ಶೆಂಜೆನ್ ಓಪನ್ ಟೆನಿಸ್: ಗಾಯಾಳು ಶರಪೋವಾ ಹೊರಕ್ಕೆ
Team Udayavani, Jan 5, 2019, 12:30 AM IST
ಶೆಂಜೆನ್ (ಚೀನ): “ಆಸ್ಟ್ರೇಲಿಯನ್ ಓಪನ್’ ಟೂರ್ನಿಗಾಗಿ ಅಭ್ಯಾಸದಲ್ಲಿ ನಿರತರಾಗಿದ್ದ ವಿಶ್ವದ ಮಾಜಿ ನಂ. ವನ್ ಆಟಗಾರ್ತಿ ಮರಿಯಾ ಶರಪೋವಾಗೆ ಆಘಾತವೊಂದು ಎದುರಾಗಿದೆ. ತೊಡೆನೋವಿನಿಂದಾಗಿ ಚೀನದಲ್ಲಿ ನಡೆಯುತ್ತಿರುವ “ಶೆಂಜೆನ್ ಓಪನ್’ ಕೂಟದಿಂದ ಹೊರನಡೆದಿದ್ದಾರೆ.
ಶುಕ್ರವಾರ ಬೆಲರೂಸ್ನ ಅರಿನಾ ಸಬಲೆಂಕಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಶರಪೋವಾ ಈ ಸಮಸ್ಯೆಗೆ ತುತ್ತಾದರು. ಆಗ ಆರಂಭಿಕ ಸೆಟ್ ಅನ್ನು 1-6 ಅಂಕಗಳಿಂದ ಕಳೆದುಕೊಂಡಿದ್ದರು. ದ್ವಿತೀಯ ಸೆಟ್ನಲ್ಲಿಯೂ 2-4ರ ಹಿನ್ನಡೆಯಲ್ಲಿದ್ದಾಗ ಆಟ ಮುಂದುವರಿಸಲಾಗಿದೆ ಹೊರನಡೆದರು.
ಜ. 14ರಿಂದ ಮೆಲ್ಬರ್ನ್ನಲ್ಲಿ “ಆಸ್ಟ್ರೇಲಿಯನ್ ಓಪನ್’ ಆರಂಭವಾಗಲಿದ್ದು, ಶರಪೋವಾಗೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಗಾಯದ ಸಮಸ್ಯೆ ತೊಡಕಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.