ಶಾರ್ಟ್ ಸರ್ಕ್ನೂಟ್ : ಅಪಾರ ಹಾನಿ
Team Udayavani, Jan 7, 2019, 6:38 AM IST
ಅಫಜಲಪುರ: ಶಾರ್ಟ್ ಸರ್ಕ್ನೂಟ್ ನಿಂದಾಗಿ ಮನೆಯೊಂದರಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ಆಭರಣ ಸುಟ್ಟುಹೋದ ಘಟನೆ ತಾಲೂಕಿನ ಬಡದಾಳದಲ್ಲಿ ನಡೆದಿದೆ.
ಲಕ್ಷ್ಮೀಪುತ್ರ ಗುಡೆದಮನಿ ಎನ್ನುವರು ಜ.6ರಂದು ಬೆಳಗ್ಗೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಅಫಜಲಪುರ ಪಟ್ಟಣಕ್ಕೆ ಹೋಗಿದ್ದರು. ಅವರ ಪತ್ನಿ ಮಹಾನಂದಾ ಹಾಗೂ ನಾಲ್ವರು ಮಕ್ಕಳು ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ ಮನೆಯಲ್ಲಿ ಹೊಗೆ ಕಾಣಿಸಿಕೊಂಡಾಗ ಪಕ್ಕದ ಮನೆಯ ಮಕ್ಕಳು ಕೂಗಿಕೊಂಡರು.
ಈ ವೇಳೆ ಗ್ರಾಮದ ಯುವಕರು ಬೆಂಕಿ ನಂದಿಸಲು ಮುಂದಾಗಿದರು. ಅಗ್ನಿಶಾಮಕ ಠಾಣೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಮನೆಯಲ್ಲಿದ್ದ ಎರಡು
ಲಕ್ಷ ರೂ., ಬಂಗಾರೆದ ಆಭರಣ, ಧವಸ ಧಾನ್ಯ, ಪುಸ್ತಕಗಳು, ಬಟ್ಟೆ, ಪಾತ್ರೆಗಳು ಎಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.