ತುಳುನಾಡಿನ ವೀರ ಪುರುಷರ ತಾಯಿಯ ಕಥೆ ಈಗ ಸಿನೆಮಾ!


Team Udayavani, Jan 3, 2019, 7:02 AM IST

3-january-11.jpg

ತುಳುವ ಮಣ್ಣಿನಲ್ಲಿ ಬಲ್ಲಿದರ ಪರವಾಗಿ ಪರಾಕ್ರಮ ತೋರಿದ ವೀರರಾದ ‘ಕೋಟಿ ಚೆನ್ನಯ’ರ ತಾಯಿ ‘ದೇಯಿ ಬೈದ್ಯೆತಿ’ ಕಥೆ ಈಗ ಸಿನೆಮಾ ರೂಪದಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಸೂರ್ಯೋದಯ ಪೆರಂಪಳ್ಳಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತುಳುನಾಡಿನ ಜನಪದ ಮಹಾಕಾವ್ಯವಾದ ಬೈದೆರ್ಲ ಪಾಡ್ದನದ ಬಗ್ಗೆ ಅಧ್ಯಯನ ಮಾಡಿದ್ದ ನಿರ್ದೇಶಕರು, ಹತ್ತು ವರ್ಷಗಳ ಹಿಂದೆಯೇ ‘ವಿದ್ಯಾಕ್ರಾಂತಿಯ ವೀರರು ಕೋಟಿ ಚೆನ್ನಯರು’ ಎಂಬ ಕೃತಿ ರಚಿಸಿದ್ದರು. ಹಾಗೆಯೇ ತುಳುನಾಡಿನಲ್ಲಿ ಆರಾಧನೆಗೊಳ್ಳುತ್ತಿರುವ ಗರಡಿ ಆಲಯಗಳನ್ನು ನಿರ್ಮಿಸುವ ಬಗ್ಗೆಯೂ ಈ ಮೊದಲು ಟೆಲಿ ಸಿನೆಮಾ ಮಾಡಿದ್ದರು. ಈ ಸಿನೆಮಾಕ್ಕಾಗಿ 500 ವರ್ಷಗಳ ಹಿಂದಿನ ಕಾಲವನ್ನು ಸೃಜಿಸಲಾಗಿದೆ. ಅಂದಿನ ಕಾಲದಲ್ಲಿದ್ದ ಸನ್ನಿವೇಶವನ್ನು ಕಟ್ಟಿಕೊಡಲಾಗಿದೆ. ಆಗಿನ ಸಂದರ್ಭಕ್ಕೆ ಸರಿಹೊಂದುವ ಭವ್ಯ ಮನೆಗಳ ಸೆಟ್‌ಗಳನ್ನು ನಿರ್ಮಿಸಿ, ಕರಾವಳಿಗರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆಗಳ ಓರಣಗಳನ್ನು, ತುಳುನಾಡಿನ ಅಗೋಚರ ಸಂಪ್ರದಾಯಗಳ ಕಟ್ಟುಪಾಡುಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ.

ದೇವರಾಜ್‌ ಪಾಲನ್‌, ರಾಜ್‌ಕೃಷ್ಣ, ಅಮಿತ್‌ರಾವ್‌ ಅವರ ಸಹನಿರ್ದೇಶನ ಹಾಗೂ ಸಂಜೀವ ಪೂಜಾರಿ ಹೆರ್ಗ, ಕಿರಣ್‌ ಹೆಗ್ಡೆ ಬಿಜ್ರಿ ಅವರು ನಿರ್ಮಾಣ ಜವಾಬ್ದಾರಿ ವಹಿಸಿದ್ದಾರೆ. ಕಲಾವತಿ ದಯಾನಂದ್‌ ಅವರ ಜತೆಗೆ ಸೂರ್ಯೋದಯ್‌ ಪೆರಂಪಳ್ಳಿ,ಲಹರಿ ಕೋಟ್ಯಾನ್‌, ಸುರೇಶ್‌ ಸಾಲ್ಯಾನ್‌, ಕಾಲೇಶ್‌ ಹಿನ್ನೆಲೆ ಗಾಯನವಿದೆ.

ತುಳುವ ಮಣ್ಣಿನಲ್ಲಿ ಬಲ್ಲಿದರ ಪರವಾಗಿ ಪರಾಕ್ರಮ ತೋರಿದ ವೀರರಾದ ‘ಕೋಟಿ ಚೆನ್ನಯ’ರ ತಾಯಿ ‘ದೇಯಿ ಬೈದ್ಯೆತಿ’ಯ ಜೀವನಗಾಥೆಯನ್ನು ಸಿನೆಮಾದಲ್ಲಿ ತೋರಿಸಲಾಗಿದೆ. ಸಂಶೋಧಕರಾದ ಬನ್ನಂಜೆ ಬಾಬು ಅಮೀನ್‌, ದಾಮೋದರ್‌ ಕಲ್ಮಾಡಿ, ಡಾ|ಗಣನಾಥ್‌ ಶೆಟ್ಟಿ ಎಕ್ಕಾರ್‌, ಚೆಲುವಾರಾಜ್‌ ಪೆರಂಪಳ್ಳಿ, ಬಾಬು ಶಿವಪೂಜಾರಿ ಮುಂಬಯಿಯವರ ಖ್ಯಾತ ಸಂಶೋಧಕರ ಆಲೋಚನೆಗಳನ್ನು ಈ ಸಿನೆಮಾದಲ್ಲಿ ಪ್ರತಿಬಿಂಬಿಸಲಾಗಿದೆ. 2 ಗಂಟೆ 50 ನಿಮಿಷಗಳ ಕಾಲ ಪ್ರೇಕ್ಷಕರನ್ನು 500 ವರ್ಷಗಳ ಹಿಂದಕ್ಕೆ ಕೊಂಡೊಯ್ಯುವ ಸಿನೆಮಾ ತಂಡದ ಶ್ರಮ ಕೆಲವೇ ದಿನದಲ್ಲಿ ಪ್ರತಿಧ್ವನಿಸಲಿದೆ.

ಕನ್ನಡ, ತಮಿಳು, ತುಳು ಚಿತ್ರರಂಗದಲ್ಲಿ ಸುಮಾರು 25 ವರ್ಷಗಳ ಕಾಲ ದುಡಿದಿರುವ ಸೂರ್ಯೋದಯ್‌ ಪೆರಂಪಳ್ಳಿ ನಿರ್ದೇಶನದ ಚೊಚ್ಚಲ ಚಲನಚಿತ್ರ ಇದು. ಭಾಸ್ಕರ್‌ ರಾವ್‌ ಸಂಗೀತ, ಮಣಿಕಾಂತ್‌ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ ಮತ್ತು ಹರೀಶ್‌ ಪೂಜಾರಿ ಕುಕ್ಕುಂಜೆ ಅವರ ಛಾಯಾಗ್ರಹಣ, ಮೋಹನ್‌ ಎಲ್‌. ಸಂಕಲನ ಮಾಡಿದ್ದಾರೆ. ರವಿ ಪೂಜಾರಿ ಹಿರಿಯಡ್ಕ ಹಾಗೂ ದಿನೇಶ್‌ ಸುವರ್ಣ ರಾಯಿ ಕಲಾ ನಿರ್ದೇಶಕರು. ಉಮೇಶ್‌ ಪೂಜಾರಿ ಬೆಳ್ತಂಗಡಿ ಸಹನಿರ್ಮಾಪಕರು.

ಸೀತಾ ಕೋಟೆ, ಚೇತನ್‌ ರೈ ಮಾಣಿ, ಸೌಜನ್ಯಾ ಹೆಗ್ಡೆ, ಅಮಿತ್‌ ರಾವ್‌, ಎಂ.ಕೆ. ಮಠ, ಪ್ರಕಾಶ್‌ ಧರ್ಮನಗರ, ಅಶ್ವಿ‌ನಿ ಕೋಟ್ಯಾನ್‌, ಕಾಜೋಲ್‌ ಕುಂದರ್‌, ಪ್ರವೀಣ್‌ ಶೆಟ್ಟಿ, ವಿಜಯ್‌ ಕುಮಾರ್‌, ಸುನಿಲ್‌ ನೆಲ್ಲಿಗುಡ್ಡೆ, ಲಕ್ಷ್ಮಣ್‌ ಮಲ್ಲೂರ್‌, ಸುನಿಲ್‌ ಪಲ್ಲಮಜಲು, ಎಚ್‌.ಕೆ. ನಯನಾಡು, ಸುನೀತಾ ಎಕ್ಕೂರ್‌, ಮಂಜುಭಾಷಿನಿ, ಕಿರ್ಲೋಸ್ಕರ್‌ ಸತ್ಯನಾರಾಯಣ್‌, ಸುಜಾತಾ ಶೆಟ್ಟಿ, ಮೋನಿಕಾ ಆಂಡ್ರದೆ, ನಾಗರಾಜ್‌ ವರ್ಕಾಡಿ, ಸುನಿಲ್‌ ಪಲ್ಲಮಜಲ್‌, ಭಾಸ್ಕರ್‌ ಮಣಿಪಾಲ್‌, ಎಂ. ಸುಬ್ರಹ್ಮಣ್ಯ ಪೈ, ಸೂರ್ಯೋದಯ್‌, ಪವಿತ್ರಾ ಶೆಟ್ಟಿ ಕಟಪಾಡಿ, ಇಡ್ಲಿ ರಾಜ, ಶ್ರೀನಾಥ್‌ ವಶಿಷ್ಟ, ತಾರನಾಥ್‌ ಸುರತ್ಕಲ್‌, ಪ್ರಕಾಶ್‌ ಭಟ್‌ ಪಡುಬೆಳ್ಳೆ, ಆನಂದ್‌, ಸಂಗೀತ, ರಾಜೇಶ್‌ ಸೈಲಾರ್ಕ್‌, ಯಶಸ್ಸ್ ಸೂರ್ಯ, ಶ್ರೇಜಲ್‌ ಪೂಜಾರಿ, ಸಮೃದ್ಧಿ ಪ್ರಕಾಶ್‌ ಭಟ್‌, ವರ್ಷ ಸಿ. ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ.

 ದಿನೇಶ್‌ ಇರಾ

ಟಾಪ್ ನ್ಯೂಸ್

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

KN-Rajaanna

Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

7-

UV Fusion: ಧರೆಯ ಮೇಲೊಂದು ಅಚ್ಚರಿ ಧಾರಾವಿ

6-uv-fusion

UV Fusion: ಪುಟ್ಟ ಕಂಗಳ ಕುತೂಹಲ

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Untitled-1

Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು

Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು

Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

missing

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.