2019 ಧಾತುಗಳ ಆವರ್ತಕ ಕೋಷ್ಠಕ ವರ್ಷ
Team Udayavani, Jan 5, 2019, 4:24 AM IST
1869ರಲ್ಲಿ ಡಿಮಿಟ್ರಿ ಮೆಂಡಲೀವ್ ಧಾತುಗಳ ಆವರ್ತ ಕೋಷ್ಠಕವನ್ನು ಕಂಡು ಹಿಡಿದು ಇಂದಿಗೆ 150 ವರ್ಷಗಳು ಸಂದಿವೆ. ಈ ಕಾರಣಕ್ಕಾಗಿ ವಿಶ್ವಸಂಸ್ಥೆ ತನ್ನ 72ನೇ ಸಾಮಾನ್ಯ ಸಭೆಯಲ್ಲಿ 2019 ವರ್ಷವನ್ನು ಧಾತುಗಳ ಆವರ್ತ ಕೋಷ್ಠಕದ ಅಂತಾರಾಷ್ಟ್ರೀಯ ವರ್ಷವಾಗಿ ಆಚರಿಸಲು ನಿರ್ಧರಿಸಿದೆ.
ಯಾರು ಡಿಮಿಟ್ರಿ ಮೆಂಡಲೀವ್
ಈತ ರಷ್ಯಾದ ರಸಾಯನಶಾಸ್ತ್ರಜ್ಞ. 1834 ಫೆ. 8ರಂದು ಸೈಬೀರಿಯಾದ ತೊಬೊಲೊಸ್ಕ್ನಲ್ಲಿ ಜನಿಸಿದರು. ಇವರು ಸೈಂಟ್‌ಪೀಟರ್ಬರ್ಗ್ ವಿಶ್ವ ವಿದ್ಯಾನಿಲಯದ ಹಳೆ ವಿದ್ಯಾರ್ಥಿ. ರಸಾಯನ ಶಾಸ್ತ್ರದಲ್ಲಿ ಬಹುಮುಖ್ಯವಾದ ಧಾತುಗಳ ಆವರ್ತ ಕೋಷ್ಠಕ, ಪರಮಾಣು ತೂಕ ಆವಿಷ್ಕರಿಸಿದ್ದು ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ. ಇದಕ್ಕಾಗಿ 1906ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ಸಂದಿದೆ.
ಆಚರಣೆ ಉದ್ದೇಶವೇನು?
ಜಾಗತಿಕ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಸೌರಶಕ್ತಿ, ಶಿಕ್ಷಣ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಪರಿಹಾರ ಒದಗಿಸುವ ಸಲುವಾಗಿ ಜಾಗತಿಕ ಜಾಗೃತಿಗಾಗಿ ಮತ್ತು ರಸಾಯನ ಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವಸಂಸ್ಥೆ 2019ನ್ನು ಧಾತುಗಳ ಆವರ್ತ ಕೋಷ್ಠಕ ಅಂತಾರಾಷ್ಟ್ರೀಯ ವರ್ಷವಾಗಿ ಘೋಷಿಸಿದೆ.
ಆಚರಣೆ ಹೇಗೆ?
ವರ್ಷಾದ್ಯಂತ ಯುನೆಸ್ಕೋ, ವಿಜ್ಞಾನ ಸಂಘಗಳು, ಶೈಕ್ಷಣಿಕ ಮತ್ತು ಸಂಶೋಧನ ಸಂಸ್ಥೆಗಳು ಆವರ್ತ ಕೋಷ್ಠಕದ ಮಹತ್ವ, ಇಂದಿನ ಪರಿಸ್ಥಿತಿಗೆ ಅದನ್ನು ಅನ್ವಯಿಸುವ ಕುರಿತಾಗಿ ಕಾರ್ಯಾಗಾರಗಳನ್ನು ಮಾಡಲಾಗುತ್ತದೆ. ಮುಂದಿನ ಪೀಳಿಗೆಯ ಸಂಶೋಧಕರು ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಸಹಕಾರಿಯಾಗುವಂತೆ ಪ್ರಯತ್ನಿಸಲಾಗುತ್ತದೆ.
ಏನಿದು ಧಾತುಗಳ ಆವರ್ತ ಕೋಷ್ಠಕ
ಆವರ್ತ ಕೋಷ್ಠಕ ರಾಸಾಯನಿಕ ಅಂಶಗಳ ಕೋಷ್ಠಕ. ಪರಮಾಣು ಸಂಖ್ಯೆ, ಎಲೆಕ್ಟ್ರಾನ್ ಸಂರಚನೆಯಿಂದ ಮತ್ತು ಪುನರಾವರ್ತಿತ ರಾಸಾಯನಿಕ ಗುಣಲಕ್ಷಣಗಳಿಂದ ವ್ಯವಸ್ಥೆಗೊಳಿಸಲ್ಟಟ್ಟಿರುತ್ತದೆ. ಇದು ರಾಸಾಯನಿಕ ಪ್ರಕ್ರಿಯೆ ಮತ್ತು ರಾಸಾಯನಿಕ ಅಂಶಗಳ ಕುರಿತಾಗಿ ವಿವರಿಸುತ್ತದೆ. ಇದರ ಆಧಾರದಲ್ಲಿ ಅನೇಕ ಪ್ರಯೋಗಗಳು ನಡೆದಿವೆ ಮತ್ತು ನಡೆಯುತ್ತಿವೆ. 150 ವರ್ಷಗಳಷ್ಟು ಹಳೆಯ ಸಿದ್ಧಾಂತ ಇದಾದರೂ ಇಂದಿಗೂ ಪ್ರಸ್ತುತವಾಗಿದೆ.
ಧನ್ಯಶ್ರೀ ಬೋಳಿಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.