ಪ್ರಕೃತಿಯಲ್ಲಿ  ಲೀನವಾದ “ಮಧುಕರ’ 


Team Udayavani, Dec 31, 2018, 12:30 AM IST

36.jpg

ಕೋಟ: ಅನಾರೋಗ್ಯದಿಂದ ನಿಧನ ಹೊಂದಿದ ದಕ್ಷ ಐಪಿಎಸ್‌ ಅಧಿಕಾರಿ ಡಾ| ಮಧುಕರ ಶೆಟ್ಟಿಯವರ ಅಂತ್ಯಕ್ರಿಯೆ ಹುಟ್ಟೂರು ಕುಂದಾಪುರ ತಾಲೂಕಿನ ಯಡಾಡಿ- ಮತ್ಯಾಡಿಯಲ್ಲಿ ರವಿವಾರ ಸಕಲ ಸರಕಾರಿ ಗೌರವಗಳೊಂದಿಗೆ ಕುಟುಂಬ ಸದಸ್ಯರು, ಅಧಿಕಾರಿಗಳು, ಜನ ಪ್ರತಿನಿಧಿಗಳು, ಊರಿನವರ ಸಮ್ಮುಖ ನೆರವೇರಿತು.

ಮೃತ ದೇಹವನ್ನು ಶನಿವಾರ ನಡುರಾತ್ರಿ ಮನೆಗೆ ತರಲಾಗಿತ್ತು ಹಾಗೂ ಆಗಿನಿಂದಲೇ ಅಂತಿಮ ದರ್ಶನ ಆರಂಭಗೊಂಡಿತ್ತು. ರವಿವಾರ ಬೆಳಗ್ಗೆ ಕೂಡ ಅಂತಿಮ ದರ್ಶನ ಮುಂದುವರಿದು, ಅನಂತರ ಗೌರವಾರ್ಪಣೆಯ ಸಲುವಾಗಿ ಮನೆಯ ಹೊರಗಡೆ ಮೃತದೇಹವನ್ನು ಇರಿಸಲಾಯಿತು. ರಾಷ್ಟ್ರಧ್ವಜವನ್ನು ಹೊದೆಸಿ, ಪುಷ್ಪಗುಚ್ಛ ಸಲ್ಲಿಸಿ ಗೌರವಿಸಲಾಯಿತು. ಹೈದರಾಬಾದ್‌ನಿಂದ ಆಗಮಿಸಿದ್ದ  ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಡಿಐಜಿ ಡೋಲೆ ಬರ್ಮನ್‌ ಅವರು ಗೌರವ ವಂದನೆ ಸ್ವೀಕರಿಸಿದರು ಹಾಗೂ ಅಲ್ಲಿನ ಡಿಜಿಪಿ ಅಮೃತ್‌ದಾಸ್‌ ಮತ್ತು ತಂಡದವರು ಮಧುಕರ ಶೆಟ್ಟಿಯವರ ಸಮವಸ್ತ್ರವನ್ನು ಕರ್ನಾಟಕ ಪೊಲೀಸ್‌ಗೆ ಹಸ್ತಾಂತರಿಸಿದರು. ಅನಂತರ ಮೂರು ಸುತ್ತು ಕುಶಾಲುತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. 

ದುಃಖತಪ್ತ ಪತ್ನಿ-ಪುತ್ರಿಯಿಂದ ಪರಸ್ಪರ ಸಾಂತ್ವನದ ಪ್ರಯತ್ನ.

ಕರ್ನಾಟಕ ಪೊಲೀಸ್‌ ಪರವಾಗಿ ಎಡಿಜಿಪಿ ಪ್ರತಾಪ್‌ ರೆಡ್ಡಿ, ಐಜಿಪಿ ಎಸ್‌.ಪಿ. ಭೂಷಣ್‌ ಬೋರಸೆ, ಲಾಬೂರಾಮ್‌, ಐಜಿಪಿ ಅರುಣ್‌ ಚಕ್ರವರ್ತಿ ಹಾಗೂ ಉನ್ನತ ಅಧಿಕಾರಿಗಳಾದ ವಿನಾಯಕ ಪಾಟೇಲ್‌, ಡಾ| ರವಿ ಕಾಂತೇಗೌಡ, ಮಧುಸೂದನ್‌ ಮುಂತಾದವರು ಅಂತಿಮ ಗೌರವ ವಂದನೆ ಸಲ್ಲಿಸಿದರು. ಉಡುಪಿ ಎಸ್‌.ಪಿ. ಲಕ್ಷ್ಮಣ ಬ. ನಿಂಬರಗಿ ನೇತೃತ್ವ ವಹಿಸಿದ್ದರು. ಕೊನೆಯಲ್ಲಿ ರಾಷ್ಟ್ರಧ್ವಜವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. 

ಗಣ್ಯರಿಂದ ಅಂತಿಮ ನಮನ 
ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮತ್ತು ಸರಕಾರದ ಪರವಾಗಿ ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿ, ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ, ಕುಂದಾಪುರ ತಹಶೀಲ್ದಾರ್‌ ತಿಪ್ಪೇಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫ‌ೂರ್‌ ಅಂತಿಮ ನಮನ ಸಲ್ಲಿಸಿದರು. 

ಕೃಷಿಯಲ್ಲಿಯೂ ಆಸಕ್ತ
ವಡ್ಡರ್ಸೆ ರಘುರಾಮ ಶೆಟ್ಟಿಯವರು ಸುಮಾರು ಮೂರು ದಶಕಗಳ ಹಿಂದೆ ಯಡಾಡಿಯಲ್ಲಿ ಮನೆ ನಿರ್ಮಿಸಿ ನೆಲೆಸಿದ್ದರು. ಇದೇ ಜಾಗದಲ್ಲಿ ಮಧುಕರ ಶೆಟ್ಟಿಯವರು ಹುಲುಸಾದ ತೋಟವನ್ನು ಬೆಳೆಸಿರುವುದು ತಂದೆಯಂತೆ ಮಗನಿಗೂ ಕೃಷಿ, ತೋಟಗಾರಿಕೆಯಲ್ಲಿ ಆಸಕ್ತಿ ಇದ್ದುದಕ್ಕೆ ಸಾಕ್ಷಿಯಂತಿದೆ. ಇದೇ ವಠಾರದಲ್ಲಿ ಅಂತಿಮ ಸಂಸ್ಕಾರವೂ ನಡೆಯಿತು. 

ಉನ್ನತ ಅಧಿಕಾರಿಗಳು, ಪೊಲೀಸರು, ಕುಟುಂಬಿಕರ ಕಂಬನಿ 
ಅಂತಿಮ ನಮನದ ವೇಳೆ ಬಹುತೇಕ ಉನ್ನತ ಅಧಿಕಾರಿಗಳು, ಶೆಟ್ಟರ ಸಹಪಾಠಿಗಳು ಹಾಗೂ ಅವರಿಂದ ತರಬೇತಿ ಪಡೆದವರು ಕಣ್ಣೀರು ಮಿಡಿಯುತ್ತಿದ್ದರು. ಪೊಲೀಸ್‌ ಸಿಬಂದಿ ಮಾತ್ರವಲ್ಲದೆ ಹಿರಿಯ ಮತ್ತು ಉನ್ನತ ಅಧಿಕಾರಿಗಳು ಕೂಡ ತಮ್ಮ ಮನೆಯವರನ್ನೇ ಕಳೆದುಕೊಂಡಿರುವಂತೆ ಮುಂದೆ ನಿಂತು ಅಂತಿಮ ವಿಧಿಗಳಿಗೆ ಸಹಕರಿಸಿದರು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಮಧುಕರ್‌ ಶೆಟ್ಟಿಯವರ ಬಾಲ್ಯ ಸಹಪಾಠಿಯೂ ಆಗಿರುವ ಸಚಿವ ಖಾದರ್‌ ಸಹಿತ ಹಲವು ಗಣ್ಯರು ಕಂಬನಿ ಮಿಡಿದರು. 

ಸಾಂತ್ವನವನ್ನು ಒತ್ತರಿಸಿ ಬಂದ ದುಃಖ
ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಡಿಐಜಿ ಡೋಲೆ ಬರ್ಮನ್‌ ಅವರು ಮಧುಕರ್‌ ಶೆಟ್ಟಿಯವರ ಪತ್ನಿ ಸುವರ್ಣಾ ಅವರನ್ನು ತಬ್ಬಿಕೊಂಡು ಸಾಂತ್ವನ ಹೇಳಲು ಮುಂದಾದರೂ ತಾನೇ ದುಃಖ ತಡೆದುಕೊಳ್ಳಲಾಗದೆ ಬಿಕ್ಕಳಿಸಿದರು. ಕೊನೆಗೆ ಸುವರ್ಣಾ ಅವರೇ ಸಾವರಿಸಿಕೊಂಡು ಬರ್ಮನ್‌ ಅವರನ್ನು ಸಮಾಧಾನಿಸಬೇಕಾಯಿತು. ಪೊಲೀಸ್‌ ತರಬೇತಿ ಕೇಂದ್ರದ ನಿರ್ದೇಶಕರಾಗಿ ಅಲ್ಪ ಅವಧಿಯಲ್ಲಿಯೇ ಶೆಟ್ಟಿಯವರು ಅಧಿಕಾರಿಗಳು- ಸಿಬಂದಿಯ ಉನ್ನತ ಪ್ರೀತಿಗೆ ಪಾತ್ರರಾಗಿದ್ದರು ಎಂಬುದಕ್ಕೆ ಈ ಸನ್ನಿವೇಶ ಸಾಕ್ಷಿಯಂತಿತ್ತು, ನೋಡುಗರ ದುಃಖಾಶ್ರುಗಳಿಗೂ ಕಾರಣವಾಯಿತು. 

ಮೂರು ಸುತ್ತು ಕುಶಾಲುತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. 

ಅಪ್ಪ ಬೇಕು ಎಂದು ಸಮ್ಯಾ ಆಕ್ರಂದನ
ಅಂತಿಮ ವಿಧಿವಿಧಾನದ ಕೊನೆಯಲ್ಲಿ ಸಹೋದರರು ಮತ್ತು ಸಂಬಂಧಿಗಳು ಬಿಕ್ಕಿಬಿಕ್ಕಿ ಅತ್ತರು ಹಾಗೂ “ಅಪ್ಪ ಬೇಕು’ ಎಂದು ಅಳುತ್ತಿದ್ದ ಮಗಳು ಸಮ್ಯಾಳನ್ನು ತಾಯಿ ಸುವರ್ಣಾ ಎದೆಗಪ್ಪಿ ಸಮಾಧಾನಿಸುತ್ತಿದ್ದ ದೃಶ್ಯ ನೆರೆದವರ ಕಣ್ಣುಗಳಲ್ಲಿ ನೀರು ತರಿಸಿತು.  

 “ಗೋವಿಂದ’ ನಾಮಸ್ಮರಣೆ, 12.15ಕ್ಕೆ ಅಗ್ನಿ ಸ್ಪರ್ಶ
 ಸಕಲ ಸರಕಾರಿ ಗೌರವಗಳ ಅನಂತರ ಹಿಂದೂ ಸಂಸ್ಕಾರದಂತೆ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು. ಮನೆಯ ಎದುರಿನ ತೋಟದಲ್ಲಿ ತಂದೆ, ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ್‌ ಶೆಟ್ಟಿ ಹಾಗೂ ತಾಯಿ ಪ್ರಪುಲ್ಲಾ ರೈ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನೆರವೇರಿತು. ಕಳೇಬರವನ್ನು “ಗೋವಿಂದ, ಗೋವಿಂದ’ ನಾಮಸ್ಮರಣೆಯೊಂದಿಗೆ ಹೊತ್ತೂಯ್ದು ಮಧ್ಯಾಹ್ನ 12.15ಕ್ಕೆ ಅಂತಿಮ ಸಂಸ್ಕಾರ ನಡೆಸಲಾಯಿತು. ಮಧುಕರ ಶೆಟ್ಟಿಯವರ ಸಹೋದರರಾದ ದುಬೈ ಉದ್ಯಮಿ ಮುರಳೀಧರ ಶೆಟ್ಟಿ, ಅಮೆರಿಕದಲ್ಲಿ ಎಂಜಿನಿಯರ್‌ ಆಗಿರುವ ಸುಧಾಕರ ಶೆಟ್ಟಿಯವರು ಮಕ್ಕಳೊಂದಿಗೆ ಸೇರಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.  

“ಗುಪ್ತ ಶೆಟ್ಟಿ’ ಹಳ್ಳಿಗರಿಂದ ಅಂತಿಮ ನಮನ 
ಮಧುಕರ ಶೆಟ್ಟಿ ಚಿಕ್ಕಮಗಳೂರು ಜಿಲ್ಲೆಯ ಎಸ್ಪಿಯಾಗಿದ್ದಾಗ ಯಲಗುಡಿಗೆ ಗ್ರಾಮದ ಬಳಿ ಅಂದಿನ ಅಲ್ಲಿನ ಜಿಲ್ಲಾಧಿಕಾರಿ ಹರ್ಷ ಗುಪ್ತ ಜತೆ ಸೇರಿ ಭೂಮಾಲಕರೊಬ್ಬರ ಒತ್ತುವರಿ ತೆರವುಗೊಳಿಸಿ ಮೂಲನಿವಾಸಿಗಳಿಗೆ ಜಮೀನು ಬಿಡಿಸಿ ಕೊಟ್ಟಿದ್ದರು. ಅಲ್ಲಿನ ಜನರು ಮಧುಕರ  ಶೆಟ್ಟಿ -ಹರ್ಷ ಗುಪ್ತ ಮೇಲಿನ ಪ್ರೀತಿ-ಕೃತಜ್ಞತೆಗಳಿಂದ ಊರಿಗೆ ಗುಪ್ತ ಹಾಗೂ ಶೆಟ್ಟಿ ಸೇರಿಸಿ “ಗುಪ್ತ ಶೆಟ್ಟಿ ಹಳ್ಳಿ’ ಎಂದೇ ನಾಮಕರಣ ಮಾಡಿದ್ದರು. ಮಧುಕರ ಶೆಟ್ಟಿ ನಿಧನ ವಾರ್ತೆ ತಿಳಿದು ಗುಪ್ತಶೆಟ್ಟಿ ಹಳ್ಳಿಯ ಹಲವಾರು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. 

ದಕ್ಷತೆ, ಪ್ರಾಮಾಣಿಕತೆಯಿಂದ ಜನಾಭಿಮಾನ
ಬಹಳ ಸಮಯ ಊರಿನಿಂದ ಬಲುದೂರ ಇದ್ದವರಾದರೂ ಮಧುಕರ್‌ ಶೆಟ್ಟಿಯವರ ಪ್ರಾಮಾಣಿಕತೆ, ದಕ್ಷತೆಗಳು ಆಸುಪಾಸಿನ ಹಲವು ಹಳ್ಳಿಯ ಜನರ ಪ್ರೀತ್ಯಭಿಮಾನಕ್ಕೆ ಪಾತ್ರವಾಗಿದ್ದವು. ಎಂಬುದಕ್ಕೆ ಸಾಕ್ಷಿಯಾಗಿ ಸಾವಿರಾರು ಜನರು ಆಗಮಿಸಿ ಗೌರವ ಸಲ್ಲಿಸಿದರು. ಊರಿನ ಮತ್ತು ದೇಶದ ವಿವಿಧ ಭಾಗಗಳಿಂದ ನೂರಾರು ಮಂದಿ ಅಭಿಮಾನಿಗಳು ಆಗಮಿಸಿದ್ದರು. ಹೀಗಾಗಿ ಮನೆಯ ಸಮೀಪ ಕಿಕ್ಕಿರಿದ ಜನಸಂದಣಿ ಇತ್ತು. ವಾಹನ ಪಾರ್ಕಿಂಗ್‌ ಮತ್ತು ಅಂತಿಮ ದರ್ಶನಕ್ಕೆ ವಿಶೇಷ ಕಾಳಜಿ ವಹಿಸಿ ಪೊಲೀಸರು ವ್ಯವಸ್ಥೆ ಮಾಡಿದ್ದರು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಭದ್ರತೆಗಾಗಿ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಾಗಿತ್ತು.  

ತುಂಬಲಾರದ ನಷ್ಟ 
ಮಧುಕರ ಶೆಟ್ಟರು ಕೆಲವೇ ವರ್ಷಗಳಲ್ಲಿ ಇನ್ನೂ ಉನ್ನತವಾದ ಹುದ್ದೆಗೇರುತ್ತಿದ್ದರು. ಅವರಿಗೆ ಬಡವರು ಮತ್ತು ಸಮಾಜದಲ್ಲಿ ಹಿಂದುಳಿದವರ ಕುರಿತು ವಿಶೇಷ ಕಾಳಜಿ ಇದ್ದುದರಿಂದ ಆ ವರ್ಗದವರಿಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದರು ಹಾಗೂ ಭ್ರಷ್ಟಾಚಾರವನ್ನು ಮಟ್ಟಹಾಕಲು ಪ್ರಯತ್ನಿಸುತ್ತಿದ್ದರು. ಆದರೆ ಅವರನ್ನು ಕಳೆದುಕೊಂಡಿರುವುದು ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎನ್ನುವ ಮಾತು ಅಭಿಮಾನಿಗಳಿಂದ ಕೇಳಿ ಬರುತ್ತಿತ್ತು. ಮಂಗಳೂರಿನ ಡಾ| ರೋಶನ್‌ ರೈ, ಮಣಿಪಾಲ ಎಂಐಟಿ ಪ್ರಾಧ್ಯಾಪಕ ಪ್ರೊ|ಬಾಲಕೃಷ್ಣ ಮುಧ್ದೋಡಿ ಸಹಿತ ಶೆಟ್ಟಿಯವರ ಒಡನಾಡಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಗೌರವ ಸಲ್ಲಿಸಿದರು.

ತಂದೆಗೆ ತಕ್ಕ ಮಗ
ಮಧುಕರ ಶೆಟ್ಟಿಯವರು ವಡ್ಡರ್ಸೆ ರಘುರಾಮ ಶೆಟ್ಟರಿಗೆ ತಕ್ಕ ಮಗ ಎನ್ನುವುದನ್ನು ತನ್ನ ಸೇವೆಯ ಮೂಲಕ ನಿರೂಪಿಸಿದ್ದರು. ಅವರ ನಿಷ್ಠುರವಾದಿತ್ವ ಎಲ್ಲ ಅಧಿಕಾರಿಗಳಿಗೂ ಪ್ರೇರಣೆ ಹಾಗೂ ಇತಿಹಾಸದಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ. 
 -ಕೋಟ ಶ್ರೀನಿವಾಸ ಪೂಜಾರಿ, ವಿಪಕ್ಷ ನಾಯಕರು 

ಶೆಟ್ಟರ ಹೆಸರಲ್ಲಿ  ತರಬೇತಿ ಶಾಲೆ ಕುರಿತು ಪರಿಶೀಲನೆ 
ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಾಗ ಮಧುಕರ ಶೆಟ್ಟಿಯವರು ಹಾಗೂ ನಾನು ಸಹಪಾಠಿಗಳಾಗಿದ್ದೆವು. ಅವರೊಬ್ಬ ನಿಷ್ಠಾವಂತ ಪೊಲೀಸ್‌ ಅಧಿಕಾರಿ, ಮುಂದೆ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಈ ದೇಶಕ್ಕೆ ಹಾಗೂ ಜನಸಾಮಾನಸ್ಯರಿಗೆ ಸಾಕಷ್ಟು ಸೇವೆ ಸಲ್ಲಿಸಿದರು. ಇಂದು ಅವರನ್ನು ಕಳೆದುಕೊಂಡಿರುವುದು ದುರಂತ. ಅವರ ಗೌರವಾರ್ಥ ಸ್ಮಾರಕ ನಿರ್ಮಿಸಬೇಕು ಹಾಗೂ ಪೊಲೀಸ್‌ ತರಬೇತಿ ಶಾಲೆಗೆ ಇವರ ಹೆಸರಿಡಬೇಕು ಎನ್ನುವ ಬೇಡಿಕೆ ಇದೆ. ಈ ಕುರಿತು ಸರಕಾರದ ಗಮನಕ್ಕೆ ತಂದು ಪರಿಶೀಲಿಸಲಾಗುವುದು. 
ಯು.ಟಿ. ಖಾದರ್‌, ಸಚಿವರು

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

hejjenu 1

Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.