ತರಬೇತಿ ನೀಡಿ ನೌಕರಿ ಕಲ್ಪಿಸುವ ಕೌಶಲ್ಯ ಕೇಂದ್ರ

Team Udayavani, Jan 4, 2019, 5:59 AM IST

m1-tarabeti.jpg

ಮೈಸೂರು: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ, ನಿರುದ್ಯೋಗಿ ಯುವ ಜನರಿಗೆ ವೃತ್ತಿ ಕೌಶಲ್ಯವನ್ನು ಕಲಿಸುವ ಜೊತೆಗೆ ಉದ್ಯೋಗವನ್ನೂ ಕೊಡಿಸುತ್ತಾ ಬಂದಿದೆ.

2017ರ ಜೂನ್‌ 15ರಂದು ಮೈಸೂರು ತಾಲೂಕು ಇಲವಾಲ ಬಸ್‌ ನಿಲ್ದಾಣದ ಮೊದಲ ಮಹಡಿಯಲ್ಲಿ ಆರಂಭವಾದ ಮೈಸೂರಿನ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ, ಕಳೆದ ಒಂದೂವರೆ ವರ್ಷದಲ್ಲಿ 738 ಜನರಿಗೆ ವೃತ್ತಿ ತರಬೇತಿ ನೀಡಿ, 483 ಜನರಿಗೆ ಉದ್ಯೋಗ ದೊರಕಿಸಿ ಕೊಟ್ಟಿದೆ.

ಎಸ್‌ಎಸ್‌ಎಲ್‌ಸಿ, ಐಟಿಐ, ಪಿಯುಸಿ, ಡಿಪ್ಲೋಮಾ ಮತ್ತು ಯಾವುದೇ ಪದವಿ ಪಡೆದಿರುವ 18 ರಿಂದ 35 ವರ್ಷ ವಯಸ್ಸಿನ ಯಾವುದೇ ಯುವಜನರು ಸೂಕ್ತ ದಾಖಲೆಗಳೊಂದಿಗೆ ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಂಡು ಉಚಿತವಾಗಿ ತಾಂತ್ರಿಕ ಹಾಗೂ ತಾಂತ್ರಿಕೇತರ ವೃತ್ತಿ ತರಬೇತಿ ಪಡೆದುಕೊಳ್ಳಬಹುದು. ಇಲ್ಲಿ ತರಬೇತಿ ಪಡೆದವರಿಗೆ ಉದ್ಯೋಗ ದೊರಕಿಸುವ ಕೆಲಸವನ್ನೂ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಮಾಡುತ್ತಿದೆ. 

ವೃತ್ತಿ ತರಬೇತಿ: ಅಸಿಸ್ಟೆಂಟ್‌ ಎಲೆಕ್ಟ್ರಿಷಿಯನ್‌ 55 ದಿನಗಳು, ಫ‌ುಡ್‌ ಆ್ಯಂಡ್‌ ಬೆವರೇಜಸ್‌ ಸ್ಟಿವಾರ್ಡ್‌- 45 ದಿನಗಳು, ರಿಟೇಲ್‌ ಸೇಲ್ಸ್‌ ಅಸೋಸಿಯೇಟ್‌ 40 ದಿನಗಳು, ಡೊಮೆಸ್ಟಿಕ್‌ ಐಟಿ ಹೆಲ್ಪ್ಡೆಸ್ಕ್ ಅಟೆಂಡೆಂಟ್‌ 55 ದಿನಗಳು, ಫೀಲ್ಡ್‌ ಟೆಕ್ನಿಷಿಯನ್‌ ಅದರ್‌ ಹೋಮ್‌ ಅಫ್ಲೈಯನ್ಸಸ್‌ 50 ದಿನಗಳು,

ಫೀಲ್ಡ್‌ ಟೆಕ್ನಿಷಿಯನ್ಸ್‌ ಕಂಪ್ಯೂಟರ್‌ ಅಂಡ್‌ ಫೆರಿಫೆರಲ್ಸ್‌ 45 ದಿನಗಳ ತರಬೇತಿ ಜೊತೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕೇಂದ್ರದಲ್ಲಿ ಬೇಸಿಕ್‌ ಕಂಪ್ಯೂಟರ್‌ ಹಾಗೂ ನ್ಪೋಕನ್‌ ಇಂಗ್ಲೀಷ್‌ ತರಬೇತಿಯನ್ನೂ ನೀಡಲಾಗುತ್ತಿದೆ. ಕೇಂದ್ರದಲ್ಲಿ ತರಬೇತಿ ಮುಗಿಸಿದ ಯುವಜನರಿಗೆ ಕಾಲ ಕಾಲಕ್ಕೆ ಉದ್ಯೋಗ ಮೇಳ ಆಯೋಜಿಸಿ ಉದ್ಯೋಗಾವಕಾಶಕ್ಕೆ ಸಹಾಯವನ್ನೂ ಮಾಡಲಾಗುತ್ತಿದೆ. 

483 ಮಂದಿಗೆ ಉದ್ಯೋಗ: ಕೇಂದ್ರ ಆರಂಭವಾದ ಈ ಒಂದೂವರೆ ವರ್ಷಗಳಲ್ಲಿ 852 ಯುವಜನರು ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ 738 ಜನರು ತರಬೇತಿ ಪೂರ್ಣಗೊಳಿಸಿದ್ದಾರೆ. ಈ ರೀತಿ ತರಬೇತಿ ಪಡೆದವರಲ್ಲಿ 483 ಜನರು ಈಗಾಗಲೇ ಬೆಂಗಳೂರು, ಮೈಸೂರಿನ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ.

ಪ್ರಮುಖವಾಗಿ ಬೆಂಗಳೂರಿನ ಡಿ ಮಾರ್ಟ್‌, ಈಸ್ಟ್‌ ಇಂಡಿಯಾ, ವಿಶಾಲ್‌ ಮಾರ್ಟ್‌ ಸೇರಿದಂತೆ ಅನ್‌ ಲಿಮಿಟೆಡ್‌, ಬಿಗ್‌ಬಜಾರ್‌, ರಿಯಲನ್ಸ್‌ ಮಾರ್ಟ್‌, ಗ್ರಾಸ್‌ರೂಟ್ಸ್‌, ರಾಣೆ ಮದ್ರಾಸ್‌, ಆಟೋಮೇಟಿವ್‌ ಆಕ್ಸೆಲ್ಸ್‌ ಮೊದಲಾದ ಕಂಪನಿಗಳಲ್ಲಿ ಇವರಿಗೆ ಉದ್ಯೋಗ ಪಡೆದಿದ್ದಾರೆ. 

ಆನ್‌ಲೈನ್‌ ಸಂದರ್ಶನ: ಕೇಂದ್ರದಲ್ಲಿ ತರಬೇತಿ ಮುಗಿಸಿದ ಯುವಜನರಿಗೆ ಉದ್ಯೋಗದ ನೆರವು ಒದಗಿಸುವ ದೃಷ್ಟಿಯಿಂದ ಕಂಪನಿಗಳ ಜೊತೆಗೆ ಆನ್‌ಲೈನ್‌ ಸಂದರ್ಶನ, ಮುಖಾಮುಖೀ ಸಂದರ್ಶನಕ್ಕೂ ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಗೆ ಕೇಂದ್ರದಲ್ಲಿ ತರಬೇತಿ ಹೊಂದದ ಯುವಜನರಿಗಾಗಿ ಕೇಂದ್ರದ ಆವರಣದಲ್ಲೇ ಉದ್ಯೋಗ ಮೇಳವನ್ನು ಆಯೋಜಿಸಿ ಉದ್ಯೋಗದ ನೆರವು ಒದಗಿಸಲಾಗುತ್ತಿದೆ. 

ಉದ್ಯೋಗ ಮೇಳ: 2017ರ ಮಾರ್ಚ್‌ನಲ್ಲಿ ಪ್ರಥಮ ಬಾರಿಗೆ ಬೃಹತ್‌ ಉದ್ಯೋಗ ಮೇಳ ಆಯೋಜಿಸಿ, ಹಲವರಿಗೆ ಉದ್ಯೋಗ ಒದಗಿಸಿಕೊಡಲಾಗಿತ್ತು. ಇದೀಗ ಎರಡನೇ ಬಾರಿಗೆ ಜನವರಿ 5 ರಂದು ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಬಿಗ್‌ ಬಜಾರ್‌, ವೆಸ್ಟ್‌ಸೈಡ್‌, ಸನ್‌ ಬಿಸಿನೆಸ್‌ ಸಲ್ಯೂಷನ್‌, ಉಡ್‌ಲ್ಯಾಂಡ್‌, ಕಾರ್ವಿ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ.

ಜಿಲ್ಲೆಯ ಯುವಜನರಿಗೆ ಉದ್ಯೋಗ ಒದಗಿಸಲು ನೆರವಾಗುವ ದೃಷ್ಟಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಆಸಕ್ತರು ಕೇಂದ್ರಕ್ಕೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಂಡು ಮೇಳದಲ್ಲಿ ಭಾಗವಹಿಸಿ, ತಮಗೆ ಇಷ್ಟವಾದ ಕಂಪನಿಗಳ ಸಂದರ್ಶನ ಎದುರಿಸಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ.
-ಪರಮೇಶ, ವ್ಯವಸ್ಥಾಪಕರು, ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ

* ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

11

KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!

Hanuma-mala

SriRangapattana: ಹನುಮ ಮಾಲಾಧಾರಿಗಳಿಂದ ಮಸೀದಿ ಪ್ರವೇಶ ಯತ್ನ

HD-Kote

H.D.Kote: ಹೆಬ್ಬುಲಿ ದಾಳಿಗೆ ಒಂದೂವರೆ ವರ್ಷದ ಮರಿ ಹುಲಿ ಸಾವು!

court

Mysuru: ಕ್ಷುಲ್ಲಕ ಕಾರಣಕ್ಕೆ ಜೋಡಿ ಕೊ*ಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.