ಒಂದೇ ಪಾತ್ರೆಯಲ್ಲಿ 5 ಸಾವಿರ ಕೆ.ಜಿ. ಕಿಚಡಿ
Team Udayavani, Jan 7, 2019, 12:30 AM IST
ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ದಲಿತ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ರವಿವಾರ ರಾಮ್‌ಲೀಲಾ ಮೈದಾನದಲ್ಲಿ ಬೃಹತ್ ಭೀಮ್ ಮಹಾಸಂಗಮ್ ವಿಜಯ ಸಂಕಲ್ಪ ರ‍್ಯಾಲಿಯನ್ನು ಆಯೋಜಿಸಿತ್ತು. ಇದರ ವಿಶೇಷತೆಯೇನೆಂದರೆ, ಈ ರ‍್ಯಾಲಿ ವೇಳೆ ಬರೋಬ್ಬರಿ 5 ಸಾವಿರ ಕೆ.ಜಿ. ಕಿಚಡಿಯನ್ನು ತಯಾರಿಸಲಾಗಿತ್ತು.
ಅಷ್ಟೂ ಕಿಚಡಿಯನ್ನು ಒಂದೇ ಪಾತ್ರೆಯಲ್ಲಿ ತಯಾರಿಸುವ ಮೂಲಕ ಗಿನ್ನೆಸ್ ದಾಖಲೆಯನ್ನೂ ಮಾಡಲಾಯಿತು. ದೆಹಲಿಯಲ್ಲಿ ಪಕ್ಷವು ದಲಿತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ರ‍್ಯಾಲಿ ಆಯೋಜಿಸಲಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂ ಇದರಲ್ಲಿ ಪಾಲ್ಗೊಂಡು ಮಾತನಾಡಿದರು. ಕಿಚಡಿಗೆ ಅಗತ್ಯವಿದ್ದ ಅಕ್ಕಿ ಹಾಗೂ ಕಾಳುಗಳನ್ನು 3 ಲಕ್ಷ ದಲಿತರ ಮನೆಗಳಿಂದಲೇ ಸಂಗ್ರಹಿಸಲಾಗಿತ್ತು. ಕಿಚಡಿ ತಯಾರಿಸಲೆಂದು 20 ಅಡಿ ಸುತ್ತಳತೆಯ, 6 ಅಡಿ ಆಳದ ಬೃಹತ್ ಪಾತ್ರೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಲಾಗಿತ್ತು ಎಂದು ದೆಹಲಿ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಮೋಹನ್‌ಲಾಲ್ ಗಿಹಾರಾ ಹೇಳಿದ್ದಾರೆ.
ಈ ಹಿಂದೆ 2017ರಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯ ಮತ್ತು ಬಾಣಸಿಗ ಸಂಜೀವ್ ಕಪೂರ್ ಅವರು 918.8 ಕೆ.ಜಿ. ಕಿಚಡಿ ತಯಾರಿಸಿ ವಿಶ್ವ ದಾಖಲೆ ಮಾಡಿದ್ದರು. ಈಗ ಬಿಜೆಪಿ ಆ ದಾಖಲೆಯನ್ನು ಸರಿಗಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋದರ, ಬಿಜೆಪಿ ಶಾಸಕ ದೇವೇಂದ್ರ ಸಿಂಗ್ ರಾಣಾ ನಿಧನ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Wayanad: ಕರ್ನಾಟಕ-ಕೇರಳಕ್ಕೆ ರಾತ್ರಿ ಪ್ರಯಾಣ: ಸಮಸ್ಯೆ ಕೇಳದ ರಾಹುಲ್‌ಗೆ ಸಿಪಿಐ ಟೀಕೆ
New Delhi: 3 ವರ್ಷ ಕನಿಷ್ಠಕ್ಕೆ ದಿಲ್ಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಭಾರೀ ಕುಸಿತ
MUST WATCH
ಹೊಸ ಸೇರ್ಪಡೆ
Jammu: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋದರ, ಬಿಜೆಪಿ ಶಾಸಕ ದೇವೇಂದ್ರ ಸಿಂಗ್ ರಾಣಾ ನಿಧನ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.