ಮಣಿಪಾಲ ಆವೃತ್ತಿ ಸಂಭ್ರಮದ ಐವತ್ತು


Team Udayavani, Jan 1, 2019, 12:25 AM IST

udayavanipage01.jpg

ಪ್ರಿಯ ಓದುಗರೇ, 
ಕಾಲದ ದಿನದರ್ಶಿಕೆಯ ಮತ್ತೂಂದು ಹಾಳೆ ತಿರುವಿ ಇನ್ನೊಂದು ಫ‌ಲಪ್ರದ ಹೊಸ ವರ್ಷದ ಸಾಧ್ಯತೆಯನ್ನು ನಮ್ಮೆದುರು ತೆರೆದಿರಿಸಿದೆ. ಅಮಿತ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿರುವ ಈ ಹೊತ್ತಿನಲ್ಲಿ, ಒಂದು ಕ್ಷಣ ಹಿಂದೆ ತಿರುಗಿ ನಾವೆಲ್ಲಿ ದ್ದೇವೆ ಎಂಬುದನ್ನು ಗುರುತಿಸಿಕೊಳ್ಳುವ ಉತ್ಸಾಹದಲ್ಲಿದ್ದೇನೆ. 

ವಿಶ್ವ ಇತಿಹಾಸದ ಪುಟಗಳಲ್ಲಿ ಹಿಂದಿನ ಶತಮಾನವನ್ನು ತೆರೆದರೆ ಒಂದು ಘಟನೆ ಮೇರುಸದೃಶವಾಗಿ ನಿಲ್ಲುತ್ತದೆ. 1969; ಅದು ಮಾನವನು ಚಂದ್ರನ ಅಂಗಳಕ್ಕೆ ಪಾದಾರ್ಪಣೆ ಮಾಡಿದ ವರ್ಷ. ಆ ವರ್ಷ ಭಾರತೀಯ ಸಂದರ್ಭಕ್ಕೂ ಬಹಳ ಮಹತ್ವದ್ದು. ಇಂದಿರಾ ಗಾಂಧಿಯವರು ಕಾಂಗ್ರೆಸ್‌ ಪಕ್ಷವನ್ನು ಒಡೆದು ತನ್ನ ಶಕೆಯನ್ನು ಅತ್ಯುತ್ಸಾಹದಿಂದ ಆರಂಭಿಸಿದರು. ಸುನೀಲ್‌ ಗಾವಸ್ಕರ್‌ ಅವರ ಕ್ರಿಕೆಟ್‌, ಅಮಿತಾಭ್‌ ಬಚ್ಚನ್‌ ಅವರ ಸಿನೆಮಾ ಹಾಗೂ ಇಂದಿರಾ ಗಾಂಧಿಯವರ ರಾಜಕಾರಣ ಭಾರತ ಮತ್ತು ಭಾರತೀಯರ ಆಲೋಚನೆಯನ್ನು ಬದಲಾಯಿಸತೊಡಗಿದ್ದ ಘಟ್ಟ 1970. ಅದು ಕಳೆದ ಶತಮಾನದ ಅತ್ಯಂತ ನಿರ್ಣಾಯಕ ದಶಕವಷ್ಟೇ ಅಲ್ಲ, ರೋಚಕ ಮತ್ತು ಆಘಾತಕಾರಿ ಕೂಡ. ದೇಶದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ನೆಲೆಗಳಲ್ಲಿ ಅಪಾರ ಸ್ಥಿತ್ಯಂತರಕ್ಕೆ ಸಾಕ್ಷಿಯಾದ 70ರ ದಶಕವನ್ನು ಸವಾಲಿನ, ಬದಲಾವಣೆಯ ಹಾಗೂ ರಾಜಿಯ ದಶಕವನ್ನಾಗಿಸಿದವರಿಗೆ ಧನ್ಯವಾದ. ಆ ಸಂದರ್ಭದಲ್ಲೇ ಮೈಸೂರು ರಾಜ್ಯವೆಂದಿದ್ದ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ವೀರೇಂದ್ರ ಪಾಟೀಲ್‌. ಅವರ ಸಮರ್ಥ ಆಡಳಿತ ರಾಜ್ಯದ ಆರ್ಥಿಕ ಅಭಿವೃದ್ಧಿಯ ರಥಕ್ಕೆ ಹೊಸ ಹಾದಿ ತೋರಿಸಿತು. 1972ರಲ್ಲಿ ಮುಖ್ಯಮಂತ್ರಿ ಪದವಿಗೇರಿದ ದೇವರಾಜ ಅರಸ್‌ ಕೂಡ ಸಾಮಾಜಿಕ – ಆರ್ಥಿಕ ಹಾಗೂ ರಾಜಕೀಯ ಸುಧಾರಣೆಗಳಿಗೆ ಮುಂದಾದರು. 1973ರಲ್ಲಿ ಮೈಸೂರು ರಾಜ್ಯ ಕರ್ನಾಟಕವಾಯಿತು. 

1970ರ ಪ್ರಾಮುಖ್ಯ ಇಷ್ಟಕ್ಕೇ ಮುಗಿಯುವುದಿಲ್ಲ; ಮತ್ತಷ್ಟು ಮಹತ್ವದ ಕಾರಣಗಳಿವೆ. ನಮ್ಮದೇ ಸಂದರ್ಭಕ್ಕೆ ಅನ್ವಯಿಸುವುದಾದರೆ, ನನ್ನ ಅಜ್ಜ ಮತ್ತು ಚಿಕ್ಕಜ್ಜ ಜತೆಯಾಗಿ ಸಂಸ್ಥಾಪಿಸಿದ ಸಿಂಡಿಕೇಟ್‌ ಬ್ಯಾಂಕಿನ ರಾಷ್ಟ್ರೀಕರಣವಾಯಿತು. ನಮ್ಮ ಕುಟುಂಬದ ಮೇಲೆ ಇದರಿಂದ ಆದ ನೇರ ಪರಿಣಾಮವೆಂದರೆ, ಈ ಪ್ರದೇಶದ ಜನರ ಅಗತ್ಯ ಮತ್ತು ಆಶೋತ್ತರಗಳನ್ನು ಈಡೇರಿಸುವಂಥ ಮತ್ತಷ್ಟು ಹೊಸ ವಾಣಿಜ್ಯ ಅವಕಾಶಗಳನ್ನು ಶೋಧಿಸಲೇಬೇಕಾದ ಅನಿವಾರ್ಯ ಉಂಟಾಯಿತು. ಇದೇ ವರ್ಷದಲ್ಲಿ ಸ್ಥಳೀಯರಿಗೆ ಮಾಹಿತಿ- ಜ್ಞಾನ ಒದಗಿಸುವ, ಅರ್ಥಪೂರ್ಣ ಘಟನೆಗಳನ್ನು ವರದಿಯ ಮೂಲಕ ದಾಖಲಿಸುವ ಮತ್ತು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯಗಳಲ್ಲಿನ ವಿದ್ಯಮಾನಗಳನ್ನು ತಿಳಿಸುವ ಪ್ರಯತ್ನವಾಗಿ ಕನ್ನಡದಲ್ಲಿ ದಿನಪತ್ರಿಕೆ ಹೊರತರುವ ಆಲೋಚನೆಯೂ ಮೊಳಕೆಯೊಡೆಯಿತು. ನನ್ನ ತಂದೆ ಸತೀಶ್‌ ಪೈ ಅವರ ಸಕ್ರಿಯ ಸಹಕಾರದಡಿ ನನ್ನ ದೊಡ್ಡಪ್ಪ ಮೋಹನದಾಸ್‌ ಪೈ ಅವರು ಇಡೀ ಯೋಜನೆಯ ಉಸ್ತುವಾರಿ ವಹಿಸಿಕೊಂಡರು. ಅವರ ಪ್ರಯತ್ನದ ರೂಪವಾಗಿಯೇ 1970ರ ಜನವರಿ 1ರಂದು ಜನಮನದ ಜೀವನಾಡಿಯಾಗಿ ಉದಯವಾಣಿ ಪ್ರಕಟನೆ ಆರಂಭಿಸಿ ಹೊಸ ವರ್ಷದ ಸಂಭ್ರಮವನ್ನು ಹೆಚ್ಚಿಸಿತು. ಅಲ್ಲಿಂದ ಬಹಳ ದೂರದ ವರೆಗೆ ನಾವು ಸಾಗಿ ಬಂದಿದ್ದೇವೆ, ಅಷ್ಟೇ ಅಲ್ಲ , “ಉದಯವಾಣಿ’ಯ ಮಣಿಪಾಲ ಆವೃತ್ತಿಯು ಇಂದು 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸುವರ್ಣ ಸಂಭ್ರಮದ ಖುಷಿಯನ್ನು ಹಂಚಿಕೊಳ್ಳಲು ನನಗೆ ಬಹಳ ಸಂತಸವಾಗುತ್ತಿದೆ. 

ಕಾಲಗತಿಯನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ಈ ಸಂದರ್ಭವು ನಮ್ಮ ಪ್ರದೇಶ, ದೇಶ ಮಾತ್ರವಲ್ಲದೆ ಇಡಿಯ ಜಗತ್ತಿಗೂ ಅಗಾಧ ಪರಿವರ್ತನೆಯ ಹೊತ್ತು ಆಗಿರುವುದು ರೋಮಾಂಚನ ಹುಟ್ಟಿಸುವ ಸಂಗತಿ. “ಉದಯವಾಣಿ’ಯ ಸುವರ್ಣ ಸಂಭ್ರಮವು ಒಂದರ್ಥದಲ್ಲಿ ಮನುಷ್ಯನ ಪ್ರಯತ್ನ ಶೀಲತೆಯ ಪ್ರತಿಫ‌ಲನ. ಈ ಐದು ದಶಕಗಳಲ್ಲಿ ಸಾಮಾ ಜಿಕ- ಆರ್ಥಿಕ ಪ್ರಗತಿಗೆ ಒಂದಲ್ಲ ಒಂದು ರೀತಿಯಿಂದ ಅಳಿಲ ಸೇವೆ ಸಲ್ಲಿಸಿರುವ ಪ್ರತಿ ಓದುಗನಿಗೂ ನಾನು ಈ ಸುವರ್ಣ ವರ್ಷವನ್ನು ಅರ್ಪಿಸುತ್ತಿದ್ದೇನೆ.
 
ಸ್ಥಳೀಯತೆ, ಪ್ರಾದೇಶಿಕತೆಯ ಕನಸಿಗೆ ಬಣ್ಣ ತುಂಬುತ್ತಾ ಓದುಗರ ಒತ್ತಾಸೆಯಲ್ಲೇ ಬೆಳೆದ ಉದಯವಾಣಿ ಈ 50 ವರ್ಷಗಳಲ್ಲಿ ಹತ್ತಾರು ಸತ್ವಭರಿತ ಪ್ರಯೋಗಗಳನ್ನು ನಡೆಸಿದೆ. ಸ್ಥಳೀಯ ಹಿತಾಸಕ್ತಿಗೆ ದನಿ ಒದಗಿಸಿ ನಿಜವಾದ ಅರ್ಥದಲ್ಲಿ ಜನಮನದ ಜೀವನಾಡಿಯಾಗುವ ಪ್ರಾಮಾಣಿಕ ಪ್ರಯತ್ನ ನಡೆಸಿದೆ. “ಕುಗ್ರಾಮ ಗುರುತಿಸಿ’ ಸರಣಿಯ ಮೂಲಕ ಅಭ್ಯುದಯ ಪತ್ರಿಕೋದ್ಯಮವೆಂಬ ಹೊಸ ಶಾಖೆಯನ್ನು ಭಾರತೀಯ ಪತ್ರಿಕೋದ್ಯಮದಲ್ಲಿ ತೆರೆದಿದೆ. ಯುವಜನರ  ಸಂಘಟನೆಗಾಗಿ ರಚನಾತ್ಮಕ ಚಟುವಟಿಕೆಗಳು, ವಿಂಶತಿ ಸಂದರ್ಭದ ಯಕ್ಷಗಾನ ಕಾರ್ಯಕ್ರಮಗಳು ಉಲ್ಲೇಖನೀಯ. 
 
“ಉದಯವಾಣಿ’ಯ ಮೂಲಕ ನಿಮ್ಮಂತಹ “ನೈಜ ಓದುಗ’ರ ಹಿತಾಸಕ್ತಿಗಳನ್ನು ಕಾಯುವ ವಿಶ್ವಾಸ ನಮ್ಮದು. ಅಗ್ನಿಪರೀಕ್ಷೆಯಂತಹ ಈ ಐದು ದಶಕಗಳ ಅವಧಿಯಲ್ಲಿ ನಮ್ಮ ಕಾರ್ಯಚಟುವಟಿಕೆಗಳ ನೈತಿಕ ಅಡಿಪಾಯವು ಇನ್ನಷ್ಟು ಆಳವಾಗಿ ಬೇರೂರಿ, ದೃಢವಾಗಿ ನೆಲೆನಿಂತಿದೆ. ನಮ್ಮ ಸಂಪಾದಕೀಯ ಬಳಗವು ಸರ್ವ ಸ್ವತಂತ್ರ- ನಾವು ಆಚರಿಸುತ್ತ ಬಂದಿರುವ ಪತ್ರಿಕಾ ಧರ್ಮವು ಸದಾ ವಾಣಿಜ್ಯಿಕ ಒಲವುಗಳಿಂದ ದೂರ ನಿಂತಿದೆ. ಎಂದೂ ಉದ್ಯಮಪತಿಗಳು, ರಾಜಕಾರಣಿಗಳು ಹಾಗೂ ಅಭಿಮತ ನಿರೂಪಕರ ಪ್ರಭಾವಕ್ಕೆ ಒಳಗಾಗಿಲ್ಲ. ಇದು ಬಹಳ ಮುಖ್ಯವಾದದ್ದು. ಯಾಕೆಂದರೆ, ಇದುವೇ ನಮಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಲು ಮತ್ತು ಆಡಳಿತಗಾರರನ್ನು ಉತ್ತರದಾಯಿಗಳನ್ನಾಗಿಸಲು ಶಕ್ತಿ ನೀಡಿದೆ.

ಅಭಿವೃದ್ಧಿಶೀಲ ದೃಷ್ಟಿಯುಳ್ಳವರಾಗಿ, ವಿಶಾಲ ಮತ್ತು ಪ್ರಗತಿಶೀಲ ಮನೋವೃತ್ತಿ ಹೊಂದಿರುವ ನಮ್ಮ ಓದುಗರ ಜತೆಗೆ ಸಂಬಂಧ ವನ್ನು ಇನ್ನಷ್ಟು ಆಳ ಮತ್ತು ವಿಸ್ತಾರವಾಗಿಸಲು ತಂತ್ರಜ್ಞಾನದ ಮೊರೆ ಹೋಗಿದ್ದೇವೆ. ನಮ್ಮ ಓದುಗ ಸಮುದಾಯ ನಮ್ಮದು ಮಾತ್ರ; ಆದ ಕಾರಣ ಅವರ ಅಭಿರುಚಿ ನಮ್ಮ ಜಾಹೀರಾತುದಾರರ ಗ್ರಾಹಕ ಗುರಿಗೆ ಹೊಂದುವುದರಿಂದ ಉತ್ತಮ ಪ್ರತಿಸ್ಪಂದನ ಸಾಧ್ಯವಾಗಿದೆ. ಮಾತ್ರವಲ್ಲ, ಉದಯವಾಣಿ ಇವತ್ತು ಸಮಗ್ರ ಕರ್ನಾಟಕ ವ್ಯಾಪ್ತಿಯನ್ನು ಗಳಿಸಿದೆ, ಕ್ಷಿಪ್ರವಾಗಿ ವಿಸ್ತರಿಸುತ್ತಲೂ ಇದೆ.
ಈ 50ನೇ ವರ್ಷದಲ್ಲಿ ನಿಮ್ಮ ಕಲ್ಯಾಣ ಮತ್ತು ಸಮೃದ್ಧಿಗಳನ್ನು ಧನಾತ್ಮಕ ವಾಗಿ ಪ್ರಭಾವಿಸುವ ಅನೇಕ ಹೊಸ ಯೋಜನೆಗಳನ್ನು ನಾವು ಹಮ್ಮಿಕೊಳ್ಳಲಿದ್ದೇವೆ; ಸಮುದಾಯದ ಹಿತ, ಸ್ಥಳೀಯ ಯುವಜನರು ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವ ಹಲವಾರು ಚಿಂತನೆಗಳು ಕಾರ್ಯಸ್ವರೂಪ ಪಡೆಯಲಿವೆ. ಜನರ ಅಗತ್ಯಗಳನ್ನು ತನ್ನ ಅನುಭವದ ಮುಂಗಾಣೆRಯಿಂದ ದರ್ಶಿಸಿ ಅದಕ್ಕೆ ದನಿಯಾಗುವುದಕ್ಕೆ ಪ್ರಥಮ ಆದ್ಯತೆ. ಇವೆಲ್ಲವನ್ನೂ ನೀವು ಬೆಂಬಲಿಸಿ ಪೋಷಿಸುವಿರಿ ಎಂಬ ಸದಾಶಯ ನನ್ನದು. 

– ಟಿ. ಗೌತಮ್‌ ಪೈ ನಿರ್ದೇಶಕರು

ಟಾಪ್ ನ್ಯೂಸ್

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

accident

Vitla: ರಿಕ್ಷಾ- ಬೈಕ್‌ ಢಿಕ್ಕಿ; ಮೂವರಿಗೆ ಗಾಯ

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.