ಮುಂಬಯಿಗರಿಂದ ತುಳುನಾಡಿನ ಅಭಿವೃದ್ಧಿ: ಕೇಮಾರು ಶ್ರೀ


Team Udayavani, Jan 2, 2019, 11:52 AM IST

0101mum17.jpg

ಮುಂಬಯಿ: ಇಂದು ಮಕ್ಕಳಲ್ಲಿ ಸಂಸ್ಕೃತಿಯ ಪ್ರಜ್ಞೆ ಇಲ್ಲದಂತಾಗಿದೆ. ಆದರೆ ಮುಂಬಯಿ ತುಳು-ಕನ್ನಡಿಗರು  ತುಳುನಾಡಿನ ಸಂಸ್ಕೃತಿಯನ್ನು ಉಳಿಸುತ್ತಿ¨ªಾರೆ. ತುಳು ನಾಡಿನವರು ಮುಂಬಯಿಗರಾದ ನಿಮ್ಮನ್ನು ನಂಬಿ¨ªಾರೆ. ಮುಂಬಯಿಗರಿಂದ ತುಳುನಾಡಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗುತ್ತಿದೆ. ಇಂದಿನ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಬೇಕಾಗಿರುವುದು ನಮ್ಮ ಧರ್ಮ. ಆದ್ದರಿಂದ ನಾವೆಲ್ಲರೂ ಸೇರಿ ಸಂಸ್ಕೃತಿ ಭರಿತ ಸಮಾಜವನ್ನು ಕಟ್ಟೋಣ ಎಂದು ಕೇಮಾರು ಸಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು.

ಆಶೀರ್ವಚನ
ಡಿ. 30ರಂದು ದಾದರ್‌ ಪಶ್ಚಿಮ ಪರೇಲ್‌ ಕಾಮಾYರ್‌ ಮೈದಾನದಲ್ಲಿ ನಡೆದ ವರ್ಲಿಯ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್‌  25ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ ಹಾಗೂ ಬೆಳ್ಳಿ ಹಬ್ಬ ಸಂಭ್ರಮದಲ್ಲಿ ನಡೆದ  ಸತ್ಸಂಗ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಪರೀಕ್ಷೆಯಲ್ಲಿ ಒಂದಿಷ್ಟು ಅಂಕಗಳು  ಕಡಿಮೆಯಾದಲ್ಲಿ ಮಕ್ಕಳು ತಮ್ಮ ಜೀವವನ್ನೇ ಕೊನೆಗೊಳಿಸುವ  ಪ್ರಸಂಗವನ್ನು ಕಾಣುತ್ತೇವೆ.  ತಾಳ್ಮೆ ಎಂಬುವುದೇ ಇಲ್ಲದಂತಾಗಿದೆ. ಮಕ್ಕಳಿಗೆ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡಬೇಕು. ಜೀವನಕ್ಕೊಂದು ಗುರಿ ಇರಲಿ ಎಂದರು.

ಶಬರಿಮಲೆಗೆ ಹೋಗುವ ಉದ್ದೇಶ ಹೆಚ್ಚಿನವರಿಗೆ ತಿಳಿದಿಲ್ಲವಾಗಿದ್ದು ಕೆಲವರು ಶಬರಿಮಲೆಯಿಂದ ಹಿಂತಿರುಗಿದ ನಂತರ ಮಧ್ಯ ಸೇವನೆಯಂತಹ ತನ್ನ ಮೊದಲಿನ ದುರಾಭ್ಯಾಸವನ್ನು ಮುಂದುವರಿಸುವುದನ್ನು  ಕಾಣುತ್ತೇವೆ. ಇದು ದುರದೃಷ್ಟಕರವಾಗಿದೆ. ನಮ್ಮ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಉಳಿಸಲು ಮಹಿಳೆಯರೂ ಕ್ರಿಯಾಶೀಲರಾಗಬೇಕು. ನಮ್ಮ ಜಾತಿ, ಮತ, ಧರ್ಮ ಯಾವುದೇ ಇರಲಿ ನಮ್ಮಲ್ಲಿ  ತುಳುವರು ಎಂಬ ಅಭಿಮಾನ ಮೊದಲು ಇರಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎÇÉಾ ಅತಿಥಿಗಳನ್ನು ಸ್ವಾಮೀಜಿಯವರು ಶಾಲು ಹೊದೆಸಿ ಗೌರವಿಸಿದರು.  ಗೌರವ ಅತಿಥಿಗಳಾಗಿ  ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ನ್ಯಾಯವಾದಿ ಸುಭಾಶ್‌ ಶೆಟ್ಟಿ,   ಟ್ರಿಕೋನ್‌ ಪೋಲಿಮರ್ಸ್‌ನ ಸಿಎಂಡಿ. ಅನಿಲ್‌ ಶೆಟ್ಟಿ ಏಳಿಂಜೆ, ಬಂಟ್ಸ್‌  ಸಂಘ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್‌ ಶೆಟ್ಟಿ ನಲ್ಯಗುತ್ತು,  ಥಾಣೆ ಹೊಟೇಲ್‌ ಉದ್ಯಮಿ ಕಡಂದಲೆ ಪರಾರಿ ಶೇಖರ ಎಲ…. ಶೆಟ್ಟಿ,  ಮೀರಾ-ಡಹಾಣೂ ಬಂಟ್ಸ್‌ನ ನಾಯಾYಂವ್‌-ವಿರಾರ್‌ ವಲಯದ ಕಾರ್ಯಾಧ್ಯಕ್ಷ ಅಶೋಕ್‌ ಕೆ. ಶೆಟ್ಟಿ,  ಬಂಟರ ಸಂಘ ವಸಯಿ-ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ ಪಕ್ಕಳ,  ಸಾಯನ್‌ ಉದ್ಯಮಿ  ಮಧುಕರ ಬೋಸ್ಲೆ, ಬಂಟರ ಸಂಘ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ನಂದಿಕೂರು, ಅಜಂತಾ ಕ್ಯಾಟರರ್ಸ್‌ನ ಜಯರಾಮ ಶೆಟ್ಟಿ ಇನ್ನ,   ಹೊಟೇಲ್‌ ಉದ್ಯಮಿ ಯಶವಂತ ಶೆಟ್ಟಿ ಬನ್ನಂಜೆ, ಕುಲಾಲ ಸಂಘ ಮುಂಡ್ಕೂರು ಗೌರವಾಧ್ಯಕ್ಷ ಐತು ಮೂಲ್ಯ ಮುಂಡ್ಕೂರು, ಸಾಕಿನಾಕಾ ಭಾÅಮರಿ ದೇವಸ್ಥಾನದ ಗೌರವ ಅಧ್ಯಕ್ಷ ಕೃಷ್ಣ ಶೆಟ್ಟಿ. ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ನ ನಿರ್ದೇಶಕ ಗಂಗಾಧರ ಅಮೀನ್‌ ಕರ್ನಿರೆ, ಸತೀಶ್‌ ಶೆಟ್ಟಿ ಪುಣೆ, ಕರ್ನಾಟಕ ಮಲ್ಲದ ದಾಮೋದರ ಪೂಜಾರಿ ಬಂಟ್ವಾಳ, ಜ್ಯೋತಿ ಕ್ರೆಡಿಟ್‌ ಸೊಸೈಟಿಯ ಅಧ್ಯಕ್ಷ ಗಿರೀಶ್‌ ಸಾಲ್ಯಾನ್‌,   ಶ್ರೀದೇವಿ ಪ್ರಿಂಟರ್ಸ್‌ನ ಪ್ರಸನ್ನ ಶೆಟ್ಟಿ ಕುರ್ಕಾಲ…, ಅಣ್ಣಿ ಶೆಟ್ಟಿ, ಸಾಧು ಶೆಟ್ಟಿ ಎಣ್ಣೆಹೊಳೆ, ವಸಾಯಿ ಅಶೋಕ್‌ ಇಂಡಸ್ಟಿÅàಸ್‌ನ ಅಶೋಕ್‌ ಶೆಟ್ಟಿ. ಕುಲಾಲ ಪ್ರತಿಷಾ§ನದ ಅಧ್ಯಕ್ಷ ಸುರೇಶ್‌ ಕುಲಾಲ…, ವರ್ಲಿ ಹೊಟೇಲ್‌ ಉದ್ಯಮಿ ಸುಜಯಾ ಆರ್‌. ಶೆಟ್ಟಿ, ರವೀಂದ್ರ ಪೂಂಜಾ, ಬಿಲ್ಲವರ ಅಸೋಸಿಯೇಶನ್‌ ಮಲಾಡ್‌ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ಶೇಖರ ಪೂಜಾರಿ, ಗಜಾನನ ಭಂಡಾರಿ, ಕುಲಾಲ ಸಂಘ ಮುಂಬಯಿಯ ಉಪಾಧ್ಯಕ್ಷ ರಘು ಮೂಲ್ಯ, ಬಂಟರ ಸಂಘ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ, ಕಲಾಪ್ರಕಾಶ ಪ್ರತಿಷಾ§ನ ಮುಂಬಯಿಯ ಪ್ರಕಾಶ್‌ ಎಂ. ಶೆಟ್ಟಿ, ಶ್ರೀ ಮದ್ಭಾರತ ಮಂಡಳಿಯ  ಅಧ್ಯಕ್ಷರಾದ ಜಗನ್ನಾಥ ಪುತ್ರನ್‌ ಅವರು ಉಪಸ್ಥಿತರಿದ್ದು ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಹದಿನೆಂಟನೆ ವರ್ಷದ ಶಬರಿಮಲೆ ಯಾತ್ರೆಗೈಯುತ್ತಿರುವ ವ್ರತಧಾರಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದಿನೇಶ್‌ ಶೆಟ್ಟಿ ಅಪ್ಪಾಜಿಬೀಡು, ವಿಜಯ್‌ ಕೆ. ಶೆಟ್ಟಿ ಸಹರ್‌ಗಾಂವ್‌ ಮತ್ತು ಮಂಜುನಾಥ ಶೆಟ್ಟಿ ರೇರೋಡ್‌ ಇವರನ್ನು ಗೌರವಿಸಲಾಯಿತು. ದಿನೇಶ್‌ ಕುಲಾಲ…, ರಘುನಾಥ ಎನ್‌.  ಶೆಟ್ಟಿ, ಅರ್ಪಿತಾ ಶೆಟ್ಟಿ, ಶಶಿಕಲಾ ಶೆಟ್ಟಿ, ಶಕುಂತಳಾ ಶೆಟ್ಟಿ ಮತ್ತು ಪ್ರಮೀಳಾ ವಿ. ಕುಲಾಲ್‌ ಅವರು ಕ್ರಮವಾಗಿ ಕಾರ್ಯಕ್ರಮ  ನಿರ್ವಹಿಸಿದರು.

ವೇದಿಕೆಯಲ್ಲಿ  ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್‌ನ ಸ್ಥಾಪಕ ರಮೇಶ್‌ ಗುರುಸ್ವಾಮಿ, ಟ್ರಸ್ಟಿಗಳಾದ ಶ್ರೀಮತಿ ಶಾಂಭವಿ ಆರ್‌. ಶೆಟ್ಟಿ, ರತ್ನಾಕರ ಜಿ. ಶೆಟ್ಟಿ, ರಘುನಾಥ ಎನ್‌. ಶೆಟ್ಟಿ, ಸುಧಾಕರ ಎನ್‌. ಶೆಟ್ಟಿ, ಪುಷ್ಪರಾಜ್‌ ಎಸ್‌. ಶೆಟ್ಟಿ, ರತ್ನಾಕರ ಆರ್‌. ಶೆಟ್ಟಿ, ಮೋಹನ್‌ ಟಿ. ಚೌಟ, ಟ್ರಸ್ಟಿ ಹಾಗೂ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಬಿ. ದಿನೇಶ್‌ ಕುಲಾಲ್‌,  ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸುರೇಶ್‌ ಎಸ್‌. ಶೆಟ್ಟಿ ಕೇದಗೆ, ಟ್ರಸಿ, ಪ್ರಧಾನ ಕಾರ್ಯದರ್ಶಿ ವಸಂತ ಕೆ. ಪೂಜಾರಿ, ಕೋಶಾಧಿಕಾರಿ ಹರೀಶ್‌ ಶೆಟ್ಟಿ ನಲ್ಲೂರು, ಉಪಾಧ್ಯಕ್ಷರಾದ ಸಂತೋಶ್‌ ವಿ. ಶೆಟ್ಟಿ ಮೊದಲಾದವರು 
ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ಭರತ್‌ ಶೆಟ್ಟಿ  ಅತ್ತೂರು, ಜತೆ ಕೋಶಾಧಿಕಾರಿ ಶ್ರೀಮತಿ ನೀಮಾ  ರಾಜೇಶ್‌ ಶೆಟ್ಟಿ, ಸಮಿತಿಯ ಸದಸ್ಯರುಗಳಾದ ಉದಯ ಶೆಟ್ಟಿ ಟಾಟಾ, ಬಾಲಚಂದ್ರ ಡಿ. ಶೆಟ್ಟಿ, ಪಾರ್ಥಸಾರತಿ ಆರ್‌. ಶೆಟ್ಟಿ, ಸನತ್‌ ಕುಮಾರ್‌ ಶೆಟ್ಟಿ, ಗಣೇಶ್‌ ಸಾಲ್ಯಾನ್‌,  ಪದ್ಮನಾಭ ಶೆಟ್ಟಿ, ಜಯಕರ ಶೆಟ್ಟಿ, ಶೇಖರ್‌ ಶೆಟ್ಟಿ, ಸತೀಶ್‌ ಪೂಜಾರಿ, ಗಣೇಶ್‌ ಶೆಟ್ಟಿ, ಸತೀಶ್‌ ಶೆಟ್ಟಿ, ರಾಜೇಶ್‌ ಶೆಟ್ಟಿ, ದಿನೇಶ್‌ ಶೆಟ್ಟಿ, ವಿಜಯ ಶೆಟ್ಟಿ, ಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.

ಸಲಹೆಗಾರರಾದ ಅರುಣ್‌ ಆಳ್ವ ಕಾಂತಾಡಿಗುತ್ತು, ಭೋಜ ಎಸ್‌. ಶೆಟ್ಟಿ ಕೇದಗೆ, ಪ್ರವೀಣ್‌ ಕುಮಾರ್‌ ಶೆಟ್ಟಿ ಕುರ್ಕಾಲ…, ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಪರವಾಗಿ ಕಾರ್ಯಾಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿ, ಕಾರ್ಯದರ್ಶಿ ವಿನೋದಾ ಜೆ. ಶೆಟ್ಟಿ, ಕೋಶಾಧಿಕಾರಿ ರೋಹಿಣಿ ಎಸ್‌. ಪೂಜಾರಿ, ಉಪ ಕಾರ್ಯಾಧ್ಯಕ್ಷೆ  ವಿಜಯಶ್ರೀ ಎಸ್‌. ಶೆಟ್ಟಿ, ಜತೆ ಕಾರ್ಯದರ್ಶಿ ದಿವ್ಯಾ ಪಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಸುಜಾತಾ ಎನ್‌. ಪುತ್ರನ್‌,  ಸದಸ್ಯರುಗಳಾದ ಶಾರದಾ ಜೆ. ಶೆಟ್ಟಿ, ನಿರ್ಮಲಾ  ಕೆ. ಶೆಟ್ಟಿ, ಪ್ರಜ್ಞಾ  ಎಸ್‌.  ಶೆಟ್ಟಿ, ರಮ್ಯಾ ಎಸ್‌.  ಶೆಟ್ಟಿ, ರಾಣಿ ಆರ್‌. ಶೆಟ್ಟಿ, ರಾಗಿಣಿ ಆರ್‌. ಶೆಟ್ಟಿ, ಸರೋಜಿನಿ ಕೆ. ಕರ್ಕೇರ, ಸುಮಿತ್ರಾ ಪಿ. ಶೆಟ್ಟಿ, ಶೋಭಾ ವಿ. ಶೆಟ್ಟಿ, ಸಲಹೆಗಾರದ ಲೀಲಾ ಎಸ್‌.  ಶೆಟ್ಟಿ, ಉಷಾ ಬಿ. ಶೆಟ್ಟಿ, ಯಶೋಧಾ ಎಸ್‌. ಶೆಟ್ಟಿ, ಕವಿತಾ ಜಿ. ಶೆಟ್ಟಿ, ಅರ್ಪಿತಾ ಪಿ. ಶೆಟ್ಟಿ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

 ಇಂದು ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ಶಬರಿಮಲೆಯಲ್ಲಿ ಆಗುತ್ತಿರುವ ಸಮಸ್ಯೆಯ ಮಧ್ಯೆ ನಾವಿದ್ದೇವೆ. ತುಳುನಾಡಿನವರಾದ ನಮ್ಮ ಸಂಸ್ಕೃತಿ ಮಾಯವಾಗುತ್ತಿದೆ. ಇಂದಿನ ಮಕ್ಕಳು ಹನುಮಾನ್‌ ದೇವರನ್ನು  ಗುರುತಿಸುವಲ್ಲಿ ವಿಫಲರಾಗುತ್ತಿರುವುದು ವಿಷಾಧನೀಯ. ಸ್ವಾಮೀಜಿಯವರು ಹೇಳಿದಂತೆ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಮಹಿಳೆಯರೂ ಮುಂದೆ ಬರಬೇಕಾಗಿದೆ .
  – ನ್ಯಾಯವಾದಿ ಸುಭಾಷ್‌ ಶೆಟ್ಟಿ  ಅಧ್ಯಕ್ಷರು, ಬೋಂಬೆ ಬಂಟ್ಸ್‌  ಅಸೋ.

 ಇಂತಹ ಪುಣ್ಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರಕಿದ್ದು ನನ್ನ ಸೌಭಾಗ್ಯ. ಇಂದು ಇಲ್ಲಿ ನಿಜವಾದ ಅಯ್ಯಪ್ಪ ಸ್ವಾಮಿಯನ್ನು ಪೂಜಿಸಿದಂತಾಗಿದೆ. ಅಪ್ಪಾಜಿ ಬೀಡುವಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಲಿ. ಇದಕ್ಕೆ ನಿಮ್ಮೊಂದಿಗೆ ನಮ್ಮ ಬೆಂಬಲವೂ ಇದೆ. ಇಂದಿನ ಸಮಾರಂಭವನ್ನು ಕಂಡಾಗ ಭಕ್ತಿಭಾವವು ಉಕ್ಕಿ ಬರುತ್ತಿದೆ.
– ಸಂತೋಷ್‌ ಶೆಟ್ಟಿ , ಅಧ್ಯಕ್ಷರು: ಬಂಟರ ಸಂಘ ಪುಣೆ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.