ಪೇಜಾವರ ಮಠದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ಪ್ರತಿಷ್ಠಾ ತೃತೀಯ ವರ್ಧಂತಿ

Team Udayavani, Jan 1, 2019, 11:19 AM IST

3012mum05.jpg

ಮುಂಬಯಿ: ಸಜ್ಜನರ ಸಂಗಮವೇ ಶ್ರೀ ಕೃಷ್ಣನ ಅವತಾರ ಆಗಿದ್ದು, ಭಕ್ತರ ರಕ್ಷಣೆ ಶ್ರೀ  ಕೃಷ್ಣನ ಸಂಕಲ್ಪವಾಗಿದೆ. ಅನನ್ಯ ಭಕ್ತಿಯಿಂದ  ಶ್ರೀ ಕೃಷ್ಣನನ್ನು ಭಜಿಸಿ  ಪೂಜಿಸಿದ ಮಾನವ ಜೀವನವು ಸನ್ಮರ್ಗದತ್ತ ಸಾಗುವುದು. ಕಾರಣ ಭಕ್ತರ ರಕ್ಷಣೆಯೇ ಕೃಷ್ಣನ ಶ್ರೀರಕ್ಷೆ ಆಗಿದೆ. ಪರಮಾತ್ಮ ನಮಗೋಸ್ಕರ ಸತ್ಕರ್ಮ ಮಾಡುವತ್ತಾ ಅವತರಿಸಿದ್ದು, ದೇವರು ಕೊಡುವ ಕಷ್ಟದ ಹಿಂದಿನ ರಹಸ್ಯ ಎಂದಿಗೂ ಒಳಿತಾಗಿರುತ್ತದೆ.  ಕೃಷ್ಣಾವತಾರ ವಿಶೇಷವಾಗಿದ್ದು ಜ್ಞಾನ ಮತ್ತು ಬಲ ತೋರ್ಪಡಿಸುತ್ತದೆ. ಇವುಗಳಿಂದ ದುಷ್ಟ ಶಕ್ತಿಗಳ ನಿರ್ಮೂಲನೆಯಾಗಿ ಸತ್ಕರ್ಮಗಳ ಫಲ ಫಲಿಸುತ್ತದೆ. ಶ್ರೀ ಕೃಷ್ಣನು ತನ್ನ ನಡತೆ, ಮಾತು, ಕೃತಿಗಳಿಂದ ಉತ್ತಮ ಜೀವನ ದಯಾಪಾಲಿಸಿದ್ದು, ದೇವರು ಕೊಟ್ಟ ಕಷ್ಟಗಳು ಭಕ್ತರನ್ನು ತಿದ್ದುವ ಪರಿಯಾಗಿವೆಯೇ ಹೊರತು ದುಷ್ಟತ್ವ ಅಲ್ಲ. ಆದ್ದರಿಂದ ಮನುಜನು ಕಷ್ಟ ನಷ್ಟ, ಸಮಸ್ಯೆಗಳನ್ನು ಸಮಾನವಾಗಿ ಸ್ವೀಕರಿಸಿ ದೇವರನ್ನು ಕೆಡುಕದೆ ಇಷ್ಟಾರ್ಥ ಸಿದ್ಧಿಸಿದಾಗ ಮರೆಯದೆ ಆರಾಧಿಸಿ ಮುನ್ನಡೆದಾಗಲೇ ನಾವು ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.

ಡಿ. 30 ರಂದು ಸಾಂತಾಕ್ರೂಜ್‌ ಪೂರ್ವದ ಪ್ರಭಾತ್‌ ಕಾಲನಿಯ ಜಗದ್ಗುರು ಶ್ರೀ  ಮಧ್ವಾ ಚಾರ್ಯ ಮಹಾ ಸಂಸ್ಥಾನ ಉಡುಪಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿನ ಶಿಲಾಮಯ ಮಂದಿರದಲ್ಲಿ ನಡೆದ ಶ್ರೀ ಕೃಷ್ಣ ದೇವರ ತೃತೀಯ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ ದೇವರಿಗೆ ಕಲಶಾಭಿಷೇಕ, ಮಹಾ ಆರತಿ ನೆರವೇರಿಸಿ ತುಳಸೀ ಆರ್ಚನೆ ಗೈದು ನೆರದ ಸದ್ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು, ಮುಂಬಯಿ ಭಕ್ತಾದಿಗಳ ಪ್ರೀತ್ಯಾದ‌ರಗಳನ್ನು ಕಂಡಾಗ ಸಂತೋಷವಾಗುತ್ತಿದೆ ಎಂದು ನುಡಿದು ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಸಮಿತಿಯ ಗೌರವ ಕಾರ್ಯದರ್ಶಿ ಬಿ. ಆರ್‌. ಗುರುಮೂರ್ತಿ, ಗೌರವ ಕೋಶಾಧಿಕಾರಿ ಅವಿನಾಶ್‌ ಶಾಸ್ತ್ರಿ,  ಡಾ| ಸುರೇಶ್‌ ಎಸ್‌. ರಾವ್‌ ಕಟೀಲು, ಡಾ| ಎಂ. ಎಸ್‌. ಆಳ್ವ, ವಿಷ್ಣುಮೂರ್ತಿ ಆಚಾರ್ಯ ಉಡುಪಿ, ವಿದ್ವಾನ್‌ ಕೈರಬೆಟ್ಟು ವಿಶ್ವನಾಥ ಭಟ್‌, ಎಸ್‌. ಕೆ. ಭವಾನಿ, ಶೇಖರ್‌ ಎಸ್‌. ಸಾಲ್ಯಾನ್‌, ಕನ್ನಡ ಚಿತ್ರನಟಿ ರೇಖಾ, ಮಠದ ಶಾಖಾಧಿಕಾರಿಗಳಾದ ಪ್ರಕಾಶ್‌ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್‌ ಪುತ್ತಿಗೆ, ನಿರಂಜನ್‌ ಗೋಗೆr, ಪ್ರತಿಷ್ಠಾನದ ವಿಶ್ವಸ್ಥರು, ಪದಾಧಿಕಾರಿಗಳು ಹಾಗೂ ಪುರೋಹಿತ‌ ವರ್ಗದವರು ಉಪಸ್ಥಿತರಿದ್ದರು.

ಮುಂಜಾನೆಯಿಂದಲೇ ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿ ವಿದ್ವಾನ್‌ ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಪುಣ್ಯಾವಾಚನ, ಚಕ್ರಬj ಮಂಡಲಾರಾಧನೆ, ಕಲಶ ಪ್ರತಿಷ್ಠಾಪನೆ, ತತ್ವ ಮತ್ತು ಪ್ರಧಾನ ಹೋಮ, ಕಲಶಾಭಿಷೇಕ, ನ್ಯಾಸ, ಮಹಾಪೂಜೆ ನೆರವೇರಿಸಿ ಮಹಾ ಪ್ರಸಾದ ವಿತರಿಸಿದ‌ರು. ಪುರೋಹಿತರಾದ ಕೃಷ್ಣ ಭಟ್‌, ಆದಿತ್ಯ ಕಾರಂತ, ವಿಷ್ಣುತೀರ್ಥ ಸಾಲಿ ಅವರು ವಿವಿಧ ಪೂಜಾದಿ ಕಾರ್ಯಕ್ರಮಗಳನ್ನು ನೆರವೇರಿಸಿದರು.

ದಿನೇಶ್‌ ವಿನೋದ್‌ ಕೋಟ್ಯಾನ್‌ ಮತ್ತು ಬಳಗದವರಿಂದ  ನಾದಸ್ವರ, ಸ್ಯಾಕೊÕàಫೋನ್‌, ಚೆಂಡೆ, ವಾದ್ಯಘೋಷದೊಂದಿಗೆ ಭಕ್ತರು ಶ್ರೀಗಳನ್ನು ಮಂದಿರಕ್ಕೆ ಬರಮಾಡಿಕೊಂಡರು. ಮಧೆÌàಶ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು.  ಮಹಾನಗರದಲ್ಲಿನ ಭಕ್ತಮಹಾಶಯರು ಈ ಪುಣ್ಯಾದಿ ಉತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು  ಶ್ರೀಕೃಷ್ಣ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.