ಕರಿಬೇವು: ಅಡುಗೆಗೆ, ಆರೋಗ್ಯಕ್ಕೆ, ಸೌಂದರ್ಯಕ್ಕೆ…
Team Udayavani, Jan 2, 2019, 12:30 AM IST
ಹಿಂದೆಲ್ಲಾ ಎಲ್ಲರ ಮನೆಯ ಹಿತ್ತಲಿನಲ್ಲಿ ಕರಿಬೇವಿನ ಗಿಡ ಇರುತ್ತಿತ್ತು. ಕರಿಬೇವಿನ ಒಗ್ಗರಣೆ ಇಲ್ಲದಿದ್ದರೆ ಕೆಲವರಿಗೆ ಊಟವೇ ರುಚಿಸುವುದಿಲ್ಲ. ಆದರೀಗ ಕರಿಬೇವನ್ನು ಬೆಳೆಸದಿದ್ದರೂ, ಅದರ ಬಳಕೆ ಮಾತ್ರ ಕಡಿಮೆಯಾಗಿಲ್ಲ. ಅಡುಗೆ, ಆರೋಗ್ಯ, ಸೌಂದರ್ಯ… ಹೀಗೆ ಕರಿಬೇವಿನ ಉಪಯೋಗಗಳು ಅನೇಕ. ಕರಿಬೇವನ್ನು ಬೆಳೆಸುವ, ಸಂಗ್ರಹಿಸುವ ಹಾಗೂ ಉಪಯೋಗಿಸುವ ಕುರಿತು ಕೆಲವು ಟಿಪ್ಸ್‌ಗಳು ಇಲ್ಲಿವೆ.
1.ಕರಿಬೇವಿನ ಗಿಡದ ಬುಡಕ್ಕೆ ಹುಳಿ ಮಜ್ಜಿಗೆ ಹಾಕಿದರೆ ಸಸಿ ಚೆನ್ನಾಗಿ ಬೆಳೆಯುತ್ತದೆ.
2.ಕರಿಬೇವಿನ ಎಸಳುಗಳನ್ನು ತೊಳೆದು, ತೆಳುವಾದ ಬಟ್ಟೆಯ ಮೇಲೆ ಆರಲು ಹಾಕಿ, ನಂತರ ಸ್ಟೀಲ್ ಅಥವಾ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿಟ್ಟರೆ ಹೆಚ್ಚು ದಿನ ತಾಜಾ ಆಗಿರುತ್ತದೆ.
3. ಕರಿಬೇವಿನ ಎಸಳುಗಳಲ್ಲಿ ಹುಳ ಇರುವುದು ಸಾಮಾನ್ಯ. ಒಂದು ಚಿಟಿಕೆ ಅಕ್ಕಿ ಹಿಟ್ಟನ್ನು ಎಸಳುಗಳ ಮೇಲೆ ಸಿಂಪಡಿಸಿದರೆ, ಸಣ್ಣ ಹುಳುಗಳು ಎಲೆಯಿಂದ ಉದುರುತ್ತವೆ.
4. ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ, ಅದನ್ನು ಸೀಗೆ ಪುಡಿ ಜೊತೆ ಬೆರೆಸಿ ಶೇಖರಿಸಿ ಇಡಬಹುದು. ಈ ಮಿಶ್ರಣವನ್ನು ಶ್ಯಾಂಪೂವಿನ ಬದಲು ಬಳಸಿದರೆ, ಕೂದಲು ಕಪ್ಪಾಗಿ ಸೊಂಪಾಗಿ ಬೆಳೆಯುತ್ತದೆ.
5. ಕರಿಬೇವನ್ನು ತೊಳೆದು, ಒಣಗಿಸಿ ಶೇಖರಿಸಿಟ್ಟರೆ, ಅದನ್ನು ತಾಜಾ ಎಲೆಗಳ ಬದಲಿಗೆ ಒಗ್ಗರಣೆಗೆ ಹಾಕಬಹುದು.
6.ಹುರಿಗಡಲೆ ಜೊತೆ, ಒಣಗಿದ ಕರಿಬೇವಿನ ಎಸಳು ಸೇರಿಸಿ ಚಟ್ನಿ ಪುಡಿ ತಯಾರಿಸಬಹುದು.
7.ಹೀರೇ ಕಾಯಿ ಸಿಪ್ಪೆ ಅಥವಾ ಸೀಮೆ ಬದನೆ ಕಾಯಿ ಸಿಪ್ಪೆಯನ್ನು ಎಸೆಯುವ ಬದಲು, ಅದರ ಜೊತೆಗೆ ಕರಿಬೇವು ಸೇರಿಸಿ ಗಟ್ಟಿ ಚಟ್ನಿ ಮಾಡಿ ಸವಿಯಬಹುದು.
8. ಕರಿಬೇವಿನಲ್ಲಿ ಎ ಜೀವಸತ್ವ ಅಧಿಕವಾಗಿರುವುದರಿಂದ, ಮಂಡಕ್ಕಿ, ಅವಲಕ್ಕಿ, ಕಡಲೆಪುರಿಯಂಥ ಸ್ನ್ಯಾಕ್ಸ್‌ಗಳ ಜೊತೆ ಸೇರಿಸಿದರೆ, ಆರೋಗ್ಯಕ್ಕೆ ಒಳ್ಳೆಯದು.
ಹೀರಾ ರಮಾನಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.