ಮಹಾಕುಂಭಮೇಳಕ್ಕೆ ತ್ರಿವೇಣಿ ಸಂಗಮದಲ್ಲಿ ಸಿದ್ಧತೆ

Team Udayavani, Jan 3, 2019, 11:53 AM IST

mys-1.jpg

ತಿ.ನರಸೀಪುರ: ಫೆಬ್ರುವರಿಯಲ್ಲಿ ಮೂರು ದಿನಗಳ ಕಾಲ 11ನೇ ಮಹಾ ಕುಂಭಮೇಳ ನಡೆಯುವ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಅವರು ಅಧಿಕಾರಿಗಳೊಂದಿಗೆ ಉತ್ಸವ ಸಿದ್ಧತೆಗೆ ತ್ರಿವೇಣಿ ಸಂಗಮದಲ್ಲಿ ಬುಧವಾರ ಪರಿಶೀಲನೆ ನಡೆಸಿದರು.

ಕಾವೇರಿ, ಕಪಿಲೆ ಹಾಗೂ ಸ್ಪಟಿಕ ಸರೋವರ ನದಿಗಳ ಸಂಗಮಗೊಳ್ಳುವ ಪಟ್ಟಣದ ಹಳೇ ತಿರುಮಕೂಡಲಿ ನಲ್ಲಿ ಫೆ.17, 18 ಹಾಗೂ 19 ರಂದು ಮೂರು ದಿನಗಳ ಕಾಲ ಕುಂಭಮೇಳ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದ್ದ ಸೋಮೇಶ್ವರನಾಥ ಸ್ವಾಮೀಜಿ ಹಾಗೂ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ ನೇತೃತ್ವದ ಅಧಿಕಾರಿಗಳ ತಂಡ ಯಜ್ಞ ಯಾಗಗಳ ನಡೆಯುವ ಅಗಸ್ತೇಶ್ವರ ದೇವಾಲಯ, ಧಾರ್ಮಿಕ ಸಮಾರಂಭ ನಡೆಯುವ ತ್ರಿವೇಣಿ ಸಂಗಮ ನದಿ ಪಾತ್ರ ಹಾಗೂ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು.

ಯಾಗ ಮಂಟಪ ಸ್ಥಾಪನೆ: ಅಗಸ್ತೇಶ್ವರ ದೇವಾಲಯದ ಜಿರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿ ರುವುದರಿಂದ ಈ ಬಾರಿ ಮುಂಭಾಗದ ಆವರಣದಲ್ಲಿ ಯಾಗ ಮಂಟಪ ಸ್ಥಾಪನೆಗೆ ಸೂಕ್ತ ವೇದಿಕೆ ನಿರ್ಮಾಣ ಹಾಗೂ ಸ್ವತ್ಛತಾ ಕಾರ್ಯವನ್ನು ಆರಂಭಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಯಿತು.

ವ್ಯಾಸರಾಜ ಮಠ ಹಾಗೂ ಶೃಂಗೇರಿ ಮಠದ ಮುಂಭಾಗ ರಸ್ತೆಯ ಮುಂದುವರಿದ ಕಾಮಗಾರಿಗೆ ಯೋಜನೆ ರೂಪಿಸಿ ರಸ್ತೆಗೆ ಹೊಂದಿಕೊಂಡಂತೆ ಮಠಗಳ ಮುಂಭಾಗ ಮಟ್ಟಿಲುಗಳ ಮಾದರಿಯಲ್ಲಿ ಕಾಮಗಾರಿಯನ್ನು ನಡೆಸುವಂತೆ ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಅಪರ ಜಿಲ್ಲಾಧಿಕಾರಿ ತಾಕೀತು ಮಾಡಿದರು. 

ಭಕ್ತರ ಸ್ನಾನಕ್ಕೆ ವ್ಯವಸ್ಥೆ: ನದಿ ಪಾತ್ರವನ್ನು ಸ್ವತ್ಛಗೊಳಿಸಿ, ಪುಣ್ಯ ಸ್ನಾನ ಮಾಡುವ ಭಕ್ತಾದಿಗಳಿಗೆ ಅಪಾಯವಾಗ ದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗೆ ಬ್ಯಾರಿಕೇಡ್‌ ಹಾಕುವುದು ಹಾಗೂ ಗುಂಜಾ ನರಸಿಂಹಸ್ವಾಮಿ ದೇವಾಲಯದಿಂದ ನದಿಯನ್ನು ದಾಟಲು ಬೋಟಿಂಗ್‌ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಟಿ.ಯೋಗೇಶ ಸಲಹೆ ನೀಡಿದರು.

ಧಾರ್ಮಿಕ ಸಮಾರಂಭ ವೇದಿಕೆ ನಿರ್ಮಾಣ ಸೇರಿದಂತೆ ಬರುವ ಜನರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕೈಗೊಳ್ಳಬೇಕಾದ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

 ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಫೆ.17 ರಂದು ಅಂಕುರಾರ್ಪಣೆಯೊಂದಿಗೆ ಹೋಮ ಹವನಗಳನ್ನು ಆರಂಭಿಸಿ 11ನೇ ಮಹಾಕುಂಭಮೇಳವನ್ನು ವಿಧ್ಯುಕ್ತ ವಾಗಿ ಆರಂಭಿಸಲಾಗುವುದು. 18ರ ಸಂಜೆ ಗುಂಜಾ ನರಸಿಂಹಸ್ವಾಮಿ ದೇವಾಲಯದಿಂದ ಸಾಧು-ಸಂತರು ಹಾಗೂ ಶ್ರೀಗಳ ಪುರಪ್ರವೇಶ ನಡೆಯಲಿದ್ದು, ಯಾಗ ಶಾಲೆಯ ಪ್ರವೇಶವಾಗಲಿದೆ. 19ಕ್ಕೆ ಪೂರ್ಣಾಹುತಿ ಯೊಂದಿಗೆ ಸಂತರೆಲ್ಲರೂ ಪುಣ್ಯಸ್ನಾನ ಮಾಡಲಿದ್ದಾರೆ.

ಮೂರು ದಿನಗಳ ಕಾಲವೂ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇನ್ನೂ ಒಂದೂವರೆ ತಿಂಗಳಿದೆ ಎಂದು ಕಾಯುವ ಬದಲು ಇಂದಿನಿಂದಲೇ ಪೂರ್ವ ಸಿದ್ಧತೆಗಳನ್ನು ಆರಂಭಿಸಬೇಕೆಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕೈಲಾಸ ಆಶ್ರಮದ ವೆಂಕಟೇಶ್‌ ಚೈತನ್ಯ, ಜಿಪಂ ಸದಸ್ಯ ಜಯಪಾಲ್‌ ಭರಣಿ, ಪುರಸಭಾ ಸದಸ್ಯ ಎಸ್‌.ಕೆ.ಕಿರಣ, ಕಾಂಗ್ರೆಸ್‌ ಮುಖಂಡ ಪಿ.ಸ್ವಾಮಿನಾಥ್‌ಗೌಡ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್‌ ಎಚ್‌.ಕೆ.ರಮೇಶ್‌, ಇಲಾಖೆ ಎಂಜಿನಿಯರ್‌ ಸತೀಶ್‌, ತಾಪಂ ಕಾರ್ಯನಿರ್ವಹಕ ಅಧಿಕಾರಿ ಡಾ.ಬಿ.ಎಸ್‌.ನಂಜೇಶ್‌, ತಹಶೀಲ್ದಾರ್‌ ಎಚ್‌.ಎಸ್‌.ಪರಮೇಶ, ಜಿಪಂ ಎಇಇ ಜೆ.ಎಂ.ಸುರೇಶ್‌, ಕಾವೇರಿ ನೀರಾವರಿ ನಿಗಮದ ಎಇಇ ಕೆಂಪರಾಜು, ಸಹಾಯಕ ಎಂಜನಿಯರ್‌ ಷಫಿಕ್‌, ಯೋಗೇಶ, ಸುಧೀಂದ್ರ, ಪುರಸಭೆ ಮುಖ್ಯಾಧಿಕಾರಿ ಅಶೋಕ್‌, ಆರೋಗ್ಯ ನಿರೀಕ್ಷಕ ಆರ್‌.ಚೇತನ್‌ಕುಮಾರ್‌, ಕೆಎಸ್‌ಆರ್‌ಟಿಸಿ ಸಂಚಾರ ವ್ಯವಸ್ಥಾಪಕಿ ಎನ್‌.ಪುಪ್ಪಾ, ಅಂಗಡಿ ಎನ್‌.ಶೇಖರ, ಟಿ.ಸಿ.ಫ‌ಣೀಶ್‌ಕುಮಾರ್‌, ಫ್ಯಾನ್ಸಿ ಮೋಹನ, ಬಿ.ಮಹದೇವ ಇತರರಿದ್ದರು.

ಕುಂಭಮೇಳ ಪ್ರಚಾರಕ್ಕೆ ಆದ್ಯತೆ ನೀಡಿ ತಿರುಮಕೂಡಲಿನಲ್ಲಿ ನಡೆಯುವ ದಕ್ಷಿಣ ಭಾರತದ ಕುಂಭಮೇಳಕ್ಕೆ ಪ್ರಚಾರದ ಕೊರತೆ ಯಾಗುತ್ತಿದ್ದು, 11ನೇ ಮಹಾ ಕುಂಭಮೇಳಕ್ಕೆ ವ್ಯವಸ್ಥಿತವಾಗಿ ಪ್ರಚಾರ ಮಾಡಲು ಜಿಲ್ಲಾಡಳಿತ ಆದ್ಯತೆ ನೀಡಬೇಕು. ಅಲ್ಲದೇ ಪಟ್ಟಣದ ವ್ಯಾಪ್ತಿಯಲ್ಲಿ ಮತ್ತೂಂದು ಸಭೆ ನಡೆಸಬೇಕು. ಪ್ರತಿಯೊಂದು ವಿಚಾರವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳ ಮೂಲಕ ಮಾಡ ಬೇಕು ಎಂದು ಟಿಎಪಿಸಿಎಂಎಸ್‌ನ ಮಾಜಿ ನಿರ್ದೇಶಕ ಬಿ.ಮಹದೇವ ಸಲಹೆ ನೀಡಿದರೆ, ಕಸಬಾ ಪಿಎಸಿಸಿಎಸ್‌ ನಿರ್ದೇಶಕ ಅಂಗಡಿ ಎನ್‌.ಶೇಖರ ಮಾತನಾಡಿ, ಕುಂಭಮೇಳದಲ್ಲಿ ಲಕ್ಷಾಂ ತರ ಜನರು ಪುಣ್ಯಸ್ನಾನ ಮಾಡುವುದರಿಂದ ಕಾವೇರಿ ಮತ್ತು ಕಪಿಲ ನದಿಗೆ ಕೊಳಚೆ ನೀರು ಸೇರುವುದನ್ನು ತಾತ್ಕಾಲಿಕವಾಗಿ ತಡೆಗಟ್ಟಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಬೇಕು ಎಂದು ಮನವಿ ಮಾಡಿದರು.

ಪ್ಲಾಸ್ಟಿಕ್‌ ಬಾಟಲಿ ಬದಲು ಕ್ಯಾನ್‌ ನೀರು ದಕ್ಷಿಣ ಭಾರತದ 11ನೇ ಮಹಾಕುಂಭಮೇಳದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ನಿರ್ಬಂಧಿಸಲು ಈ ಬಾರಿ ಬರುವ ಭಕ್ತರಿಗೆ ಹಾಗೂ ಗಣ್ಯರಿಗೆ ಪ್ಲಾಸ್ಟಿಕ್‌ನ ಬಾಟಲ್‌ಗ‌ಳಲ್ಲಿ ಕುಡಿಯುವ ನೀರನ್ನು ನೀಡುವುದರ ಬದಲು ನಿಗದಿತ ಸ್ಥಳಗಳಲ್ಲಿ ಕ್ಯಾನ್‌ಗಳನ್ನು ಇಟ್ಟು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಬೇಕು. ಪ್ಲಾಸ್ಟಿಕ್‌ ಬಾಟಲುಗಳಲ್ಲಿ ನೀರನ್ನು ಕುಡಿದು ಅವುಗಳನ್ನು ನದಿಗೆ ಬೀಸಾ ಡುವುದರಿಂದ ತ್ರಿವೇಣಿ ಸಂಗಮ ಮತ್ತಷ್ಟು ಕಲುಷಿತಗೊಳ್ಳುವುದನ್ನು ತಡೆಗಟ್ಟಲು ಕ್ಯಾನ್‌ ಗಳಲ್ಲಿ ಕುಡಿಯುವ ನೀರನ್ನು ನೀಡುವುದು ಸೂಕ್ತವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ ತಿಳಿಸಿದರು.

ಸಾರ್ವಜನಿಕ ವಾಹನಗಳಿಗೆ ಪ್ರತ್ಯೇಕ ನಿಲ್ದಾಣ ಕುಂಭಮೇಳ ಧಾರ್ಮಿಕ ಉತ್ಸವದ ವೇಳೆ ಸಂಚಾರ ದಟ್ಟಣೆ ಆಗುವುದನ್ನು ತಡೆಗಟ್ಟಲು ಸಾರ್ವಜನಿಕ ವಾಹನಗಳಿಗೆ ನಿಲ್ದಾಣವೊಂದನ್ನು ತೆರೆಯಲಾಗುವುದು. ಸಮಾರಂಭ ನಡೆಯುವ ಹಳೇ ತಿರುಮಕೂಡಲಿಗೆ ಗಣ್ಯರ ವಾಹನಗಳಿ ಗಷ್ಟೇ ಪ್ರವೇಶ ಕಲ್ಪಿಸುವುದು ಸರಿಯಾಗಿದೆ. ಅದಕ್ಕಾಗಿ 5 ಎಕರೆ ಜಾಗದಲ್ಲಿ ವಾಹನಗಳ ನಿಲ್ದಾಣಕ್ಕೆ ವ್ಯವಸ್ಥೆ ಮಾಡಬೇಕಿದೆ ಎಂದು ವೃತ್ತ ನಿರೀಕ್ಷಕ ಎಂ.ಆರ್‌.ಲವ ತಿಳಿಸಿದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

11

KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!

Hanuma-mala

SriRangapattana: ಹನುಮ ಮಾಲಾಧಾರಿಗಳಿಂದ ಮಸೀದಿ ಪ್ರವೇಶ ಯತ್ನ

HD-Kote

H.D.Kote: ಹೆಬ್ಬುಲಿ ದಾಳಿಗೆ ಒಂದೂವರೆ ವರ್ಷದ ಮರಿ ಹುಲಿ ಸಾವು!

court

Mysuru: ಕ್ಷುಲ್ಲಕ ಕಾರಣಕ್ಕೆ ಜೋಡಿ ಕೊ*ಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.