ಶಿರ್ವ ದ್ವಿಪಥ ರಸ್ತೆ :ರಿಫ್ಲೆಕ್ಟರ್‌ಗಳಿಲ್ಲದ ಅಪಾಯಕಾರಿ ಡಿವೈಡರ್‌ಗಳು
Team Udayavani, Jan 2, 2019, 7:30 AM IST
ಶಿರ್ವ : ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯುತ್ತಿದ್ದು ಪ್ರಮುಖ ಆರ್ಥಿಕ ಕೇಂದ್ರವಾಗಿರುವ ಶಿರ್ವ ಪೇಟೆಯ ದ್ವಿಪಥ ರಸ್ತೆಯಲ್ಲಿ ದಿನವೊಂದಕ್ಕೆ ಸಾವಿರಾರು ವಾಹನಗಳು ಚಲಿಸುತ್ತಿವೆ. ಆದರೆ ಇಲ್ಲಿನ ಪೆಟ್ರೋಲ್ ಪಂಪ್ ಬಳಿ ,ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಬಳಿ, ಶಿರ್ವ- ಕಾಪು ರಸ್ತೆ, ಕುತ್ಯಾರು -ಶಿರ್ವ ಕ್ರಾಸ್ ಮತ್ತು ಬಸ್‌ಸ್ಟಾಂಡ್‌ನಲ್ಲಿ ರಿಫ್ಲೆಕ್ಟರ್ ಅಳವಡಿಸದೆ ನಿರ್ಮಿಸಿದ ಡಿವೈಡರ್ ಗಳು ಅಪಾಯಕಾರಿಯಾಗಿದ್ದು ರಾತ್ರಿವೇಳೆ ಹಲವು ಅಪಘಾತಗಳು ಸಂಭವಿಸುತ್ತಿವೆ.
ಶಿರ್ವ ಗ್ರಾ.ಪಂ.ನ ಮಂಚಕಲ್ ಪೇಟೆಯ ಮಧ್ಯದಲ್ಲಿ ಲೋಕೋಪಯೋಗಿ ಇಲಾಖೆಯ ಆತ್ರಾಡಿ-ಶಿರ್ವ-ಬಜ್ಪೆ ರಾಜ್ಯ ಹೆದ್ದಾರಿ ಹಾದು ಹೋಗುತ್ತದೆ. ಸಮುದಾಯ ಆರೋಗ್ಯ ಕೇಂದ್ರದ ಬಳಿಯಿಂದ ಪೆಟ್ರೋಲ್ ಪಂಪ್‌ನ ವರೆಗೆ 8.5 ಮೀ. ಅಗಲದ ರಸ್ತೆಯೊಂದಿಗೆ ಡಿವೈಡರ್ ಅಳವಡಿಸಿ ದ್ವಿಪಥ ರಸ್ತೆ ನಿರ್ಮಾಣಗೊಂಡಿದೆ.
ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯ
ಮುಖ್ಯರಸ್ತೆ ವಿಸ್ತರಣೆಯಿಂದಾಗಿ ರಸ್ತೆ ನೇರವಾಗಿದ್ದು ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಾಗುತ್ತಿವೆ. ಮುಖ್ಯ ರಸ್ತೆಗೆ ಬರುವವರಿಗೆ ಡಿವೈಡರ್ ಅಪಾಯಕಾರಿಯಾಗಿ ಪರಿಣಮಿಸಿದೆ. ದ್ವಿಪಥ ರಸ್ತೆಯಾಗಿ ಪರಿವರ್ತನೆಗೊಂಡರೂ ಲೋಕೋಪಯೋಗಿ ಇಲಾಖೆ ರಸ್ತೆ ಕೂಡುವಲ್ಲಿ ಎಲ್ಲಿಯೂ ಸೂಚನಾ ಫಲಕಗಳನ್ನಾಗಲೀ, ರಿಫ್ಲೆಕ್ಟರ್ ಗಳನ್ನಾಗಲೀ ಅಳವಡಿಸಿಲ್ಲ. ಮಳೆಗಾಲದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳ್ಳದೆ ಕೆಲಸ ಸ್ಥಗಿತಗೊಂಡಿದ್ದು ಗುತ್ತಿಗೆದಾರರಿಗೆ ಹೇಳಿ ಕೂಡಲೇ ಸೂಚನಾ ಫಲಕ ಹಾಗೂ ರಿಫ್ಲೆಕ್ಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ¨ª ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಮಳೆಗಾಲ ಮುಗಿದು 3ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಅವೈಜ್ಞಾನಿಕ ಡಿವೈಡರ್
ರಸ್ತೆ ವಿಸ್ತರಣೆಯ ವೇಳೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿಂದ ಶಿರ್ವಪೆಟ್ರೋಲ್ ಪಂಪ್‌ನವರೆಗೆ ಡಿವೈಡರ್ ಅಳವಡಿಸಲಾಗಿದ್ದು, ಡಿವೈಡರ್ ಪ್ರಾರಂಭವಾಗುವಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ. ರಾತ್ರಿ ವೇಳೆ ವಾಹನ ಸವಾರರು ಡಿವೈಡರ್ ಗಮನಿಸದೆ ಅಪಘಾತ ಸಂಭವಿಸುತ್ತಿದೆ. ಅವೈಜ್ಞಾನಿಕ ಡಿವೈಡರ್‌ನಿಂದಾಗಿ ಕುತ್ಯಾರು ಮತ್ತು ಕಾಪು ಕಡೆಯಿಂದ ಬರುವ ಮತ್ತು ಹೋಗುವ ವಾಹನಗಳು ಮುಖ್ಯ ರಸ್ತೆ ಸೇರುವಲ್ಲಿ ಸಮಸ್ಯೆಯಾಗಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಬಳಿ ಮಂಗಳವಾರ ಮುಂಜಾನೆ ಡಿವೈಡರ್ ಗಮನಿಸದೆ ಲಾರಿ ಡಿವೈಡರ್ ಮೇಲೇರಿದ್ದು ಪಲ್ಟಿಯಾಗುವುದು ಸ್ವಲ್ಪದರಲ್ಲೇ ತಪ್ಪಿಹೋಗಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಓಡಾಡುವ ಯು.ಕೆ.ಆಚಾರ್ ವೃತ್ತದ ಬಳಿ ಕೂಡಾ ಅಪಘಾತ ತಾಣವಾಗಿದ್ದು ಹಲವು ಅಪಘಾತ ಸಂಭವಿಸಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇನ್ನಷ್ಟು ಅನಾಹುತಗಳು ಸಂಭವಿಸುವ ಮುನ್ನ ತುರ್ತು ಸ್ಪಂದಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ.
ಡಿವೈಡರ್‌ಗೆ ಯಾವುದೇ ಸೂಚನಾ ಫಲಕ, ರೆಫ್ಲೆಕ್ಟರ್ ಅಳವಡಿಸದಿರುವುದರಿಂದ ರಾತ್ರಿ ವೇಳೆ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಬಸ್ ಸ್ಟಾಂಡ್‌ಬಳಿಯ ಡಿವೈಡರ್‌ಗೆ ವಾಹನಗಳು ಢಿಕ್ಕಿ ಹೊಡೆದ ಹಲವು ಘಟನೆ ನಡೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ಕೆ. ಗಣೇಶ್ ಕಾಮತ್, ಸ್ಥಳೀಯ
ನಿವಾಸಿ
ತಾಂತ್ರಿಕ ತೊಂದರೆಯಿಂದಾಗಿ ರಸ್ತೆ ವಿಸ್ತರಣೆ ಕಾಮಗಾರಿಯ ಬಿಲ್‌ಪೂರ್ತಿ ಪಾವತಿಯಾಗಿಲ್ಲ. ಗುತ್ತಿಗೆದಾರರ ಮನವೊಲಿಸಿ ಕೂಡಲೇ ಸೂಚನಾ ಫಲಕ ಹಾಗೂ ರಿಫ್ಲೆಕ್ಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
ಜಗದೀಶ್ ಭಟ್, ಸಹಾಯಕ
ಕಾರ್ಯಕಾರಿ ಅಭಿಯಂತರು,
ಲೊಕೋಪಯೋಗಿ ಇಲಾಖೆ.ಉಡುಪಿ
ಸತೀಶ್ಚಂದ್ರ ಶೆಟ್ಟಿ , ಶಿರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.