ಬಂಗಾಳದ ಮಮತಾ ಪ್ರಧಾನಿ ಆಗಲಿ:ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್
Team Udayavani, Jan 6, 2019, 10:18 AM IST
ಕೋಲ್ಕತಾ: ಬಂಗಾಳದ ಯಾರಿಗಾದರೂ ಪ್ರಧಾನಿ ಆಗುವ ಅವಕಾಶ ಸಿಕ್ಕಿದರೆ ಅದು ಮಮತಾ ಬ್ಯಾನರ್ಜಿ ಅವರಿಗೆ ಸಿಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಹೇಳಿಕೆ ನೀಡಿ ಬಿಜೆಪಿ ವರಿಷ್ಠರು ಮತ್ತು ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಾನು ನಮ್ಮ ಮುಖ್ಯಮಂತ್ರಿಗಳಿಗೆ ಜನ್ಮ ದಿನಾಚರಣೆಯ ಶುಭ ಕೋರಲು ಬಯಸುತ್ತೇನೆ. ನಾನು ಅವರ ಆರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥನೆ ಮಾಡುತ್ತೇನೆ ಯಾಕೆಂದರೆ ನಮ್ಮ ರಾಜ್ಯದ ಭವಿಷ್ಯ ಅವರ ಕೈಯಲ್ಲಿ ಇದೆ.ಬಂಗಾಳದಿಂದ ಯಾರಿಗಾದರೂ ಪ್ರಧಾನಿ ಆಗುವ ಅವಕಾಶ ದೊರೆತರೆ ಅದು ಮಮತಾ ಅವರಿಗೆ ಸಿಗಲಿ ಎಂದು ದಿಲೀಪ್ ಘೋಷ್ ಶನಿವಾರ ಹೇಳಿಕೆ ನೀಡಿದ್ದರು.
ಘೋಷ್ ಹೇಳಿಕೆ ಭಾರಿ ಸುದ್ದಿಯಾಗಿ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ‘ನಾನು ಹೇಳಿರುವುದನ್ನು ಒಳ್ಳೆಯ ಹಾಸ್ಯ ಎಂದು ಭಾವಿಸಿ, ಅವರು ಪ್ರಧಾನಿಯಾಗುವುದು ಸಾಧ್ಯವಿಲ್ಲ‘ ಎಂದಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ 42 ಸ್ಥಾನಗಳ ಪೈಕಿ 34 ಸ್ಥಾನಗಳನ್ನು ಟಿಎಂಸಿ ಗೆದ್ದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.