ಪಾಕಿಸ್ತಾನದಿಂದ ಭದ್ರಾವತಿ ವ್ಯಕ್ತಿಯ ವಾಟ್ಸ್ ಆ್ಯಪ್ ಹ್ಯಾಕ್!
Team Udayavani, Dec 31, 2018, 10:41 AM IST
ಶಿವಮೊಗ್ಗ: ಫೇಸ್‌ಬುಕ್, ಮೊಬೈಲ್, ಎಟಿಎಂ ಕಾರ್ಡ್ ಹ್ಯಾಕ್ ಮಾಡೋದನ್ನು ಈವರೆಗೆ ನೋಡಿದ್ದೇವೆ. ಕೇಳಿದ್ದೇವೆ. ಈ ಸಾಲಿಗೆ ಈಗ ವಾಟ್ಸ್‌ಆ್ಯಪ್ ಕೂಡ ಸೇರ್ಪಡೆಯಾಗಿದೆ. ಜಿಲ್ಲೆಯ ಭದ್ರಾವತಿಯ ವ್ಯಕ್ತಿಯೊಬ್ಬರ ವಾಟ್ಸ್ ಆ್ಯಪ್ ಪಾಕಿಸ್ತಾನದಿಂದ ಹ್ಯಾಕ್ ಮಾಡಿದ್ದು ಬೆಳಕಿಗೆ ಬಂದಿದೆ.
ಹ್ಯಾಕ್ ಆಗಿದ್ದು ಹೇಗೆ? ಭದ್ರಾವತಿಯ ಶಿವಕುಮಾರ್ ಎಂಬುವವರಿಗೆ ಅಪರಿಚಿತ ನಂಬರ್‌ನಿಂದ ಡಿ.24ರಂದು ಕರೆ ಬಂದಿದ್ದು, ಹಿಂದಿಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ ಆಲ್ ಇಂಡಿಯಾ ಲಕ್ಕಿ ಡ್ರಾ ಕಾಂಪಿಟೇಷನ್‌ನಲ್ಲಿ ನಿಮ್ಮ ನಂಬರ್‌ಗೆ 35 ಲಕ್ಷ ರೂ. ಬಹುಮಾನ ಬಂದಿದೆ.
ನಿಮಗೆ ಬಹುಮಾನದ ಹಣ ಕಳುಹಿಸಲಾಗುವುದು ನಿಮ್ಮ ಫೋಟೋ, ಬ್ಯಾಂಕ್ ಅಕೌಂಟ್ ನಂಬರ್ ಕಳುಹಿಸಿ ಎಂದು ತಿಳಿಸಿದ್ದಾರೆ. ಮೊದಲೇ ಬ್ಯಾಂಕ್ ಅಕೌಂಟ್ ಬಗ್ಗೆ ಮಾಹಿತಿ ಇದ್ದ ಶಿವಕುಮಾರ್ ಅಕೌಂಟ್ ನಂಬರ್ ನೀಡಲು ನಿರಾಕರಿಸಿ ಕರೆ ಕಟ್ ಮಾಡಿದ್ದಾರೆ. ತಕ್ಷಣ ಬೇರೆ ನಂಬರ್‌ನಿಂದ
ಕರೆ ಮಾಡಿದ ವ್ಯಕ್ತಿಯೊಬ್ಬ ನಾವು ಸುಳ್ಳು ಹೇಳುತ್ತಿಲ್ಲ. ನಿಮಗೆ ಹಣ ಬಂದಿರುವುದು ನಿಜ ಎಂದು ಮತ್ತೂಮ್ಮೆ ನಂಬಿಸಲು ಪ್ರಯತ್ನಿಸಿದ್ದಾರೆ.
ಅದಕ್ಕೆ ಒಪ್ಪದ ಶಿವಕುಮಾರ್ ಮತ್ತೆ ಕಾಲ್ ಕಟ್ ಮಾಡಿದ್ದಾರೆ. ಮತ್ತೆ ಇನ್ನೊಂದು ನಂಬರ್‌ನಿಂದ ಕರೆ ಬಂದಿದ್ದು ಸರಿ ಅಕೌಂಟ್ ನಂಬರ್ ಕೊಡದಿದ್ದರೂ ಪರವಾಗಿಲ್ಲ. ನಿಮ್ಮ ಮೊಬೈಲ್‌ಗೆ ಒಂದು ಕೋಡ್ ಬರುತ್ತದೆ ಅದನ್ನು ಹೇಳಿ ಎಂದಿದ್ದಾರೆ. ನಂಬರ್ ತಾನೇ ಇದರಿಂದ ಏನಾಗುತ್ತದೆ ಎಂದು ಅಂದಾಜಿಸಿ ನಂಬರ್ ಹೇಳಿ ಕಾಲ್ ಕಟ್ ಮಾಡಿದ್ದಾರೆ. ತಕ್ಷಣ ಅನುಮಾನ ಬಂದು ವಾಟ್ಸಾಪ್ ಅಕೌಂಟ್ ಚೆಕ್ ಮಾಡಿದರೆ ಯಾವುದೇ ಮೆಸೇಜ್ ಬರುತ್ತಿಲ್ಲ, ಹೋಗುತ್ತಿಲ್ಲ. ಅಲ್ಲದೇ 25 ಲಕ್ಷ ಆಫರ್ ಬಗ್ಗೆ ಬಂದಿದ್ದ ನಂಬರ್ ಕೂಡ ಡಿಲೀಟ್ ಆಗಿತ್ತು.
ಪಾಕಿಸ್ತಾನದ ನಂಬರ್: ಅಪರಿಚಿತ ವ್ಯಕ್ತಿಗಳಿಂದ ಕರೆ ಬಂದಿದ್ದ ಎರಡೂ ನಂಬರ್‌ಗಳು ಪಾಕಿಸ್ತಾನದವು. +923417451371 ಹಾಗೂ +92 3438657721 ನಂಬರ್‌ಗಳಿಂದ ಕರೆ ಮಾಡಿದ ವ್ಯಕ್ತಿಗಳು 25 ಲಕ್ಷ ಬಹುಮಾನ ಕೊಡುವುದಾಗಿ ವಂಚಿಸಿ ವಾಟ್ಸಾಪ್ ನಂಬರ್ ಹ್ಯಾಕ್ ಮಾಡಿದ್ದಾರೆ.
ವಾಟ್ಸಾಪ್ ಹ್ಯಾಕ್ ಆಗಿರುವ ಬಗ್ಗೆ ದೂರು ಪಡೆಯಲಾಗಿದ್ದು ದೂರನ್ನು ಹೈದರಾಬಾದ್‌ನ ಸೈಬರ್ ಕ್ರೈಂ ವಿಭಾಗಕ್ಕೆ ರವಾನೆ ಮಾಡಲಾಗಿದೆ. ಅಲ್ಲಿ ಹ್ಯಾಕ್ ರಿಮೂವ್ ಮಾಡುವ ಪ್ರಯತ್ನ ಮಾಡಲಾಗುವುದು. ಅಲ್ಲಿಯೂ ಆಗದಿದ್ದರೆ ಮುಖ್ಯ ಕಚೇರಿಗೆ ಕಳುಹಿಸಲಾಗುವುದು.
ಕೆ. ಕುಮಾರ್, ಇನ್ಸ್‌ಪೆಕ್ಟರ್, ಸೈಬರ್ ಕ್ರೈಂ, ಶಿವಮೊಗ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.