ಅಯೋಧ್ಯೆ ವಿಚಾರಣೆ 10ಕ್ಕೆ ನಿರ್ಧಾರ
Team Udayavani, Jan 5, 2019, 12:30 AM IST
ಹೊಸದಿಲ್ಲಿ/ಲಕ್ನೋ: ಅಯೋಧ್ಯೆಯ ರಾಮಜನ್ಮ ಭೂಮಿ- ಬಾಬರಿ ಮಸೀದಿ ಸ್ಥಳದ ಮಾಲೀಕತ್ವ ಯಾರಿಗೆ ಸೇರಬೇಕು ಎಂಬ ಬಗ್ಗೆ ವಿಚಾರಣೆ ನಡೆಯಬೇಕಾದ ದಿನಾಂಕವನ್ನು ಜ.10ರಂದು ಸೂಕ್ತ ನ್ಯಾಯಪೀಠ ನಿರ್ಧರಿಸಲಿದೆ ಎಂದು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾ.ಎಸ್.ಕೆ.ಕೌಲ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಶುಕ್ರವಾರ ಒಟ್ಟೂ ಪ್ರಕ್ರಿಯೆ 30 ಸೆಕೆಂಡ್ಗಳಲ್ಲಿ ಮುಕ್ತಾಯವಾಗಿದ್ದು, ವಿಚಾರದ ಪರ-ವಿರೋಧ ವಾಗಿ ವಾದಿಸಲಿರುವ ವಕೀಲರಿಗೂ ಯಾವುದೇ ಅರಿಕೆ ಸಲ್ಲಿಸಲೂ ನ್ಯಾಯಾಲಯ ಅವಕಾಶ ನೀಡಲಿಲ್ಲ. “ಯಾವ ನ್ಯಾಯಪೀಠದಲ್ಲಿ ಅಯೋಧ್ಯೆ ಪ್ರಕರಣ ವಿಚಾರಣೆ ನಡೆಯಬೇಕು ಮತ್ತು ಎಂದಿನಿಂದ ವಿಚಾರಣೆ ಆರಂಭವಾಗಬೇಕು ಎಂಬ ಬಗ್ಗೆ 10ರಂದು ತಿಳಿಸಲಾಗುತ್ತದೆ’ ಎಂದಷ್ಟೇ ಹೇಳಿ ವಿಚಾರಣೆಯನ್ನು ಸಮಾಪ್ತಿಗೊಳಿಸಲಾಯಿತು.
ಇದೇ ವೇಳೆ ಲಕ್ನೋದಲ್ಲಿ ಮಾತನಾಡಿದ ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ, ಮಂದಿರ ವಿವಾದ ಇತ್ಯರ್ಥಕ್ಕೆ ಕಾಂಗ್ರೆಸ್ ತಡೆಯೊಡ್ಡುತ್ತಿದೆ ಎಂದು ಟೀಕಿಸಿದ್ದಾರೆ. ಆ ಪಕ್ಷ ತನ್ನ ನ್ಯಾಯವಾದಿಗಳ ಮೂಲಕ ರಾಜಕೀಯ ಮಾಡಬಾರದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ
Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.