ರಸ್ತೆಯಲ್ಲಿ ಹರಿಯುವ ಆಸ್ಪತ್ರೆಯ ಮಲಿನ ಜಲ
Team Udayavani, Jan 4, 2019, 6:40 AM IST
ವಿದ್ಯಾನಗರ : ಆಸ್ಪತ್ರೆಗಳು ಸರಿಯಾದ ಚಿಕಿತ್ಸೆ ಒದಗಿಸಿ ರೋಗಿಗಳ ಆರೋಗ್ಯ ರಕ್ಷಣೆ ಮಾಡುವ ತಾಣ. ಆದರೆ ಆಸ್ಪತ್ರೆಗಳೇ ಅಜಾಗರೂಕತೆಯಿಂದ ರೋಗ ಉತ್ಪಾದನಾ ಘಟಕ ವಾದರೆ? ಇಂತಹ ಒಂದು ಸಮಸ್ಯೆ ಅಣಂಗೂರಿನ ಜನರಿಗೆ ಎದುರಾಗಿದೆ.
ಆಸ್ಪತ್ರೆಯಿಂದ ಬರುವ ಮಾಲಿನ್ಯ ಭರಿತ ಕೊಳಚೆ ನೀರು ಹಲವು ವರ್ಷಗಳಿಂದ ನೂರಾರು ಜನರು ನಿತ್ಯ ಪ್ರಯಾಣಿಸುವ ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಇದರಿಂದ ಉಂಟಾಗಬಹುದಾದ ಸಮಸ್ಯೆಗಳ ಅರಿವಿಲ್ಲದಂತೆ ವರ್ತಿಸುವ ಜನರು ಕಣ್ಣಿದ್ದೂ ಕುರುಡಾದ ಅವಸ್ಥೆ ಅಣಂಗೂರಲ್ಲಿ ಸೃಷ್ಠಿಯಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅಣಂಗೂರು ಪ್ರದೇಶದಲ್ಲಿರುವ ಸರಕಾರಿ ಆಯುರ್ವೇದ ಆಸ್ಪತ್ರೆಯ ಹಿಂಬದಿಯಲ್ಲಿ ಹಾದುಹೋಗುವ ರಸ್ತೆಯಲ್ಲಿ ಡಾಮರು ಕಿತ್ತುಹೋಗಿ ಹೊಂಡಗಳೇ ತುಂಬಿದ್ದು ಜನರು ಪಡುವ ಸಂಕಷ್ಟ ಒಂದೆಡೆಯಾದರೆ ಹೊಂಡಗಳಲ್ಲಿ ತುಂಬುವ ಮಲಿನ ಜಲದಿಂದ ಉಂಟಾಗುವ ಸಮಸ್ಯೆ ಇನ್ನೊಂದೆಡೆ.
ರೋಡ್ ತೋಡಾಗಿದೆ
ಆಸ್ಪತ್ರೆಯಿಂದ ಬರುವ ಮಲಿನ ನೀರು ಶೇಖರಣೆಯಾಗಿ ರಸ್ತೆಯ ಒಂದು ಭಾಗದಲ್ಲಿ ಕೃತಕ ತೋಡು ನಿರ್ಮಾಣವಾಗಿದೆ. ಶಾಲೆಗೆ ತೆರಳುವ ತುಂಟ ಮಕ್ಕಳ ನೀರಾಟ, ವಾಹನಗಳು ಸಾಗುವಾಗ ಪಾದಚಾರಿಗಳಿಗೆ ಕೊಳಕು ನೀರಿನ ಅಭಿಷೇಕ ಸರ್ವಸಾಮಾನ್ಯ.
ಕಣ್ಣಿಗೆ ಮಣ್ಣು ಹಾಕುವ ಕೆಲಸ
ಕಳೆದ ಮಳೆಗಾಲ ಪ್ರಾರಂಭಕ್ಕೂ ಮುನ್ನ ರಸ್ತೆ ಅಗೆದು ಪೈಪ್ ಲೈನ್ ಮೂಲಕ ಮಲಿನ ಜಲ ವಿಲೇವಾರಿ ಮಾಡುವ ಕ್ರಮ ಕೈಗೊಳ್ಳಲಾಗಿತ್ತಾದರೂ ಅದು ಜನರ ಕಣ್ಕಟ್ಟುವ ಪ್ರಯತ್ನ ಮಾತ್ರವೇ ಆಗಿತ್ತು ಎನ್ನುವುದು ವಾಸ್ತವ. ಯಾಕೆಂದರೆ ರಸ್ತೆಯ ಇನ್ನೊಂದು ಬದಿಗಿರುವ ತೆರೆದ ಪ್ರದೇಶದಲ್ಲಿ ನೀರು ಹರಿದುಹೋಗುವುದು ಕಂಡುಬರುತ್ತಿತ್ತು. ಪ್ರಸ್ತುತ ಅಳವಡಿಸಿರುವ ಪೈಪಿನ ಬಾಯಿ ಮುಚ್ಚಿಹೋಗಿ ಮತ್ತೆ ನೀರು ರಸ್ತೆಯಲ್ಲೇ ತುಂಬುವಂತಾಗಿದೆ.
ಸಾಮಾಜಿಕ ಮುಖಂಡರು, ಜನರ ಹಿತರಕ್ಷಕರೆನಿ ಸಿಕೊಂಡ ಹಲವರು ಪ್ರತಿದಿನ ಈ ರಸ್ತೆಯಲ್ಲಿ ಹಾದುಹೋಗುತ್ತಿದ್ದರೂ ಜನರ ಆರೋಗ್ಯದ ದೃಷ್ಟಿಯಿಂದಲಾದರೂ ಕಾರ್ಯಪ್ರವೃತ್ತರಾಗದೇ ಇರುವುದು ವಿಪರ್ಯಾಸ.
ಸೊಳ್ಳೆಗಳ ಆವಾಸ ಕೇಂದ್ರ
ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಮಲಿನ ಜಲವೂ ಸೇರಿ ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ಲಭ್ಯವಿದ್ದು ಉಚಿತವಾಗಿ ದೊರೆಯುವ ಕಾರಣ ದೂರ ದೂರದ ಊರಿಂದಲೂ ಇಲ್ಲಿಗೆ ಚಿಕಿತ್ಸೆಗಾಗಿ ಜನರು ಬರುತ್ತಾರೆ. ಆದುದರಿಂದ ಆಸ್ಪತ್ರೆಯಿಂದ ಹೊರಹರಿಯುವ ನೀರಿನ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗಿ ಬರುವುದರಲ್ಲಿ ಸಂದೇಹವಿಲ್ಲ.
ವಿದ್ಯಾಗಣೇಶ್ ಅಣಂಗೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.