ಪರದೇಶದ ಸವಿರುಚಿ


Team Udayavani, Dec 31, 2018, 12:30 AM IST

2.jpg

ಈ ಚಿತ್ತಾಕರ್ಷಕ ಹಣ್ಣಿನ ಮೂಲ, ಪಶ್ಚಿಮ ಆಫ್ರಿಕ. ಆದರೆ ಅದೀಗ ಈ ನೆಲದ ಹಣ್ಣು ಎಂಬಷ್ಟು ಸಹಜವಾಗಿ ಬೆಳ್ತಂಗಡಿ ತಾಲೂಕಿನ ಬಳಂಜದ ಅನಿಲಕುಮಾರರ ತೋಟದಲ್ಲೂ ಬೆಳೆಯುತ್ತಿದೆ. ಪುಟ್ಟ ಗಿಡದ ತುಂಬ ಗೆಜ್ಜೆ ಕಟ್ಟಿದಂತೆ ಕೆಂಪು ಕೆಂಪಾದ ಹಣ್ಣುಗಳು ತುಂಬಿಕೊಂಡಿವೆ. ಪರದೇಶದ ಅಪರೂಪದ ಈ ಹಣ್ಣು ತನ್ನ ವಿಸ್ಮಯದ ಗುಣದಿಂದ ಎಲ್ಲರ ನಾಲಿಗೆಗೆ ತಲುಪಿ ಅಚ್ಚರಿಯ ನೋಟ ಬೀರುವಂತೆ ಮಾಡಿದೆ.

    ಸಿ ಜೀವಸತ್ವ ವಿಪುಲವಾಗಿರುವ ಈ ಹಣ್ಣು ಕಿತ್ತಳೆ ಅಥವಾ ನಿಂಬೆಯ ಪರಿಮಳ ಹೊಂದಿದೆ. ವಿಶೇಷವೆಂದರೆ ಹಣ್ಣು ತಿನ್ನುವಾಗ ಸಿಹಿಯಿಲ್ಲ. ಇದರಲ್ಲಿ ಕಡಮೆ ಸಕ್ಕರೆಯ ಅಂಶವಿದೆ. ಇದನ್ನು ಪವಾಡದ ಹಣ್ಣು ಎಂದು ಕರೆಯೋಣ. ಅದರ ಗುಣದ ಪರಿಚಯವಾಗಲು ಹೆಚ್ಚು ಹೊತ್ತು ಬೇಡ. ಇದರ ರುಚಿಮೊಗ್ಗುಗಳು ನಾಲಿಗೆಗೆ ಅಂಟಿಕೊಳ್ಳುತ್ತವೆ.  ಈ ಹಣ್ಣು ತಿಂದ ಮೇಲೆ  ಹುಣಸೆಹಣ್ಣನ್ನೋ ಇಡೀ ಲಿಂಬೆಹಣ್ಣನ್ನೋ ತಿಂದರೆ ಅವುಗಳ ಸಹಜವಾದ ರುಚಿ ನಾಲಿಗೆಯಲ್ಲಿ ಆಗುವುದೇ ಇಲ್ಲ. ಸಕ್ಕರೆಯಲ್ಲಿ ಹೋಳುಗಳನ್ನು ಅದ್ದಿರುವ ಹಾಗೆ ಹುಳಿಯ ಬದಲಾಗಿ ಬಾಯ್ತುಂಬ ಸಿಹಿಯೋ ಸಿಹಿ! ತುಂಬ ಹೊತ್ತು, ಒಂದೆರಡು ತಾಸುಗಳ ಕಾಲ ಆ ರುಚಿ ಹಾಗೆಯೇ ಉಳಿಯುತ್ತದೆ. ಅದಕ್ಕೇ ಹೇಳಿದ್ದು ಮಿರಾಕಲ್‌ ಅಂದರೆ ಪವಾಡ!  ಯಾವುದೇ ಹುಳಿ ಹಣ್ಣನ್ನು ಇಡೀ ತಿಂದು ಮುಗಿಸಿದರೂ ಬಾಯಿ ಸಿಹಿಯಾಗಿಯೇ ಇರುತ್ತದೆ.

    ವೈಜ್ಞಾನಿಕವಾಗಿ ಸಿನ್ಸೆಪಲಂ ಡ್ಯುಸಿಫಿಕಂ ಎಂದು ಹೆಸರಿರುವ ಮಿರಾಕಲ್‌ ಕಡಮೆ ಕ್ಯಾಲೊರಿಗಳನ್ನು ಹೊಂದಿರುವ ಕಾರಣ ಮಧುಮೇಹ ರೋಗಿಗಳಿಗೂ ಅಪಥ್ಯವಲ್ಲ ಎನ್ನಲಾಗಿದೆ. ಅದಕ್ಕೆ ಕ್ಯಾನ್ಸರ್‌ ನಿರೋಧಕ ಗುಣವೂ ಇದೆಯಂತೆ. ಇದರಿಂದ ದೇಶಗಳಲ್ಲಿ ಕೇಕ್‌ ಮುಂತಾದ ಸಿಹಿಗಳನ್ನು ತಯಾರಿಸುತ್ತಾರೆ.

    ಆಮ್ಲಿಯವಲ್ಲದ, ಫ‌ಲವತ್ತಾದ ಎಲ್ಲ ಮಣ್ಣಿನಲ್ಲಿಯೂ ಮಿರಾಕಲ್‌ ಸುಲಭವಾಗಿ ಬೆಳೆಯುತ್ತದೆ. ಆದರೆ ಮೂವತ್ತು ಡಿಗ್ರಿಗಿಂತ ಹೆಚ್ಚಿನ ತಾಪ ಸದಾ ಕಾಲವಿರುವ ಉತ್ತರ ಕರ್ನಾಟಕದ ಊರುಗಳಲ್ಲಿ ಈ ಹಣ್ಣಿನ ಗಿಡವನ್ನು ಬದುಕಿಸುವುದು ಸುಲಭವಲ್ಲ. ಗಿಡದ ಬುಡ ಒಣಗದೆ ಬುಡ ತಂಪಾಗಿರಬೇಕು. ಹಾಗೆಂದು ಮಳೆಗಾಲದಲ್ಲಿ ಬುಡದಲ್ಲಿ ನೀರು ನಿಲ್ಲಬಾರದು. ಬೀಜದಿಂದ ವಂಶಾಭಿವೃದ್ಧಿ ಸುಲಭ. ಮೂರು ವರ್ಷಗಳಲ್ಲಿ ಹಣ್ಣುಗಳಾಗಲು ಆರಂಭವಾಗುತ್ತದೆಂದು ವಿವರಿಸುತ್ತಾರೆ ಅನಿಲ ಬಳಂಜ.

ಪ,ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

8

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5

Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್‌

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

6-

Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.