ಚಳವಳಿಗೆ ಬೆಂಬಲ :ಮಂಗಳೂರು ಬಂದರು ಬಂದ್
Team Udayavani, Jan 7, 2019, 4:47 AM IST
ಮಂಗಳೂರು: ಮಲ್ಪೆ ಮೀನುಗಾರರ ಸಂಘ ಆಯೋಜಿಸಿದ್ದ “ರಸ್ತೆ ತಡೆ ಚಳವಳಿ’ ಬೆಂಬಲಿಸಿ ರವಿವಾರ ಮಂಗಳೂರು ಬಂದರು ಸಂಪೂರ್ಣ ಸ್ತಬ್ಧವಾಗಿತ್ತು.
ಮಂಗಳೂರು ಮೀನುಗಾರಿಕೆ ಬಂದರಿನಲ್ಲಿನ ಆಳ ಸಮುದ್ರ ಬೋಟ್, ಪರ್ಸಿನ್, ಟ್ರಾಲ್ ಬೋಟ್ ಹಾಗೂ ಇತರ ಬೋಟ್‌ಗಳ ಸಹಿತ ಸುಮಾರು 1,200 ಬೋಟ್‌ಗಳು ಬಂದರಿನಲ್ಲಿಯೇ ಲಂಗರು ಹಾಕಿದ್ದವು. ವಿವಿಧ ಸಂಘಟನೆಗಳ ಕಾರ್ಮಿಕರ ಸಹಿತ 1,500ಕ್ಕೂ ಹೆಚ್ಚಿನ ಮಂದಿ ಉಡುಪಿ ರಾಸ್ತಾ ರೋಕೋದಲ್ಲಿ ಭಾಗವಹಿಸಿದ್ದರು.
ಸದಾ ಗ್ರಾಹಕರಿಂದ ತುಂಬಿರುವ ಸ್ಟೇಟ್‌ಬ್ಯಾಂಕ್ ಮೀನು ಮಾರುಕಟ್ಟೆ ಯಲ್ಲಿ ರವಿವಾರ ಕಾರ್ಮಿಕರು ಮೀನು ಮಾರಾಟ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಪಕ್ಕದಲ್ಲಿರುವ ಒಣ ಮೀನು ಮಾರುಕಟ್ಟೆ ಕೂಡ ಬಂದ್ ಆಗಿತ್ತು.
11 ಕೋಟಿ ರೂ. ವ್ಯವಹಾರ ನಷ್ಟ
ಮಂಗಳೂರು/ಮಲ್ಪೆ: ಉಡುಪಿಯಲ್ಲಿ ರವಿವಾರ ನಡೆದ ಮೀನುಗಾರರ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ಮೀನು ವ್ಯವಹಾರದಲ್ಲಿ ಸುಮಾರು 11 ಕೋಟಿ ರೂ. ನಷ್ಟವಾಗಿದೆ. ಸಾಮಾನ್ಯ ದಿನಗಳಲ್ಲಿ ಪ್ರತೀ ದಿನ 5-7 ಕೋಟಿ ರೂ. ವ್ಯವಹಾರ ನಡೆಯುತ್ತಿದ್ದ ಮಂಗಳೂರಿನ ಮೀನುಗಾರಿಕೆ ಕ್ಷೇತ್ರದಲ್ಲಿ ಬಂದ್‌ನಿಂದಾಗಿ 5 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಹೇಳಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಮಲ್ಪೆ ಸಹಿತ ಉಡುಪಿಯಲ್ಲಿ ಮೀನು ವ್ಯವಹಾರ ಸಂಪೂರ್ಣ ಸ್ಥಗತಗೊಂಡಿತ್ತು. ಇದರಿಂದ ಮೀನು ವ್ಯವಹಾರದಲ್ಲಿ ಸುಮಾರು ಆರು ಕೋಟಿ ರೂ. ನಷ್ಟವಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ ಕುಂದರ್ ಹೇಳಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಮಲ್ಪೆ ಸಹಿತ ಉಡುಪಿಯಲ್ಲಿ ಮೀನು ವ್ಯವಹಾರ ಸಂಪೂರ್ಣ ಸ್ಥಗತಗೊಂಡಿದ್ದು ಸುಮಾರು ಆರು ಕೋಟಿ ರೂ. ನಷ್ಟವಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ ಕುಂದರ್ ಹೇಳಿದ್ದಾರೆ.
ವಾಹನಗಳ ಸಂಚಾರಕ್ಕೆ ಅಡಚಣೆ
ಬೃಹತ್ ಪ್ರತಿಭಟನೆಯ ಸಂದರ್ಭ ಬದಲಿ ಮಾರ್ಗಗಳಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾಗದಂತೆ ಟ್ರಕ್ ಇತ್ಯಾದಿ ಘನ ವಾಹನಗಳನ್ನು ಬಹು ದೂರದಲ್ಲಿಯೇ ತಡೆದು ನಿಲ್ಲಿಸಲಾಗಿತ್ತು. ಲಾರಿ, ಟ್ಯಾಂಕರ್ ಮತ್ತಿತರ ಘನ ವಾಹನಗಳನ್ನು ಪಾಂಗಾಳ, ಕಾಪು, ಮೂಳೂರು, ಸಾಸ್ತಾನ ಭಾಗದಲ್ಲಿ ನಿಲ್ಲಿಸಲಾಗಿದ್ದು, ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal: ಎಂಡಿಎಂಎ ಸಾಗಾಟ: ಮೂವರ ಬಂಧನ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.