ಎಳ್ಳಮಾವಾಸ್ಯೆ ಖರೀದಿ ಬಲು ಜೋರು
Team Udayavani, Jan 5, 2019, 5:51 AM IST
ಅಫಜಲಪುರ: ಬಗೆ ಬಗೆಯ ತರಕಾರಿ ತಂದು ಬಜ್ಜಿ, ಕಡುಬು ಮಾಡಿ ಜೋಳದ ಹೊಲಕ್ಕೆ ಹೋಗಿ ಭೂಮಿ ತಾಯಿಗೆ ಚರಗ ಚೆಲ್ಲುವ ಹಬ್ಬ ಎಳ್ಳಮವಾಸ್ಯೆ. ಎಳ್ಳಮವಾಸ್ಯೆ ಬಜ್ಜಿಗಾಗಿ ಗ್ರಾಹಕರು ಸಂತೆಯಲ್ಲಿ ತರಕಾರಿ ಖರೀದಿಸುವುದು ಬಲು ಜೋರಾಗಿತ್ತು.
ಕೈ ಸುಡುತ್ತಿದೆ ತರಕಾರಿ ಬೆಲೆ: ಕಳೆದ ವರ್ಷ ಮಳೆ ಬಾರದೆ ಭೀಕರ ಬರಗಾಲ ಆವರಿಸಿದೆ. ಬರದಿಂದ ಯಾವ ಬೆಳೆಯೂ ರೈತರ ಕೈಗೆಟುಕಿಲ್ಲ. ಅಲ್ಲದೇ ಎಲ್ಲಿಯೂ ಹನಿ ನೀರು ಸಿಗುತ್ತಿಲ್ಲ. ಹೀಗಾಗಿ ಯಾವ ರೈತರು ಹೆಚ್ಚು ತರಕಾರಿ ಬೆಳೆದಿಲ್ಲ. ಹೀಗಾಗಿ ಕೈಗೆಟುಕುವ ದರದಲ್ಲಿ ತರಕಾರಿ ಸಿಗುತ್ತಿಲ್ಲ. ಆದರೂ ಎಳ್ಳಮವಾಸ್ಯೆಗಾಗಿ ಬಜ್ಜಿ ಮಾಡಲು ತರಕಾರಿ ಬೇಕೆ ಬೇಕು. ಹೀಗಾಗಿ ದೂರದ ಊರುಗಳಿಂದ ದುಬಾರಿ ದರದಲ್ಲಿ ತಂದ ತರಕಾರಿಯನ್ನು ಜನಸಾಮಾನ್ಯರು ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಿದ್ದರು.
ಬರದ ಮಧ್ಯೆ ಹಬ್ಬದ ಕಳೆ ಜೋರು: ಬರಗಾಲವಿರಲಿ, ಸುಖದ ಕಾಲ ಇರಲಿ ಸಂಪ್ರದಾಯ, ಹಬ್ಬ ಆಚರಣೆಗಳನ್ನು ಜನ ಬಿಡುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಎಳ್ಳಮವಾಸ್ಯೆ. ಭೀಕರ ಬರ ಆವರಿಸಿ ಎಲ್ಲೆಡೆ ಹನಿ ನೀರು ಸಿಗುತ್ತಿಲ್ಲ. ತರಕಾರಿಗಳ ಬೆಲೆ ಗಗನಕ್ಕೇರಿದೆ. ಆದರೂ ದುಬಾರಿ ದರ ನೀಡಿ ತರಕಾರಿ ಖರೀದಿಸಿ ಹಬ್ಬ ಆಚರಿಸುತ್ತಿದ್ದಾರೆ.
ತರಕಾರಿ ತಂದು ಬಜ್ಜಿ ಕಡುಬು, ರೊಟ್ಟಿ, ಹೋಳಿಗೆ ಮಾಡಿ ಬಂಧು ಬಳಗದವರನ್ನು ಕರೆದು ಹೊಲಕ್ಕೆ ಹೋಗಿ ಜೋಳದಲ್ಲಿ ಚರಗ ಚೆಲ್ಲಿ ಎಲ್ಲರೂ ಒಂದಾಗಿ ಕುಳಿತು ಊಟ ಮಾಡುತ್ತಾರೆ. ಇಂತಹ ವಿಶಿಷ್ಟ ಹಬ್ಬವನ್ನು ಎಲ್ಲ ಜಾತಿ ಜನಾಂಗದವರು ಸೇರಿ ಭಾವೈಕ್ಯತೆಯಿಂದ ಆಚರಣೆ ಮಾಡುವುದು ವಿಶೇಷವಾಗಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.