ಪ್ಲಿಸ್ಕೋವಾಗೆ ಬ್ರಿಸ್ಬೇನ್ ಟೆನಿಸ್ ಪ್ರಶಸ್ತಿ
Team Udayavani, Jan 7, 2019, 1:25 AM IST
ಬ್ರಿಸ್ಬೇನ್: ಭಾರೀ ಪೈಪೋಟಿ ನೀಡಿದ ಉಕ್ರೇನಿನ ಲೆಸಿಯಾ ಸುರೆಂಕೊ ಅವರಿಗೆ 4-6, 7-5, 6-2 ಅಂತರದಿಂದ ಸೋಲುಣಿಸುವ ಮೂಲಕ ಕ್ಯಾರೋಲಿನಾ ಪ್ಲಿಸ್ಕೋವಾ “ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೊದಲ ಸೆಟ್ ಗೆದ್ದ ಸುರೆಂಕೊ, ದ್ವಿತೀಯ ಸೆಟ್ ವೇಳೆ 5-4ರ ಮುನ್ನಡೆ ಸಾಧಿಸಿದ್ದರು. ಈ ಸಂದರ್ಭದಲ್ಲಿ ಸರ್ವ್ ಕೂಡ ಅವರದೇ ಆಗಿತ್ತು. ಆದರೆ ದಿಢೀರನೇ ತಿರುಗಿ ಬಿದ್ದ ಪ್ಲಿಸ್ಕೋವಾ 7-5ರಿಂದ ದ್ವಿತೀಯ ಸೆಟ್ ವಶಪಡಿಸಿಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ಸುರೆಂಕೊ ಆಟ ಸಾಗಲಿಲ್ಲ.
ಮೊದಲ ಸೆಟ್ ಕೇವಲ 38 ನಿಮಿಷಗಳಲ್ಲಿ ಸುರೆಂಕೊ ಪಾಲಾಯಿತು. 10 ವಿನ್ನರ್ ಹಾಗೂ ಮೊದಲ ಸರ್ವ್‌ನ ಶೇ. 81ರಷ್ಟು ಯಶಸ್ಸು ಉಕ್ರೇನಿಯನ್ ಆಟಗಾರ್ತಿಯ ಹೆಚ್ಚುಗಾರಿಕೆಯಾಗಿತ್ತು. ದ್ವಿತೀಯ ಸೆಟ್‌ನಲ್ಲಿ 5-4ರ ಮುನ್ನಡೆಯಲ್ಲಿದ್ದಾಗ ತಿರುಗಿ ಬಿದ್ದ ಪ್ಲಿಸ್ಕೋವಾ ಮುಂದಿನ 14 ಅಂಕಗಳಲ್ಲಿ 13ನ್ನು ವಶಪಡಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಪಂದ್ಯ ಒಟ್ಟು 2 ಗಂಟೆ, 12 ನಿಮಿಷಗಳ ಕಾಲ ಸಾಗಿತು. ಇದು ಪ್ಲಿಸ್ಕೋವಾ ಪಾಲಾದ 8ನೇ ಟೆನಿಸ್ ಪ್ರಶಸ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.