ಕ್ರೀಡಾಪಟುಗಳು ಸಂಸ್ಕೃತಿ ಉಳಿಸಿ ​​​​​​ : ಸಲ್ಡಾನ್ಹಾ


Team Udayavani, Jan 3, 2019, 6:01 AM IST

3-january-7.jpg

ಮಂಗಳೂರು : ನಮ್ಮ ನಾಡಿನ ರಕ್ಷಣೆ ಮತ್ತು ಸಂಸ್ಕೃತಿಯನ್ನು ಉಳಿಸಿದ ವೀರರಲ್ಲಿ ಕೋಟಿ-ಚೆನ್ನಯರು ಪ್ರಮುಖರಾಗಿದ್ದು, ಅವರ ಹೆಸರಲ್ಲಿ ನಡೆಯುವ ಈ ಪಂದ್ಯಾಟದ ಮೂಲಕ ನಮ್ಮ ಕ್ರೀಡಾಪಟುಗಳು ನಮ್ಮ ನಾಡಿನ ರಕ್ಷಣೆಯೊಂದಿಗೆ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡಬೇಕು ಎಂದು ತೊಕ್ಕೊಟ್ಟು ಸಂತ ಸೆಬಾಸ್ಟಿಯನ್‌ ಚರ್ಚ್‌ನ ಧರ್ಮಗುರು ಜೆ. ಬಿ. ಸಲ್ಡಾನ್ಹಾ ಅಭಿಪ್ರಾಯಪಟ್ಟರು.

ತೊಕ್ಕೊಟ್ಟು ಜಂಕ್ಷನ್‌ ಬಾಯ್ಸ್  ಹಾಗೂ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ ಮಂಗಳೂರು ಇದರ ಆಶ್ರಯದಲ್ಲಿ ತೊಕ್ಕೊಟ್ಟು ಅಂಬೇಡ್ಕರ್‌ ಮೈದಾನದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ 70 ಕೆ.ಜಿ. ವಿಭಾಗದ ಕೋಟಿ ಚೆನ್ನಯ ಟ್ರೋಫಿ ಪ್ರೊ ಕಬಡ್ಡಿ ಪಂದ್ಯಾಟದ ಉದ್ಘಾಟನ ಕಾರ್ಯಕ್ರಮದಲ್ಲ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್‌ ರಶೀದ್‌ ಮಾತನಾಡಿ, ಕ್ರೀಡಾ ಪ್ರೇಮಿಗಳನ್ನು ಆಕರ್ಷಿಸುವ ಕಾರ್ಯ ಶ್ಲಾಘನೀಯ. ಹುಟ್ಟು ಸಾವಿನ ನಡುವೆ ಜನರು ನೆನಪಿಡುವ ಕಾರ್ಯವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಇಂದಿನ ಯುವ ಜನತೆ ಎಲ್ಲ ಧರ್ಮದವರನ್ನು ಒಂದುಗೂಡಿಸಬೇಕು ಎಂದರು. ಶ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್‌ ಉದ್ಘಾಟಿಸಿದರು.

ಈ ಸಂದರ್ಭ ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸತೀಶ್‌ ಕರ್ಕೇರ ಟ್ರೋಫಿ ಅನಾವರಣಗೊಳಿಸಿದರು. ಕಾಪಿಕಾಡು ಶ್ರೀ ಉಮಾಮಹೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್‌ ಕ್ರೀಡಾಂಗಣ ಉದ್ಘಾಟಿಸಿದರು. ಬಜರಂಗದಳ ಪ್ರಾಂತ ಸಂಯೋಜಕ ಕೆ.ಆರ್‌. ಸುನಿಲ್‌, ಪುಂಜಾಲಕಟ್ಟೆ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಉದ್ಯಮಿ ಚಂದ್ರಹಾಸ್‌ ಪಂಡಿತ್‌ಹೌಸ್‌, ನಗರಸಭಾ ಸದಸ್ಯರಾದ ಆಯೂಬ್‌ ಮಂಚಿಲ, ಭವಾನಿ ಕಾಪಿಕಾಡು, ಗೀತಾ ಬಾೖ, ಎಬಿಸ ತೊಕ್ಕೊಟ್ಟು ಇದರ ಅಧ್ಯಕ್ಷ ಲೋಹಿತ್‌ ಬಂಗೇರ, ಉದ್ಯಮಿಗಳಾದ ಹರಿಶ್ಚಂದ್ರ ಸಾಲ್ಯಾನ್‌, ಸುಂದರ ಗಟ್ಟಿ, ಅಬ್ದುಲ್‌ ರಹೀಂ, ಸುದೇಶ್‌ ಉಳ್ಳಾಲ ಬೈಲು, ಕರ್ನಾಟಕ ರಾಜ್ಯ ಕೈಗಾರಿಕಾ ಮಹಾ ಮಂಡಳಿ ಉಪಾಧ್ಯಕ್ಷ ಮಯೂರ್‌ ಉಳ್ಳಾಲ್‌, ಕೊಲ್ಯ ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷ ಈಶ್ವರ್‌ ಕನೀರುತೋಟ, ದೇರಳಕಟ್ಟೆ ರೋಟರಿ ಕ್ಲಬ್‌ ಅಧ್ಯಕ್ಷ ಪುರುಷೋತ್ತಮ ಅಂಚನ್‌, ಸುಮನ್‌ ಪೂಜಾರಿ ಉಳ್ಳಾಲಬೈಲು, ರವಿ ಸುವರ್ಣ, ಸಂಯೋಜಕ ಭಗವಾನ್‌ ದಾಸ್‌ ತೊಕ್ಕೊಟ್ಟು, ಶರತ್‌ ಶೆಟ್ಟಿ, ಅರುಣ್‌ ಭಂಡಾರಿ, ವಿನೋದ್‌, ಸೂರಜ್‌ ಮೊದಲಾದವರು ಉಪಸ್ಥಿತರಿದ್ದರು. ಪ್ರವೀಣ್‌ ಎಸ್‌. ಕುಂಪಲ ಸ್ವಾಗತಿಸಿ, ದಿವಾಕರ ಉಪ್ಪಳ ನಿರ್ವಹಿಸಿದರು.

ಟಾಪ್ ನ್ಯೂಸ್

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.