2019 ಸಿನಿಮಂದಿ ಕಣ್ತುಂಬ ಕಲರ್‌ಫುಲ್ ಕನಸು
Team Udayavani, Jan 1, 2019, 5:43 AM IST
ಹೊಸ ವರ್ಷ ಆರಂಭವಾಗಿದೆ. ಪ್ರತಿಯೊಬ್ಬರು ಹೊಸ ವರ್ಷದಲ್ಲಿ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ಕಳೆದ ವರ್ಷದಲ್ಲಿ ಆಗದ್ದನ್ನು ಹೊಸ ವರ್ಷದಲ್ಲಿ ಸಾಧಿಸಬೇಕೆಂದು ಕೊಳ್ಳುತ್ತಾರೆ. ಜೊತೆಗೆ ಹೊಸ ವರ್ಷದಲ್ಲಿ ಹೊಸ ನಿರ್ಧಾರವನ್ನು ಕೈಗೊಳ್ಳುವ ಮಂದಿ ಅನೇಕರಿದ್ದಾರೆ. ಅದರಲ್ಲೂ ಚಿತ್ರರಂಗದ ಮಂದಿಗೆ ಹೊಸ ವರ್ಷವೆಂದರೆ ಹೊಸ ಭರವಸೆ. ಇಷ್ಟು ವರ್ಷಗಳಲ್ಲಿ ಸಿಗದಂತಹ ಅದ್ಭುತ ಪಾತ್ರ, ದೊಡ್ಡ ಯಶಸ್ಸು, ಹೊಸ ಆಯಾಮಕ್ಕೆ ತೆರೆದುಕೊಳ್ಳುವ ಮನಸ್ಸು …. ಹೀಗೆ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ಹಾಗೆ ಹೊಸ ವರ್ಷದ ನಿರೀಕ್ಷೆಗಳ ನಟ-ನಟಿಯರು ಮಾತನಾಡಿದ್ದಾರೆ. ಅದು ಅವರ ಮಾತುಗಳಲ್ಲೇ …
ಪ್ರತಿಯೊಬ್ಬರು ವರ್ಷವೂ ಒಳ್ಳೆಯ ಸಿನಿಮಾ ಕೊಡಬೇಕೆಂಬ ಉದ್ದೇಶವನ್ನೇ ಹೊಂದಿರುತ್ತೇನೆ ಮತ್ತು ಆ ನಿಟ್ಟಿನಲ್ಲೇ ಕೆಲಸ ಮಾಡುತ್ತೇನೆ. ಈ ವರ್ಷವೂ ಅದೇ ಮುಂದುವರೆದಿದೆ. ಹಾಗೆ ನೋಡಿದರೆ ನಾನು 2018ರಲ್ಲಿ ಅಂದುಕೊಂಡಿದ್ದು ನಡೆಯಲಿಲ್ಲ. ಮೂರು ಸಿನಿಮಾವಾದರೂ ಬಿಡುಗಡೆಯಾಬೇಕೆಂದುಕೊಂಡಿದ್ದೆ. ಆದರೆ, ಬಿಡುಗಡೆಯಾಗಿದ್ದು ಕೇವಲ ಒಂದು ಮಾತ್ರ. ಈ ವರ್ಷ ಮೂರು ಸಿನಿಮಾ ಬಿಡುಗಡೆಯಾಗಲಿದೆ. ಜೊತೆಗೆ ಇನ್ನೊಂದಿಷ್ಟು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲಿದ್ದೇನೆ. ಹೊಸ ತರಹದ ಪಾತ್ರಗಳಿಗೆ ಮೊದಲ ಆದ್ಯತೆ
-ಗಣೇಶ್, ನಟ
ಹಾಗೆ ಮಾಡಬೇಕು, ಹೀಗೆ ಮಾಡಬೇಕೆಂದು ನಾನು ಪ್ಲ್ರಾನ್ ಮಾಡಿಕೊಳ್ಳುವುದಿಲ್ಲ. ಬಂದಿದ್ದನ್ನು ಬಂದಂತೆ ಸ್ವೀಕರಿಸುತ್ತೇನೆ. ಎಲ್ಲಾ ವರ್ಷದಿಂದ ಈ ವರ್ಷವೂ ಸಿನಿಮಾ ಕೆಲಸದಲ್ಲಿ ತೊಡಗುವುದಷ್ಟೇ ನನ್ನ ಉದ್ದೇಶ. ಹೊಸ ಕಥೆಗಳೊಂದಿಗೆ ಅಭಿಮಾನಿಗಳನ್ನು ಖುಷಿಪಡಿಸುವುದಷ್ಟೇ ನನ್ನ ಉದ್ದೇಶ.
-ದರ್ಶನ್
ಹೊಸ ವರ್ಷದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಬೇಕು, ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಒಪ್ಪಿಕೊಳ್ಳಬೇಕೆಂಬುದಷ್ಟೇ ನನ್ನ ಉದ್ದೇಶ. ಈ ವರ್ಷಾರಂಭದಲ್ಲೇ ನನ್ನ ಮೂರು ಚಿತ್ರಗಳು ಬಿಡುಗಡೆಯಾಗಲಿದೆ. ಜೊತೆಗೆ ಇನ್ನೊಂದಿಷ್ಟು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಹೊಸ ವರ್ಷದಲ್ಲಿ ಅದು ಡಬಲ್ ಆಗಬೇಕೆಂಬ ಆಸೆ ಇದೆ. ಆರು ಸಿನಿಮಾ ರಿಲೀಸ್ ಆಗಬೇಕು. ಆರು ಸಿನಿಮಾ ಶೂಟಿಂಗ್ ಮಾಡುತ್ತಿರಬೇಕು. 2018ರಲ್ಲಿ ನಾನು ಏನೂ ಅಂದುಕೊಂಡಿಲ್ಲ. ಆದರೆ ಎಲ್ಲಾ ಆಗಿದೆ. ನಿರೀಕ್ಷೆ ಮಾಡದಿರುವುದೆಲ್ಲವೂ ನಡೆದುಹೋಗಿದೆ. ಅದು ಖುಷಿಕೊಟ್ಟಿದೆ. ಸಿನಿಮಾ ಬಿಟ್ಟು ಬೇರೆ ಯಾವುದೇ ವಿಚಾರ ನನ್ನ ತಲೆಯಲ್ಲಿ ಇಲ್ಲ.
-ರಚಿತಾ ರಾಮ್, ನಟಿ
ಈ ವರ್ಷ ನಾನು ನಟಿಸಿದ ಹಲವು ಚಿತ್ರಗಳು ಬಿಡುಗಡೆಯಾಗುತ್ತಿದೆ. ಅವೆಲ್ಲವೂ ಬೇರೆ ಬೇರೆ ಜಾನರ್‌ನ ಸಿನಿಮಾ ಎಂಬುದು ಖುಷಿಯ ವಿಚಾರ. ನಾನು ಮಾಡಿರುವ ಪಾತ್ರಗಳು ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ. ಆ ನಿರೀಕ್ಷೆಯಲ್ಲಿ ಹೊಸ ವರ್ಷದ ನೋಡುತ್ತಿದ್ದೇನೆ. ಅದು ಬಿಟ್ಟರೆ ಬರವಣಿಗೆ ಆರಂಭಿಸಿದ್ದೇನೆ. ಅದನ್ನು ಇನ್ನಷ್ಟು ಕರಗತ ಮಾಡಿಕೊಳ್ಳಬೇಕು. ಅದು ನನ್ನನ್ನು ಯಾವ ಕಡೆ ಕರೆದುಕೊಂಡು ಹೋಗುತ್ತೋ ಗೊತ್ತಿಲ್ಲ. 2018ರಲ್ಲಿ ಯಾವುದನ್ನೂ ನಿರೀಕ್ಷಿಸಿರಲಿಲ್ಲ. ಎಲ್ಲವೂ ಅದರ ಪಾಡಿಗೆ ಬಂತು. ಅನೇಕ ಒಳ್ಳೆಯ ಪಾತ್ರಗಳು ಸಿಕ್ಕವು. ಈ ವರ್ಷವೂ ಖುಷಿ ಖುಷಿಯಾಗಿ ಸಾಗುತ್ತದೆ ಎಂಬ ನಿರೀಕ್ಷೆ ಇದೆ.
-ಹರಿಪ್ರಿಯಾ,ನಟಿ
ಸಿನಿಮಾ, ಒಳ್ಳೆ ಊಟ, ಹಾಡುಗಳಿಗೆ ನನ್ನ ಮೊದಲ ಆದ್ಯತೆ. ಹೊಸ ವರ್ಷದಲ್ಲಿ ನನ್ನ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆ ಸಿನಿಮಾಗಳ ಪಾತ್ರಗಳು ಭಿನ್ನವಾಗಿವೆ. ನಾನಾಗಿ ಯಾವುದನ್ನೂ ಪ್ಲ್ರಾನ್ ಮಾಡಿಲ್ಲ. ಆ ದೇವರೇ ನನಗಾಗಿ ಒಂದು ಒಳ್ಳೆಯ ಪ್ಲ್ರಾನ್ ಮಾಡಿರುತ್ತಾರೆ. ಅದರೊಂದಿಗೆ ಸಾಗುತ್ತೇನೆ. ಹೊಸ ವರ್ಷದಲ್ಲಿ ಬರವಣಿಗೆ ಆರಂಭಿಸಬೇಕೆಂದುಕೊಂಡಿದ್ದೇನೆ. ಬರವಣಿಗೆ ಮಾಡುತ್ತಿದ್ದೆ. ಈಗಾಗಲೇ ಎರಡು ಸ್ಕ್ರಿಪ್ಟ್ ಮಾಡಿಟ್ಟಿದ್ದೇನೆ. ಈಗ ಮತ್ತೆ ಬರವಣಿಗೆ ಆರಂಭಿಸಬೇಕೆಂದಿದ್ದೇನೆ.
-ಮಾನ್ವಿತಾ
ಎಲ್ಲಾ ರಾಜ್ಯಗಳಲ್ಲೂ 2000ಕ್ಕೂ ಹೆಚ್ಚು ಚಿತ್ರಮಂದಿರಗಳಿವೆ. ನಮ್ಮ ರಾಜ್ಯದಲ್ಲೂ ಹೊಸ ವರ್ಷದಲ್ಲಾದರೂ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಲಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇದೇ ನನ್ನ ಹೊಸ ವರ್ಷದ ಆಸೆ, ಕನಸು.
-ಯೋಗರಾಜ್ ಭಟ್
ನನಗೆ ಪ್ರತಿದಿನವೂ ಹೊಸ ವರ್ಷ. ಬೆಳಗ್ಗೆ ಎದ್ದ ಕೂಡಲೇ ಅದು ನನಗೆ ಹೊಸ ವರ್ಷ. ಹಾಗಾಗಿ, ಕನಸುಗಳು ನಿರಂತರ.
-ಸೂರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.