ಹೆಗಲ್‌ ಪೆ ಶಾಲ್‌ ಹೈ!


Team Udayavani, Jan 2, 2019, 12:30 AM IST

x-5.jpg

ಶಾಲನ್ನು ಮುಂಡಾಸಿನಂತೆ ಕಟ್ಟಿಕೊಳ್ಳಬಹುದು, ಹಿಜಾಬ್‌ನಂತೆ ತೊಡಬಹುದು, ದುಪ್ಪಟ್ಟಾದಂತೆ ಬಳಸಬಹುದು, ಸರೋಂಗ್‌ನಂತೆಯೂ ಧರಿಸಬಹುದು. ಸ್ವೆಟರ್‌ಗೆ ಪರ್ಯಾಯದಂತೆಯೂ ಕಾಣುವ ಶಾಲಿನ ಉಪಯೋಗಗಳು ಒಂದೆರಡಲ್ಲ…

ಚಳಿಗಾಲದಲ್ಲಿ  ಮೂರು ಹೊತ್ತೂ ಉಣ್ಣೆಯ ಬಟ್ಟೆ ತೊಡಲು ಸಾಧ್ಯವಿಲ್ಲ. ಸ್ವೆಟರ್‌, ಜಾಕೆಟ್‌, ಕೋಟು ಅಥವಾ ಜರ್ಕಿನ್‌ ಎಲ್ಲಾ ತರಹದ ಉಡುಪಿನ ಜೊತೆ ಚೆನ್ನಾಗಿ ಕಾಣಿಸುವುದೂ ಇಲ್ಲ! ಹಾಗೆಂದು ಚಳಿಗಾಲದಲ್ಲಿ   ನಡುಗುತ್ತಾ ಇರಲು ಸಾಧ್ಯವೇ? ಕೋಟು, ಜಾಕೆಟ್‌, ಜರ್ಕಿನ್‌ಗಳು ಪಾಶ್ಚಾತ್ಯ ಉಡುಗೆಗಳ ಜೊತೆ ಚೆನ್ನಾಗಿ ಕಾಣಿಸುತ್ತವೆ.  ಆದರೆ ಸಾಂಪ್ರದಾಯಿಕ ಅಂದರೆ, ಇಂಡಿಯನ್‌ ಬಟ್ಟೆಗಳ ಜೊತೆ ಅಷ್ಟಕ್ಕಷ್ಟೆ. ಅದೇ ಸ್ವೆಟರ್‌ ಪಾಶ್ಚಾತ್ಯ ಹಾಗೂ ಸಾಂಪ್ರದಾಯಿಕ ಎರಡೂ ಉಡುಗೆಗಳ ಜೊತೆ ಚೆನ್ನಾಗೇ ಕಾಣಿಸುತ್ತದೆ. ಆದರೆ ಸ್ವೆಟರ್‌ನಲ್ಲಿ ಜಿಪ್‌ ಅಥವಾ ಬಟನ್‌(ಗುಂಡಿ)ಗಳು ಇಲ್ಲದ ಕಾರಣ, ಅವುಗಳನ್ನು ತಲೆ ಮತ್ತು ತೋಳುಗಳ ಮೂಲಕವೇ ಧರಿಸಬೇಕು. ಪ್ರತೀ ಬಾರಿ ಹಾಕುವುದು-ತೆಗೆಯುವುದು ಕಷ್ಟಕರವಾಗಿರುವುದರಿಂದ ಸ್ವೆಟರ್‌ಗಳನ್ನು ಪಾಶ್ಚಾತ್ಯ ಉಡುಗೆಯ ಜೊತೆ ಅಂಗಿಯಂತೆ ಲಂಗ, ಪ್ಯಾಂಟ್‌ ಅಥವಾ ಶಾರ್ಟ್ಸ್ ಜೊತೆಯೇ ಮಹಿಳೆಯರು ತೊಡಲು ಇಷ್ಟ ಪಡುತ್ತಾರೆ. ಆದ್ದರಿಂದ ಇವೆಲ್ಲಕ್ಕೆ ಇರುವ ಒಳ್ಳೆಯ ಉಪಾಯ ಶಾಲು ಧರಿಸುವುದು. ಪಾಶ್ಚಾತ್ಯ ಮತ್ತು ಸಂಪ್ರದಾಯಿಕ ಎರಡು ಉಡುಗೆಗಳ ಜೊತೆ ತೊಡಬಲ್ಲ ಈ ಧಿರಿಸು, ಹೊದ್ದುಕೊಳ್ಳಲು ತುಂಬಾ ಸರಳ! ಬ್ಯಾಗಿನಲ್ಲಿ ಕೊಂಡೊಯ್ಯಲೂ ಸುಲಭ!.

ಶಾಲುಗಳಲ್ಲಿ ಪಶ್ಮೀನಾ ಶಾಲು ಅತ್ಯಂತ ಜನಪ್ರಿಯ. ಕಾಶ್ಮೀರದಲ್ಲಿ ಕಾಣಸಿಗುವ ಮೇಕೆ-ಆಡುಗಳ ಉಣ್ಣೆಯಿಂದ ತಯಾರಿಸಲಾಗುವ ಈ ಶಾಲಿಗೆ ವಿದೇಶದಲ್ಲೂ ಬೇಡಿಕೆ ಇದೆ. ಹತ್ತಿ, ಉಣ್ಣೆಯಿಂದ ನೇಯಲಾಗುವ ಈ ಶಾಲುಗಳಲ್ಲಿ ಊಹಿಸಲು ಸಾಧ್ಯವಿಲ್ಲದಷ್ಟು ಬಣ್ಣಗಳು, ವಿನ್ಯಾಸಗಳು, ಮುದ್ರೆ ಹಾಗು ಚಿಹ್ನೆಗಳು ಉಳ್ಳ ಪ್ರಕಾರಗಳು ಇವೆ. ಈ ಶಾಲು ಅದೆಷ್ಟು ಮೆಚ್ಚುಗೆ ಪಡೆದಿದೆ ಎಂದರೆ, ಇದೇ ಶಾಲಿನಿಂದ ಅಂಗಿ, ಲಂಗ ಮತ್ತು ಶ್ರಗ್‌(ಗುಂಡಿ ಇರದ ಕೋಟು) ನಂತಹ‌ ಉಡುಪುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಶಾಲಿನಿಂದ ಪಲಾಝೊ ಪ್ಯಾಂಟ್‌ಗಳನ್ನೂ ತಯಾರಿಸಲಾಗುತ್ತದೆ.  ಚಳಿಗಾಲದಲ್ಲಿ ಬೆಚ್ಚಗಿರಿಸುವ ಈ ಶಾಲು ಮೇಕ್‌ಓವರ್‌ ಪಡೆಯುತ್ತಲೇ ಇದೆ.

ಈ ಶಾಲು ಬಹಳ ಹಗುರ. ಮಡಿಚಿ ಇಟ್ಟಾಗ ಬ್ಯಾಗಿನಲ್ಲಿ ಇದಕ್ಕೆ ಬಹಳ ಜಾಗವೂ ಬೇಕಾಗಿಲ್ಲ. ಅತ್ಯಂತ  ಮೃದುವಾಗಿರುವ ಟೆಕ್ಸ್‌ಚರ್‌ ಈ ಶಾಲಿನದ್ದು. ಉಣ್ಣೆಯ ಸ್ವೆಟರ್‌ನಷ್ಟೇ ಬೆಚ್ಚಗೆ ನೀಡಿದರೂ, ಭಾರ, ಟೆಕ್ಸ್‌ಚರ್‌, ಇದಕ್ಕೆಲ್ಲಾ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸಗಳು ಇವೆ. ಆದ್ದರಿಂದ ಚಿಕ್ಕ ಪುಟ್ಟ ಮಕ್ಕಳಿಗಷ್ಟೇ ಉಣ್ಣೆಯ ಸ್ವೆಟರ್‌ ತೊಡಿಸಿ, ದೊಡ್ಡವರೆಲ್ಲರೂ ಶಾಲು ಹೊದ್ದುಕೊಳ್ಳುತ್ತಾರೆ. ಈ ಶಾಲು ಮಹಿಳೆಯರಿಗೆ ಮಾತ್ರವಲ್ಲದೆ, ಪುರುಷರಿಗೂ ಒಪ್ಪುತ್ತದೆ. ಪಶ್ಮೀನಾ ಶಾಲನ್ನು ಮುಂಡಾಸಿನಂತೆಯೂ ಕಟ್ಟಿಕೊಳ್ಳಬಹುದು. ಹಿಜಾಬ್‌ನಂತೆ ತೊಡಬಹುದು. ದುಪಟ್ಟಾದಂತೆಯೂ ಬಳಸಬಹುದು. ಅಷ್ಟೇ ಅಲ್ಲ ಸರೋಂಗ್‌(ಲುಂಗಿಯಂತಹ ಉಡುಗೆ) ನಂತೆಯೂ ಧರಿಸಬಹುದು. 

ಪಶ್ಮೀನಾ ಎಂದರೇನು?
ಪರ್ಶಿಯನ್‌ ಭಾಷೆಯಲ್ಲಿ, ಉಣ್ಣೆಯಿಂದ ಮಾಡಿದ್ದು ಎಂಬುದಕ್ಕೆ ಪಸ್ಮಿàನಾ ಎನ್ನುತ್ತಾರೆ. ಹಾಗಾಗಿ ಇದು ಪಶ್ಮೀನಾ ಶಾಲಾಯಿತು. ಅದೇ ಯುರೋಪಿಯನ್‌ ದೇಶಗಳಲ್ಲಿ ಈ ಪಶ್ಮೀನಾ ಶಾಲನ್ನು ಕಾಶ್ಮೀರ್‌ ಎಂದು ಕರೆಯಲಾಗುತ್ತದೆ!. ಏಕೆಂದರೆ ಇಂಥಾ ಶಾಲನ್ನು ಅವರು ಮೊದಲಿಗೆ ಕಾಶ್ಮೀರದಲ್ಲೇ ನೋಡಿದ್ದು. ಈ ಶಾಲುಗಳ ಉಲ್ಲೇಖ 3ನೇ ಶತಮಾನ ಹಾಗೂ ಕ್ರಿಸ್ತಶಕ 11ನೇ ಶತಮಾನದ ಆಫ್ಘಾನ್‌ ಪುಸ್ತಕಗಳಲ್ಲಿ ಇವೆ! ರಾಜಮನೆತನದವರು ಈ ಶಾಲುಗಳನ್ನು ತೊಡುತ್ತಿದ್ದರು. ಭಾರತ, ಬಹಳಷ್ಟು ರಾಷ್ಟ್ರಗಳಲ್ಲಿ ಪಶ್ಮೀನಾ ಶಾಲು ಸ್ಟೇಟಸ್‌ ಸಿಂಬಲ್‌!

ಸಾಂಪ್ರದಾಯಿಕ ಪಶ್ಮೀನಾ ಶಾಲು(70*200ಸೆ.ಮೀ) ತಯಾರಿಸಲು ಹೆಚ್ಚು-ಕಡಿಮೆ 180 ಗಂಟೆಗಳು ಬೇಕಾಗುತ್ತದೆ. ಆದ್ದರಿಂದಲೇ ಪಶ್ಮೀನಾ ಶಾಲಿನ ಬೆಲೆ ದುಬಾರಿ. ಅದೆಷ್ಟೋ ಮಾರಾಟಗಾರರು ಈ ಪಶ್ಮೀನಾ ಶಾಲಿನ ಹೆಸರಿನಲ್ಲಿ ಸಿಂತೆಟಿಕ್‌ ಫ್ಯಾಬ್ರಿಕ್‌ನಿಂದ ಮಾಡಿದ ಶಾಲನ್ನು ಕಡಿಮೆ ದರಕ್ಕೆ ಮಾರುತ್ತಾರೆ. ಹಾಗಾಗಿ ಕೊಂಡುಕೊಳ್ಳುವಾಗ ಎಚ್ಚರವಿರಲಿ. ಈ ಚಳಿಗಾಲದಲ್ಲಿ ಮತ್ತದೇ ಹಳೆ ಬೋರಿಂಗ್‌ ಸ್ವೆಟರ್‌ ಧರಿಸುವ ಬದಲು ಬಗೆಬಗೆಯ ಬಣ್ಣದ, ವಿನ್ಯಾಸದ ಪಶ್ಮೀನಾ ಶಾಲು ತೊಟ್ಟು ನೋಡಿ. ಅದೆಷ್ಟು ಆರಾಮದಾಯಕ ಎಂದರೆ ಮತ್ತೆಂದೂ ಸ್ವೆಟರ್‌ ತೊಡಲು ಇಷ್ಟ ಪಡಲಾರಿರಿ!.

ಅದಿತಿಮಾನಸ. ಕಿ.ಎಸ್‌

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

156

Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.