ಉ.ಪ್ರ.ದಲ್ಲಿ ಕಾಂಗ್ರೆಸ್ ಇಲ್ಲದ ಮೈತ್ರಿಕೂಟ
Team Udayavani, Jan 6, 2019, 12:30 AM IST
ಲಕ್ನೋ/ಮುಂಬೈ: ಲೋಕಸಭೆ ಚುನಾವಣೆಗಾಗಿ ರಂಗ ಸಜ್ಜಿಕೆ ಬಿರುಸಾಗಿದೆ. ಬಿಹಾರದಲ್ಲಿ ಜೆಡಿಯು-ಬಿಜೆಪಿ ನಡುವೆ ಸ್ಥಾನ ಹೊಂದಾಣಿಕೆ ಪೂರ್ತಿಯಾದ ಬಳಿಕ ಇದೀಗ ಉತ್ತರ ಪ್ರದೇಶದಲ್ಲಿ ಮತ್ತೂಂದು ಮೈತ್ರಿಕೂಟ ಸ್ಥಾನ ಹೊಂದಾಣಿಕೆ ಪೂರ್ಣ ಗೊಳಿಸಿದೆ. ನಿರೀಕ್ಷೆಯಂತೆಯೇ 80 ಸ್ಥಾನ ಗಳಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಸ್ಥಾನ ಹೊಂದಾಣಿಕೆ ಮಾಡಿ ಕೊಂಡಿವೆ. ಅಲ್ಲಿ ಕಾಂಗ್ರೆಸ್ ಈ ಮೈತ್ರಿಕೂಟದ ಭಾಗವಾಗಿಲ್ಲ.
ಕಾಂಗ್ರೆಸ್ ಹೊರಕ್ಕೆ: ಉತ್ತರ ಪ್ರದೇಶದಲ್ಲಿನ ಮಹಾಮೈತ್ರಿಕೂಟದಿಂದ ಕಾಂಗ್ರೆಸ್ ಹೊರಗುಳಿಯಲಿದೆ ಎಂಬ ಸುದ್ದಿ ನಿಜವಾಗಿದೆ. 80 ಕ್ಷೇತ್ರಗಳಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಸ್ಪರ್ಧಿಸಲಿವೆ. ತಾತ್ವಿಕವಾಗಿ ಈ ಬಗ್ಗೆ ಒಪ್ಪಿಕೊಳ್ಳಲಾಗಿದೆ. ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸುತ್ತದೆ ಎನ್ನುವುದನ್ನು ಶೀಘ್ರ ಪ್ರಕಟಿಸಲಾಗುತ್ತದೆ ಎಂದು ಎಸ್‌ಪಿ ನಾಯಕ ರಾಜೇಂದ್ರ ಚೌಧರಿ ಹೇಳಿದ್ದಾರೆ. ಮೂಲಗಳನ್ನು ಉಲ್ಲೇಖೀಸಿ “ನ್ಯೂಸ್ 18′ ವರದಿ ಮಾಡಿರುವ ಪ್ರಕಾರ ಎಸ್‌ಪಿ, ಬಿಎಸ್‌ಪಿ ತಲಾ 37 ಸ್ಥಾನಗಳಲ್ಲಿ ಸ್ಪರ್ಧಿ ಸಲು ಮುಂದಾಗಿವೆ. ಜತೆಗೆ ಕೇಂದ್ರದ ಮಾಜಿ ಸಚಿವ ಅಜಿತ್ ಸಿಂಗ್‌ರ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಕೂಡ ಮೈತ್ರಿಕೂಟದಲ್ಲಿ ಇರಲಿದೆ. ಅದಕ್ಕೆ 2 ಸ್ಥಾನ ಸಿಗಲಿವೆ. ಮಥುರಾದಿಂದ ಅಜಿತ್ ಸಿಂಗ್ ಪುತ್ರ ಜಯಂತ್ ಸಿಂಗ್, ಭಾಗ³ತ್ ನಿಂದ ಅಜಿತ್ ಸಿಂಗ್ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.
ನಾವು ಸಿದ್ಧ: ಕಾಂಗ್ರೆಸ್‌ಗೆ ಈ ಬೆಳವಣಿಗೆ ಹಿನ್ನಡೆಯಾಗಿದೆ. ಆದರೂ, ರಾಜ್ಯ ಸಭಾ ಸದಸ್ಯ ಪಿ.ಎಲ್.ಪೂನಿಯಾ, “ಕಾಂಗ್ರೆಸ್ ಏಕಾಂಗಿ ಯಾಗಿ ಸ್ಪರ್ಧಿಸಲಿದೆ. ಚುನಾವಣೆಗೆ ಪಕ್ಷದ ಕಾರ್ಯ ಕರ್ತರು ಸಿದ್ಧರಾಗಿದ್ದಾರೆ’ ಎಂದು ಹೇಳಿದ್ದಾರೆ.
20 ಸ್ಥಾನಗಳಲ್ಲಿ ಸ್ಪರ್ಧೆ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಜತೆಯಾಗಿ ಸ್ಪರ್ಧೆ ಮಾಡಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿರಬೇಕಾದರೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಇತರ ಎಂಟು ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ನೀಡಲಾಗುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್ ಖಚಿತಪಡಿಸಿದ್ದಾರೆ.
9ಕ್ಕೆ ರ್ಯಾಲಿ: ಮೂರು ರಾಜ್ಯಗಳಲ್ಲಿ ಸಾಲ ಮನ್ನಾ ಮಾಡಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಗೂ ಅದೇ ಅಸ್ತ್ರ ಬಳಸಿಕೊಳ್ಳಲು ಮುಂದಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡಗಳಲ್ಲಿ ಕಿಸಾನ್ ಅಭಾರ್ ಎಂಬ ಶಿರೋನಾಮೆಯ ರ್ಯಾಲಿಗಳನ್ನು ರಾಹುಲ್ ನಡೆಸಲಿದ್ದಾರೆ. ಈ ಪೈಕಿ ಮೊದಲ ರ್ಯಾಲಿ ಜ.9ರಂದು ಜೈಪುರದಲ್ಲಿ ನಡೆಯಲಿದೆ.
ಪ್ರಯಾಗ್‌ರಾಜ್‌ಗೆ ರಾಹುಲ್ ಭೇಟಿ?
ಕುಂಭ ಮೇಳಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೇಟಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ನೀಡಿದ ಪಕ್ಷದ ವಕ್ತಾರ ನದೀಂ ಜಾವೆದ್ “ರಾಹುಲ್ ಗಾಂಧಿ ತಾವು ನಂಬಿಕೊಂಡ ಧಾರ್ಮಿಕ ನಂಬಿಕೆಗಳಿಗೆ ಬದ್ಧರಾಗಿ ದ್ದಾರೆ. ಜವಾಹರ್‌ಲಾಲ್ ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಧ್ಯಕ್ಷರಿಗೆ ಸಮಯವಿದ್ದರೆ ಅಲ್ಲಿಗೆ ಭೇಟಿ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.