ಕುಂಭದಲ್ಲಿ ಐಶಾರಾಮಿ “ಇಂದ್ರಪ್ರಸ್ಥ’
Team Udayavani, Jan 3, 2019, 12:30 AM IST
ಪ್ರಯಾಗ್‌ರಾಜ್: ಈ ಬಾರಿಯ ಕುಂಭಮೇಳವನ್ನು ಅತ್ಯಂತ ಐಶಾರಾಮಿಯಾಗಿ ಹಾಗೂ ಚೊಕ್ಕವಾಗಿ ನಡೆಸಲು ತೀರ್ಮಾನಿಸಿರುವ ಉತ್ತರ ಪ್ರದೇಶ ಸರ್ಕಾರ, ಇಲ್ಲಿ ಸೇರಲಿರುವ 13 ಕೋಟಿ ಯಾತ್ರಾರ್ಥಿಗಳಿಗೆ ಉತ್ತಮ ಸೌಕರ್ಯಗಳನ್ನು ನೀಡಲು ಮುಂದಾಗಿದೆ. ಇವುಗಳಲ್ಲೊಂದು ಐಶಾರಾಮಿ ಟೆಂಟ್ ಹೌಸ್‌ಗಳ ಸಮುಚ್ಛಯ “ಇಂದ್ರಪ್ರಸ್ಥ’.
900 ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ “ಇಂದ್ರಪ್ರಸ್ಥ’ದಲ್ಲಿ ಡಿಲಕ್ಸ್, ಲಕ್ಷುರಿ ರೂಮುಗಳಿಂದ ಹಿಡಿದು ಐಶಾರಾಮಿ ವಿಲ್ಲಾ ಅಥವಾ ಸೂಟ್‌ಗಳನ್ನು ನಿರ್ಮಿಸಲಾಗಿದೆ. ಬಹುಜನರು ಒಟ್ಟಿಗೆ ಉಳಿದುಕೊಳ್ಳಬಹುದಾದ ಡಾರ್ಮಿಟೋರಿಸ್ ಮಾದರಿಯ ಟೆಂಟ್‌ಗಳಿದ್ದು, ಇವುಗಳಲ್ಲಿ ಒಂದು ರಾತ್ರಿಯ ಬಾಡಿಗೆ 1,000 ರೂ. ಇರಲಿದೆ. ಡಿಲಕ್ಸ್ ಕೊಠಡಿಯ ಬಾಡಿಗೆ ಒಂದು ರಾತ್ರಿಗೆ 13,000 ರೂ. ಆಗಿದ್ದು, ಲಕ್ಷುರಿ ರೂಮಿನ ಬಾಡಿಗೆ 18,000 ರೂ. ಇದೆ. ಇನ್ನು, ವಿಲ್ಲಾಗಳಲ್ಲಿ ರಾತ್ರಿ ತಂಗಲು 35,000 ರೂ. ತೆರಬೇಕಿದೆ. ಈಗಾಗಲೇ ಶೇ. 0ರಷ್ಟು ಟೆಂಟ್‌ಗಳು ಬುಕ್ ಆಗಿವೆ. ಇವರಲ್ಲಿ ಶೇ.30 ರಷ್ಟು ಎನ್‌ಆರ್‌ಐಗಳು.
ಪ್ರತಿಯೊಂದು ಟೆಂಟ್‌ನಲ್ಲಿಯೂ ಎರಡು ಬೆಡ್ ರೂಂಗಳು, ಸ್ನಾನ ಹಾಗೂ ಶೌಚದ ಕೋಣೆಗಳಿರುತ್ತವೆ. ಒಂದು ಹಾಲ್, ಡೈನಿಂಗ್ ಹಾಲ್ ಸಹ ಇರುತ್ತವೆ. ಹಾಲ್‌ನಲ್ಲಿ ಒಂದು ಟಿವಿ, ಐದು ಸೀಟರ್‌ಗಳ ಸೋಫಾ ಸೆಟ್ ಇರಲಿದೆ. ಈ ಟೆಂಟ್‌ಗಳ ಸನಿಹದಲ್ಲೇ 40 ಅಂಗಡಿಗಳು, ಎರಡು ರೆಸ್ಟೋರೆಂಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ದಿನದ ಮೂರೂ ಹೊತ್ತು ಇಲ್ಲಿ ವಿಧ ವಿಧದ ಸಾತ್ವಿಕ ಖಾದ್ಯಗಳು ವಿತರಣೆ ಯಾಗುತ್ತವೆ. ಜತೆಗೆ, ಸಂಗೀತ ರಾತ್ರಿಗಳಿಗಾಗಿಯೂ ಕಲಾವಿದರನ್ನು ಕರೆಯಿಸಲಾಗಿದೆ.
35,000 ರೂ. – ಐಶಾರಾಮಿ ಟೆಂಟ್‌ಗಳಲ್ಲಿ ರಾತ್ರಿಯೊಂದಕ್ಕೆ ಉಳಿಯಲು ತೆರಬೇಕಿರುವ ಹಣ
1,000 ರೂ. – ಹಾಲ್ ಮಾದರಿಯ ತಂಗುವ ವ್ಯವಸ್ಥೆಯಲ್ಲಿ ರಾತ್ರಿಯೊಂದಕ್ಕೆ ವಿಧಿಸಲಾಗುವ ದರ
13,000 ರೂ. – ಡಬಲ್ ಬೆಡ್ ರೂಂ ಕೊಠಡಿಗಳಿಗೆ ಶುಲ್ಕ
13 ಕೋಟಿ - ನಿರೀಕ್ಷಿತ ಯಾತ್ರಿಗಳ ಸಂಖ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ
Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.