದು, ಜಡ್ಜ್ಗೆ ಮನಸೋತಿರುವ ವಕೀಲನ ಕಥೆ ಚಿತ್ರದಲ್ಲಿದೆ. ಇನ್ನು ಸ್ಯಾಂಡಲ್ವುಡ್ನ ಸ್ಟಾರ್ ಗಳೂ ಈಗಾಗಲೇ ಚಿತ್ರಕ್ಕೆ ಶುಭಕೋರಿದ್ದು, ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ.
ಯೆಸ್, “ಅನಂತು V/S ನುಸ್ರತ್’ ಚಿತ್ರಕ್ಕೆ ಈಗಾಗಲೇ ಶುಭಾಶಯಗಳ ಮಹಾಪೂರ ಹರಿದುಬರುತ್ತಿದ್ದು, ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಟ್ವೀಟರ್ ಖಾತೆಯಲ್ಲಿ “ಸಿನಿಮಾ ಕುರಿತು ಒಳ್ಳೆಯ ವಿಮರ್ಶೆ ಕೇಳಿ ಬರುತ್ತಿದೆ. ಹೀಗಾಗಿ ವಿನಯ್ ಮತ್ತು ಚಿತ್ರತಂಡವರಿಗೆ ಶುಭಾಶಯ. ಪರಿಶ್ರಮಕ್ಕೆ ತಕ್ಕದಾದ ಫಲ ಸಿಕ್ಕಿದೆ’ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
World Test Championship: ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ
Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.