ಆಕ್ಲೆಂಡ್ ಕ್ಲಾಸಿಕ್ ಟೆನಿಸ್ ಪ್ರಶಸ್ತಿ ಉಳಿಸಿಕೊಂಡ ಜೂಲಿಯಾ
Team Udayavani, Jan 7, 2019, 12:30 AM IST
ಆಕ್ಲೆಂಡ್: ಹಾಲಿ ಚಾಂಪಿಯನ್ ಜರ್ಮನಿಯ ಜೂಲಿಯಾ ಜಾರ್ಜಸ್ “ಆಕ್ಲೆಂಡ್ ಕ್ಲಾಸಿಕ್’ ಟೆನಿಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರವಿವಾರ ನಡೆದ ಫೈನಲ್ನಲ್ಲಿ ಜೂಲಿಯಾ ಜಾರ್ಜಸ್ ಕೆನಡಾದ ಯುವ ಟೆನಿಸ್ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕಾ ಅವರನ್ನು 2-6, 7-5, 6-1 ಸೆಟ್ಗಳಿಂದ ಸೋಲಿಸಿದರು. ಫೈನಲ್ ಹಾದಿಯಲ್ಲಿ ವಿಶ್ವದ ಮಾಜಿ ನಂ. ವನ್ ಆಟಗಾರ್ತಿಯರಾದ ವೀನಸ್ ವಿಲಿಯಮ್ಸ್, ಕ್ಯಾರೊಲಿನ್ ವೋಜ್ನಿಯಾಕಿ ಅವರನ್ನು ಸೋಲಿಸಿದ್ದ ಬಿಯಾಂಕಾ, ಹಾಲಿ ಚಾಂಪಿಯನ್ ಎದುರು ಮುಗ್ಗರಿಸಿದರು.
ಮೊದಲ ಸೆಟ್ ಗೆದ್ದ ಬಿಯಾಂಕಾ, ದ್ವಿತೀಯ ಸೆಟ್ ಅನ್ನು ಜಿದ್ದಾಜಿದ್ದಿ ಹೋರಾಟದಲ್ಲಿ ಕಳೆದುಕೊಳ್ಳಬೇಕಾಯಿತು. ಇದು ಜಾರ್ಜಸ್ ಅವರ ವೃತ್ತಿಜೀವನದ 7ನೇ ಟೆನಿಸ್ ಪ್ರಶಸ್ತಿ.
“ಬಿಯಾಂಕಾ ನನಗೆ ತಕ್ಕ ಪೈಪೋಟಿಯನ್ನೇ ನೀಡಿದ್ದಾರೆ. ಮುಂದೆ ಆಕೆಯ ಕುರಿತು ಸಾಕಷ್ಟು ಸಂತಸದ ಸುದ್ದಿಗಳು ನನ್ನ ಕಿವಿಗೆ ಬೀಳುತ್ತದೆ ಎಂಬ ಬಗ್ಗೆ ನಂಬಿಕೆಯಿದೆ. ಇವತ್ತು ನನ್ನ ಅನುಭವವನ್ನೆಲ್ಲ ಒಟ್ಟುಗೂಡಿಸಿ ಆಡಿದೆ. ಇದು ಅವಿಸ್ಮರಣೀಯ ಕ್ಷಣ’ ಎಂಬುದು ವಿಶ್ವ ರ್ಯಾಂಕಿಂಗ್ನಲ್ಲಿ 14ನೇ ಸ್ಥಾನದಲ್ಲಿರುವ ಜೂಲಿಯಾ ಜಾರ್ಜಸ್ ಪ್ರತಿಕ್ರಿಯೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.