ಶೀಲಾ ಸುಶೀಲಾ ಸೌಂಡು ಜೋರು
Team Udayavani, Jan 5, 2019, 6:07 AM IST
ನಿರ್ದೇಶಕ ಎ.ಪಿ.ಅರ್ಜುನ್ “ಕಿಸ್’ ಎಂಬ ಸಿನಿಮಾ ನಿರ್ದೇಶಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ವಿರಾಟ್ ಹಾಗೂ ಶ್ರೀಲೀಲಾ ಎಂಬ ಹೊಸ ನಾಯಕ-ನಾಯಕಿಯನ್ನಿಟ್ಟುಕೊಂಡು ಅರ್ಜುನ್ ಈ ಚಿತ್ರ ಮಾಡುತ್ತಿದ್ದಾರೆ. ಈಗ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಬಿಡುಗಡೆಯ ಹಂತಕ್ಕೆ ಬಂದಿದೆ. ಅದರ ಮೊದಲ ಅಂಗವಾಗಿ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ.
ಅದು “ಶೀಲಾ ಸುಶೀಲಾ’ ಹಾಡು. “ಕಿಸ್’ ಚಿತ್ರದ ಈ ಹಾಡಿನ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಯುಟ್ಯೂಬ್ನಲ್ಲೂ ಟ್ರೆಂಡಿಂಗ್ನಲ್ಲಿದೆ. ಎ.ಪಿ.ಅರ್ಜುನ್ ಬರೆದಿರುವ “ಶೀಲಾ ಸುಶೀಲಾ ಯು ಡೋಂಟ್ ವರಿ ನಾನೇ ಫೆರಾರಿ ನೀ ಸ್ವಟ್ ಚೆರಿ …’ ಎಂದು ಆರಂಭವಾಗುವ ಈ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ನಾಯಕ ವಿರಾಟ್ ಈ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಹಾಡಿನಲ್ಲಿ “ಫಸ್ಟ್ ರ್ಯಾಂಕ್ ರಾಜು’ ಚಿತ್ರದ ನಾಯಕಿ ಅಪೂರ್ವ ಕಾಣಿಸಿಕೊಂಡಿದ್ದು, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಸಖತ್ ಕಲರ್ಫುಲ್ ಆಗಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ಚಿತ್ರದ ಹಾಗೂ ಹಾಡಿನ ಬಗ್ಗೆ ಮಾತನಾಡುವ ನಿರ್ದೇಶಕ ಎ.ಪಿ.ಅರ್ಜುನ್, “ಕಿಸ್ ಔಟ್ ಅಂಡ್ ಔಟ್ ಯೂತ್ಪುಲ್ ಸಿನಿಮಾ. ಇವತ್ತಿನ ಟ್ರೆಂಡ್ನಲ್ಲಿ ಏನು ನಡೆಯುತ್ತಿದೆ, ಹುಡುಗ-ಹುಡುಗಿ ಎಷ್ಟು ಬೋಲ್ಡ್ ಆಗಿದ್ದಾರೆಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಈಗಾಗಲೇ ಬಿಡುಗಡೆಯಾಗಿರುವ “ಶೀಲಾ ಸುಶೀಲ’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ.
ಹಾಡಿನಲ್ಲಿ ಬಳಸಿರುವ ಪದಗಳು, ಹೋಲಿಕೆಗಳು ತುಂಬಾ ಹೊಸತಾಗಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಅರ್ಜುನ್. ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತವಿದೆ. ಚಿತ್ರವನ್ನು ರಾಷ್ಟ್ರಕೂಟ ಪಿಕ್ಚರ್ನಡಿ ರವಿಕುಮಾರ್ ನಿರ್ಮಿಸಿದ್ದಾರೆ. ಮೊದಲೇ ಹೇಳಿದಂತೆ ಇದು ಪಕ್ಕಾ ಯೂತ್ಫುಲ್ ಲವ್ಸ್ಟೋರಿಯಾಗಿರುವುದರಿಂದ ಫೆ.14 ಪ್ರೇಮಿಗಳ ದಿನಕ್ಕೆ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.