ಹೊಸ ವರ್ಷಕ್ಕೆ ಹೊಸ ತರಹದ ಸಿನಿಮಾ
Team Udayavani, Jan 7, 2019, 6:04 AM IST
* ಮದುವೆಯ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಲಂಬೋದರ. ಏನನಿಸುತ್ತಿದೆ..?
ಸಿನಿಮಾದ ಬಿಡುಗಡೆಯಾಗುತ್ತಿರುವುದರ ಬಗ್ಗೆ ಖುಷಿಯಂತೂ ಇದೆ. ಇನ್ನೊಂದು ಕಡೆ ಎಕ್ಸೈಟ್‌ಮೆಂಟ್ ಜೊತೆಗೆ ಟೆನ್ಷನ್ ಕೂಡ ಆಗ್ತಿದೆ. ಸುಮಾರು ಒಂದೂವರೆ ವರ್ಷ ಆದಮೇಲೆ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎರಡೂ ಇದ್ದೇ ಇದೆ.
* “ಲಂಬೋದರ’ ರಿಲೀಸ್ ಆಗೋದು ತಡವಾಗಿದ್ದೇಕೆ?
ನಮ್ಮ ಪ್ಲಾನ್ ಪ್ರಕಾರ ಎಲ್ಲ ನಡೆದಿದ್ದರೆ ಕಳೆದ ವರ್ಷಾಂತ್ಯದೊಳಗೆ ಸಿನಿಮಾ ರಿಲೀಸ್ ಆಗಬೆಕಿತ್ತು. ಆದ್ರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ತೆಗೆದುಕೊಂಡಿತು. ಜೊತೆಗೆ ಚಿತ್ರದ ಪ್ರಮೋಷನ್ಸ್‌ಗೆ ಕೂಡ ಒಂದಷ್ಟು ಸಮಯ ಹಿಡಿಯಿತು ಹಾಗಾಗಿ ರಿಲೀಸ್ ಆಗೋದು ಸ್ವಲ್ಪ ತಡವಾಯಿತು.
* “ಲಂಬೋದರ’ನ ರಿಲೀಸ್‌ಗೂ ಮುನ್ನ ಪ್ರತಿಕ್ರಿಯೆ ಹೇಗಿದೆ?
ಈಗಾಗಲೇ ಲಂಬೋದರ ಚಿತ್ರದ ಹಾಡುಗಳು, ಟ್ರೇಲರ್ ಎಲ್ಲದಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಸೋಷಿಯಲ್ ಮೀಡಿಯಾಗಳಲ್ಲೂ ಟ್ರೇಲರ್ ಟ್ರೆಂಡಿಂಗ್‌ನಲ್ಲಿದೆ. ಚಿತ್ರದ ಬಗ್ಗೆ ಚಿತ್ರರಂಗದ ಕಡೆಯಿಂದ, ಆಡಿಯನ್ಸ್ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ಸಿನಿಮಾದ ಮೇಲೂ ನಿರೀಕ್ಷೆ ಇದೆ. ಸಿನಿಮಾ ನೋಡಿನ ನನ್ನ ಪತ್ನಿ, ಫ್ರೆಂಡ್ಸ್ ಕೂಡ ಸಾಕಷ್ಟು ನಿರೀಕ್ಷೆಯ ಮಾತಾಡಿದ್ದಾರೆ.
* “ಲಂಬೋದರ’ ಚಿತ್ರದಲ್ಲಿ ಪ್ರೇಕ್ಷಕರು ಏನೆಲ್ಲಾ ನಿರೀಕ್ಷಿಸಬಹುದು?
ಲಂಬೋದರ ಸಿನಿಮಾದಲ್ಲಿ ನಾವೇನೂ ದೊಡ್ಡ ವಿಷಯವನ್ನು ಹೇಳುತ್ತಿಲ್ಲ. ಆಡಿಯನ್ಸ್‌ಗೆ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಇಡೀ ಸಿನಿಮಾದಲ್ಲಿ ಸಿಗಬೇಕು ಅನ್ನೋದನ್ನ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಎರಡು ಗಂಟೆ ಕಂಪ್ಲೀಟ್ ಎಂಟರ್‌ಟೈನ್ಮೆಂಟ್‌ಗಂತೂ ಮೋಸವಿಲ್ಲ. ಪ್ರತಿಯೊಬ್ಬರು ಚಿತ್ರದ ಪಾತ್ರಗಳನ್ನು ತಮ್ಮ ಜೊತೆ ಕನೆಕ್ಟ್ ಮಾಡಿಕೊಳ್ಳುತ್ತಾರೆ.
* ನಿಮ್ಮ ಪ್ರಕಾರ “ಲಂಬೋದರ’ ಯಾವ ಥರದ ಸಿನಿಮಾ?
ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ “ಲಂಬೋದರ’, “ಸಿದ್ಲಿಂಗು’ ಚಿತ್ರದ ನೆಕ್ಸ್ಟ್ ವರ್ಷನ್. “ಸಿದ್ಲಿಂಗು’ ಚಿತ್ರದಲ್ಲಿ ಆಡಿಯನ್ಸ್ ಯಾವ್ಯಾವ ಅಂಶಗಳನ್ನು ಎಂಜಾಯ್ ಮಾಡಿದ್ರೋ, ಅದೆಲ್ಲವೂ ಈ ಸಿನಿಮಾದಲ್ಲೂ ಸಿಗುತ್ತದೆ. ಯಾರೂ ಮಾಡಿರದ ಥರದ ಸಿನಿಮಾ ನಾವು ಮಾಡಿದ್ದೇವೆ ಎಂದು ಹೇಳುತ್ತಿಲ್ಲ. ಆದ್ರೆ ಮನರಂಜನೆ ಕೊಡುವ ಸಿನಿಮಾ ಮಾಡಿದ್ದೇವೆ.
* ನೀವು ಗಮನಿಸಿದಂತೆ ಸಿನಿಮಾದ ಹೈಲೈಟ್ಸ್ ಯಾವುದು?
ಸಿನಿಮಾದಲ್ಲಿ ಚಿತ್ರಕಥೆಯ ನಿರೂಪಣೆ, ಕ್ಯಾಮರಾ ವರ್ಕ್, ಸಂಗೀತ, ಹಿನ್ನೆಲೆ ಸಂಗೀತ ಎಲ್ಲವೂ ಚಿತ್ರದಲ್ಲಿ ಹೈಲೈಟ್ಸ್ ಎನ್ನಬಹುದು. ಚಿತ್ರದ ಪ್ರತಿಯೊಂದು ವಿಭಾಗದಲ್ಲೂ ಉತ್ತಮ ಕೆಲಸವನ್ನು ಕಾಣಬಹುದು. ಹೊಸ ವರ್ಷಕ್ಕೆ ಹೊಸ ಥರದ ಸಿನಿಮಾವಾಗಲಿದೆ ಎಂಬ ನಂಬಿಕೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.