ನಾಟ್ ಔಟ್ ಎಂದ ರಾಹುಲ್: ಕೆ.ಎಲ್. ಕ್ರೀಡಾ ಸ್ಪೂರ್ತಿಗೆ ಅಂಪೈರ್ ಖುಷ್
Team Udayavani, Jan 5, 2019, 7:43 AM IST
ಸಿಡ್ನಿ : ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ನಿಂದಲೇ ಸುದ್ದಿಯಾಗಿದ್ದ ಕೆ.ಎಲ್. ರಾಹುಲ್ ಈಗ ಒಳ್ಳೆಯ ವಿಷಯವೊಂದಕ್ಕೆ ಸುದ್ದಿಯಾಗುತ್ತಿದ್ದಾರೆ. ಅದ್ಭುತ ಕ್ಯಾಚ್ ಪಡೆದರೂ ಕ್ಯಾಚ್ ಹಿಡಿಯುವಾಗ ಚೆಂಡು ನೆಲಕ್ಕೆ ತಾಗಿದೆ ಎಂದು ಅಂಪೈರ್ ಗೆ ಹೇಳುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.
ಸಿಡ್ನಿ ಪಂದ್ಯದ ಮೂರನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಗೆ ಬ್ಯಾಟಿಂಗ್ ಮಾಡುತ್ತಿದ್ದ ಆಸೀಸ್ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಹೊಡೆದ ಚೆಂಡನ್ನು ರಾಹುಲ್ ಡೈವ್ ಹೊಡೆದು ಆಕರ್ಷಕ ರೀತಿಯಲ್ಲಿ ಹಿಡಿದಿದ್ದರು. ಈ ವೇಳೆ ಬೌಲರ್ ಜಡೇಜಾ ಸೇರಿದಂತೆ ಭಾರತೀಯ ಆಟಗಾರರು ಮೊದಲ ವಿಕೆಟ್ ಪಡೆದ ಖುಷಿಯಲ್ಲಿ ಸಂಭ್ರಮಿಸಿದ್ದರು. ಆದರೆ ತಕ್ಷಣ ಕೆ.ಎಲ್.ರಾಹುಲ್ ಚೆಂಡು ನೆಲಕ್ಕೆ ತಾಗಿದೆ, ಔಟ್ ಇಲ್ಲ ಎಂದು ಸನ್ನೆ ಮಾಡಿದರು.
ಕನ್ನಡಿಗನ ಕ್ರೀಡಾ ಸ್ಪೂರ್ತಿಗೆ ಅಂಪೈರ್ ಇಯಾನ್ ಗೂಲ್ಡ್ ಮೆಚ್ಚುಗೆ ಸೂಚಿಸಿದ್ದಾರೆ. ಮೂರನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿದೆ. ಭಾರತ 386 ರನ್ ಗಳ ಬೃಹತ್ ಮುನ್ನಡೆ ಹೊಂದಿದೆ. ಆಸೀಸ್ ಪರ ಮಾರ್ಕಸ್ ಹ್ಯಾರಿಸ್ ಗರಿಷ್ಠ 79 ರನ್ ಗಳಿಸಿದರೆ, ಭಾರತದ ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು.
A good effort from Rahul and he immediately says it bounced. Great stuff. Umpire Gould a big fan of it #CloseMatters#AUSvIND | @GilletteAU pic.twitter.com/7nA0H5Lsc7
— cricket.com.au (@cricketcomau) January 4, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.