ಪಾರ್ಕಿಂಗ್‌ಗಾಗಿ ಅರಣ್ಯ ಇಲಾಖೆ ಜಾಗಕ್ಕೆ ಪುತ್ತೂರು ನಗರಸಭೆ ಕಣ್ಣು
Team Udayavani, Jan 5, 2019, 4:56 AM IST
ಪುತ್ತೂರು: ಪೇಟೆಯ ಟ್ರಾಫಿಕ್ ದಟ್ಟಣೆ ತಗ್ಗಿಸಲು ಪುತ್ತೂರು ನಗರಸಭೆ ಯೋಜನೆಯೊಂದನ್ನು ರೂಪಿಸುತ್ತಿದೆ. ಪುತ್ತೂರು ಪೇಟೆಯ ಕೇಂದ್ರದಲ್ಲೇ ಸುಮಾರು 1.5 ಎಕ್ರೆಯಲ್ಲಿ ಪಾರ್ಕಿಂಗ್‌ಗಾಗಿ ಆಯಕಟ್ಟಿನ ಜಾಗವೊಂದರ ಮೇಲೆ ನಗರಸಭೆ ಕಣ್ಣಿಟ್ಟಿದೆ. ನಗರಸಭೆ ಗುರುತಿಸಿರುವ ಜಾಗವು ಅರಣ್ಯ ಇಲಾಖೆ ಯದ್ದು. ಹೀಗಾಗಿ ಈ ಯೋಜನೆ ಎಷ್ಟರ ಮಟ್ಟಿಗೆ ಕಾರ್ಯಕ್ಕೆ ಬರು ತ್ತದೆ ಎನ್ನು ವುದೇ ಸಂಶಯದ ವಿಚಾರ.
ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗವೇ ಇರುವ ಅರಣ್ಯ ಇಲಾಖೆಯ ಕಚೇರಿ ಇರುವ ಜಾಗ ಅದು. ಹಲವಾರು ವರ್ಷಗಳಿಂದ ಈ ಜಾಗ ಅರಣ್ಯ ಇಲಾಖೆಯ ಸುಪರ್ದಿಯಲ್ಲೇ ಇದೆ. ಅಲ್ಲಿ ಸುಮಾರು 70ರಷ್ಟು ಉತ್ತಮ ಜಾತಿಯ ಮರಗಳು ಬೆಳೆದು ನಿಂತಿವೆ. ಇದರ ಜತೆಗೆ ಅರಣ್ಯ ಇಲಾಖೆಯ ಕಚೇರಿ, ನಿರೀಕ್ಷಣ ಮಂದಿರ, ವಸತಿಗೃಹಗಳಿವೆ. ವಶಪಡಿಸಿಕೊಳ್ಳಲಾದ ವಾಹನಗಳನ್ನೂ ಇಲ್ಲೇ ನಿಲ್ಲಿಸಲಾಗಿದೆ. ಈ ವಾಹನಗಳು ದುಃಸ್ಥಿತಿಯಲ್ಲಿವೆ. ಇಷ್ಟೆಲ್ಲ ಇರುವ ಈ ಜಾಗವನ್ನು ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಲಿಕ್ಕಿಲ್ಲ. ಪೇಟೆಯ ಹೃದಯ ಭಾಗದಲ್ಲೇ ಇರುವ ಈ ಜಾಗವನ್ನು ಬಿಟ್ಟು ಅರಣ್ಯದ ಮಗ್ಗುಲಿಗೆ ಹೋಗಿ ಕುಳಿತು ಕೊಳ್ಳಲು ಅಧಿಕಾರಿಗಳಿಗೂ ಮನಸ್ಸಿಲ್ಲ.
ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ರುವ ಈ ಜಾಗವನ್ನು ಪುತ್ತೂರು ಪೇಟೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎನ್ನುವುದು ನಗರಸಭೆಯ ಆಲೋಚನೆ. ಅದರಲ್ಲೂ ಮರಗಳನ್ನು ಅಂತೆಯೇ ಉಳಿಸಿಕೊಂಡು, ಉಳಿದ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಎಂದು ಯೋಜನೆ ರೂಪಿಸಿದೆ. ಬಹಳ ವರ್ಷಗಳ ಹಿಂದೆಯೇ ಇಂತಹ ಆಲೋಚನೆಗೆ ವೇದಿಕೆ ಸಿದ್ಧವಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಅದು ನನೆಗುದಿಗೆ ಬಿದ್ದಿತು. ಇದೀಗ ಮತ್ತೆ ಮುನ್ನೆಲೆಗೆ ಬರಲು ವೇದಿಕೆ ಸಿದ್ಧವಾಗುತ್ತಿದೆ.
ಏನಿದು ಯೋಜನೆ?
ಜಾಗವು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗವೇ ಇರುವುದರಿಂದ ಪಾರ್ಕಿಂಗ್ ವ್ಯವಸ್ಥೆಗೆ ಅನುಕೂಲ. ಸದ್ಯ ಪುತ್ತೂರು ಪೇಟೆಯಲ್ಲಿ ಪಾರ್ಕಿಂಗ್‌ಗೆ ಜಾಗವೇ ಇಲ್ಲವಾಗಿದೆ. ವಾಣಿಜ್ಯ ಸಂಕೀರ್ಣಗಳು ಪಾರ್ಕಿಂಗ್ ಜಾಗವನ್ನು ಕಬಳಿಸಿಕೊಂಡು ನಿಂತಿವೆ. ಆದ್ದರಿಂದ ಪೇಟೆಯ ನಡುವಿನಲ್ಲೇ ಪಾರ್ಕಿಂಗ್‌ಗೆ ಜಾಗ ಗೊತ್ತುಪಡಿಸುವ ಅನಿವಾರ್ಯತೆ ನಗರಸಭೆ ಮುಂದಿದೆ. ಅರಣ್ಯ ಇಲಾಖೆ ಇರುವ ಜಾಗವನ್ನು ಪಾರ್ಕಿಂಗ್‌ಗೆ ಬಳಸಿಕೊಳ್ಳುವ ಯೋಜನೆ.
ಬೇರೆ ಜಾಗ ನೋಡಿ
ಇಲಾಖಾ ಕಚೇರಿ ಇರುವ ಜಾಗ ದ ಆರ್‌ಟಿಸಿ ಅರಣ್ಯ ಇಲಾಖೆಯ ಹೆಸರಿನಲ್ಲೇ ಇದೆ. ಅನೇಕ ಜಾತಿಯ ಮರ ಗಳು,ಅದನ್ನು ಅವಲಂಬಿಸಿ ಅದೆಷ್ಟೋ ಪಕ್ಷಿಗಳು ಇಲ್ಲಿ ವಾಸವಿವೆ. ಇವೆಲ್ಲವನ್ನು ನಿರ್ಲಕ್ಷಿಸಿ ಪಾರ್ಕಿಂಗ್ ಮಾಡುವುದು ಬೇಡ. ಬೇರೆ ಜಾಗ ನೋಡಿಕೊಳ್ಳಲಿ
-ಎನ್. ಸುಬ್ರಹ್ಮಣ್ಯ ರಾವ್,
ಎಸಿಎಫ್, ಅರಣ್ಯ ಇಲಾಖೆ
•ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.