ಭಕ್ತೆಯ ಮೇಲೆ ರೇಪ್ : ಅಯೋಧ್ಯೆ ದೇವಳದ ಮುಖ್ಯ ಅರ್ಚಕ ಅರೆಸ್ಟ್
Team Udayavani, Jan 2, 2019, 9:55 AM IST
ಅಯೋಧ್ಯೆ : ಭಕ್ತೆಯಾಗಿ ಬಂದಿದ್ದ ಮಹಿಳೆಯನ್ನು ತನ್ನ ಒತ್ತೆಸೆರೆಯಲ್ಲಿ ಇರಿಸಿಕೊಂಡು ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಅಯೋಧ್ಯಾ ದೇವಳದ ಮುಖ್ಯ ಅರ್ಚಕನನ್ನು ಬಂಧಿಸಿದ್ದಾರೆ.
30ರ ಹರೆಯದ ಮಹಿಳೆಯು ಕಳೆದ ಡಿ.24ರಂದು ವಾರಾಣಸಿಯಿಂದ ಅಯೋಧ್ಯೆಗೆ ಬಂದಿದ್ದಳು. ದೇವಳದ ಮಹಾಂತ ಕೃಷ್ಣ ಕಾಂತಾಚಾರ್ಯ ಅವರಲ್ಲಿ ಆಧ್ಯಾತ್ಮಿಕ ಪಾಠ ಕಲಿಯಲು ಬಂದಿದ್ದ ಆಕೆಯನ್ನು ಮಹಾಂತ ತನ್ನ ಒತ್ತೆ ಸೆರೆಯಲ್ಲಿ ಇರಿಸಿಕೊಂಡು ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಎಂದು ಅಯೋಧ್ಯೆಯ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎ ಕೆ ಸಾವ್ ಸುದ್ದಿಗಾರರಿಗೆ ತಿಳಿಸಿದರು.
ಮಹಿಳೆಗೆ ದೇವಳದಲ್ಲಿ ವಾಸ್ತವ್ಯ ಕಲ್ಪಿಸಿದ ಕಾಂತಾಚಾರ್ಯ ಆಕೆಯ ಮೇಲೆ ಅತ್ಯಾಚಾರ ಎಸಗಿದ. ಆತನ ಹಿಡಿತದಿಂದ ಹೇಗೋ ತಪ್ಪಿಸಿಕೊಂಡ ಮಹಿಳೆ ಪೊಲೀಸರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದಳು. ಧಾವಿಸಿ ಬಂದ ಪೊಲೀಸರು ಆಕೆಯನ್ನು ಪಾರುಗೊಳಿಸಿದರು.
ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಆರೋಪಿ ಅತ್ಯಾಚಾರಿ ಮಹಾಂತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.