ರುಮ್ಮನಗೂಡ ಚುನಾವಣೆ ಫಲಿತಾಂಶ ಪ್ರಕಟ
Team Udayavani, Jan 5, 2019, 6:19 AM IST
ಚಿಂಚೋಳಿ: ತಾಲೂಕಿನ ರುಮ್ಮನಗೂಡ ಗ್ರಾಪಂನ 10ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ
ಅಭ್ಯರ್ಥಿಗಳ ಫಲಿತಾಂಶವನ್ನು ತಹಶೀಲ್ದಾರ್ ಪಂಡಿತ ಬಿರಾದಾರ ಮತ್ತು ಸಹಾಯಕ ಚುನಾವಣಾಧಿಕಾರಿ ಖುರ್ಷಿದ ಅಲಿಮಾಸ್ಟರ್ ಪ್ರಕಟಿಸಿದರು.ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಇಂತಿದೆ.
ರುಮ್ಮನಗೂಡ: ಸುನೀತಾ ಹಣಮಂತ 185 (ಪರಿಶಿಷ್ಟ ಜಾತಿ ಮಹಿಳೆ), ಗೋವಿಂದ ಕಾಶಿರಾಮ ಜಾಧವ 178 (ಪರಿಶಿಷ್ಟ ಜಾತಿ). ರುಮ್ಮನಗೂಡ ಬ್ಲಾಕ್ 2-ಲಕ್ಷ್ಮೀಬಾಯಿ ಮಲ್ಲಪ್ಪ 244 (ಸಾಮಾನ್ಯ ಮಹಿಳೆ), ವೀರಾರೆಡ್ಡಿ ಮಾಣಿಕರೆಡ್ಡಿ 300 (ಸಾಮಾನ್ಯ). ಗಾಂಧಿ ನಗರ ಬ್ಲಾಕ್ 3-ಕಲಾವತಿ ಸೂರ್ಯಕಾಂತ 77 (ಪರಿಶಿಷ್ಟ ಪಂಗಡ ಮಹಿಳೆ), ಗಂಗೂಬಾಯಿ ಪೂರ್ಣಸಿಂಗ್ ಜಾಧವ್ 355 (ಸಾಮಾನ್ಯ).
ಸಾಸರಗಾಂವ: ಇಂದುಬಾಯಿ ಗುಂಡಪ್ಪ349 (ಪರಿಶಿಷ್ಟ ಜಾತಿ ಮಹಿಳೆ), ಚಂದ್ರಶೆಟ್ಟಿ ಸೀತಾರಾಮ ರಾಠೊಡ 365 (ಪರಿಶಿಷ್ಟ ಜಾತಿ), ರಜೀಯಾಬೇಗಂ ಮಸ್ತಾನಪಟೇಲ 278 (ಸಾಮಾನ್ಯ), ಮೋದಿನ ಸಿಲಾರ ಪಟೇಲ 443 (ಸಾಮಾನ್ಯ). ತಾಲೂಕಿನ ರುಮ್ಮನಗೂಡ ಗ್ರಾಪಂ ಹತ್ತು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಕಾರ್ಯಕರ್ತರು ಗೆಲುವು ಸಾಧಿಸಿರುವುದರಿಂದ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ವಿಜಯೋತ್ಸವ ಆಚರಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಮತಗಳ ಎಣಿಕೆ ಕಾರ್ಯ ನಡೆಯಿತು. ಡಿವೈಎಸ್‌ಪಿ ಪ್ರೊಬೆಶನರಿ ಐಪಿಎಸ್ ಪೊಲೀಸ್ ಅಧಿಕಾರಿ ಅಕ್ಷಯ ಹಾಕೆ, ಸಿಪಿಐ ಎಚ್.ಎಂ. ಇಂಗಳೇಶ್ವರ, ಡಿ.ಬಿ. ಕಟ್ಟಿಮನಿ, ಶಂಕರಗೌಡ ಪಾಟೀಲ, ಪಿಎಸ್‌ಐ ಮೌನೇಶ, ರಾಜಶೇಖರ ರಾಠೊಡ, ಇಂದಿರಾಬಾಯಿ ಜಾಜಶೆಟ್ಟಿ ಸೂಕ್ತ ಪೋಲಿಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು.
ವಿಜಯೋತ್ಸವ: ರುಮ್ಮನಗೂಡ ಗ್ರಾಪಂನ 10 ಸ್ಥಾನಗಳ ಪೈಕಿ ಏಳು ಸ್ಥಾನದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು. ಮುಖಂಡರಾದ ರಾಮಚಂದ್ರ ಜಾಧವ್, ಅಬ್ದುಲ್ ಬಾಸೀತ, ಕೆ.ಎಂ. ಬಾರಿ, ಅಮರ ಲೊಡನೋರ, ಪ್ರೇಮಕುಮಾರ ಕಟ್ಟಿ, ಚಾಂದ ಪಟೇಲ ಇನ್ನಿತರರಿದ್ದರು.
ಮರು ಚುನಾವಣೆಗೆ ಒತ್ತಾಯಿಸಿ ದೂರು
ರುಮ್ಮನಗೂಡ ಗ್ರಾಪಂ ವ್ಯಾಪ್ತಿಯಲ್ಲಿನ ಸಾಸರಗಾಂವ ಸ್ಥಾನಕ್ಕೆ ನಡೆದ ಮತದಾನ ಸಂದರ್ಭದಲ್ಲಿ ಇವಿಎಂ ಕೆಟ್ಟುಹೋಗಿರುವುದನ್ನು ಚುನಾವಣೆ ಕಣದಲ್ಲಿದ್ದ ಅಭ್ಯರ್ಥಿಗಳಿಗೆ ತೋರಿಸದೇ ಅನ್ಯಾಯ ಮಾಡಲಾಗಿದ್ದು, ಮರು ಚುನಾವಣೆ ನಡೆಸಬೇಕೆಂದು 10 ಜನ ಅಭ್ಯರ್ಥಿಗಳು ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದಾರೆ. ಸಾಸರಗಾಂವನ ನಾಲ್ಕು ಗ್ರಾಪಂ ಸ್ಥಾನಗಳಿಗೆ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಜ 2ರಂದು ಮತದಾನ ನಡೆದ ಸಮಯದಲ್ಲಿ ಬೆಳಗ್ಗೆ 11:30ಕ್ಕೆ ಇವಿಎಂ ಕೆಟ್ಟು ಹೋಗಿ ಮತದಾನ ಸ್ಥಗಿತಗೊಂಡಿತ್ತು. ಈ ವೇಳೆ ಯಂತ್ರ ಸರಿಪಡಿಸಿದ ಬಗ್ಗೆ ಖಚಿತಪಡಿಸಲು ಅಭ್ಯರ್ಥಿಗಳು ಕೋರಿದರೂ ಮನವಿಗೆ ಸ್ಪಂದಿಸಿಲ್ಲ. ನಂತರ ಪ್ರಾರಂಭವಾದ ಮತದಾನ ವೇಳೆಯಲ್ಲಿ ಚುನಾವಣೆ ಸಿಬ್ಬಂದಿ ಕೆಲವು ಅಭ್ಯರ್ಥಿಗಳೊಂದಿಗೆ ಶಾಮೀಲಾಗಿ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಸಾಸರಗಾಂವನ ನಾಲ್ಕು ಸ್ಥಾನಗಳಿಗೆ ಮರು ಚುನಾವಣೆ ನಡೆಸಬೇಕೆಂದು ಅರ್ಜುನ ನಾಟೀಕಾರ, ಖಾಸೀಮ ಪಟೇಲ, ಸುಂದರ, ಸಂಜೀವಕುಮಾರ, ಲಕ್ಷ್ಮಣ, ಗಂಗಮ್ಮ, ಶಾರದಾಬಾಯಿ, ಮಹಾದೇವಿ, ಚಂದ್ರಮ್ಮ, ಮನ್ನಿಬಾಯಿ ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.