ಭಜನೆಯಿಂದ ಮನಸ್ಸಿಗೆ ಆನಂದ
Team Udayavani, Jan 7, 2019, 10:34 AM IST
ಭಾಲ್ಕಿ: ಭಜನೆ ಮಾಡುವುದು ಭಗವಂತನ ಆರಾಧನೆ ಒಂದು ವಿಧಾನ. ಇದರಿಂದ ಜನರಲ್ಲಿ ಭಕ್ತಿಭಾವ ಮೂಡುವುದರ ಜತೆಗೆ ಪರಮಾನಂದ ದೊರಕುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು. ತಾಲೂಕಿನ ಆಳಂದಿ ಗ್ರಾಮದಲ್ಲಿ ರವಿವಾರ ಶ್ರೀ ವಿಠಲ ರುಕ್ಮಿಣಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ವಿಠಲ ರುಕ್ಮಿಣಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಶೈಕ್ಷಣಿಕ, ಸಾಂಸ್ಕೃತಿ ವ್ಯಕ್ತಿತ್ವ ವಿಕಸನ ಹಾಗೂ ಭಜನಾ ಜಾನಪದ ಕಲಾ ಅಭಿವೃದ್ಧಿ ಟ್ರಸ್ಟ್ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ದೇವರ ನಾಮಸ್ಮರಣೆಯಿಂದ ಮನುಷ್ಯ ಲೌಕಿಕತೆಯಿಂದ ಅಲೌಕಿಕತೆಯಡೆಗೆ ಹೊರಳುತ್ತಾನೆ. ಶರಣರು ಸಂತಸರು, ದಾರ್ಶನಿಕರು ಸದಾ ಇದೆ ಮಾರ್ಗದಲ್ಲಿ ನಡೆದವರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಿವಾಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಮಾತನಾಡಿ, ಭಜನೆ, ಕೀರ್ತನೆಗಳು ಊರಿನ ಜನರಲ್ಲಿ ಸಾಮರಸ್ಯದ ಭಾವ ಮೂಡಿಸುವುದರ ಜೊತೆಗೆ ಪರಮಾನಂದ ದೊರಕುತ್ತದೆ. ದೇವರನ್ನು ಗುಡಿ ಗುಂಡಾರಗಳಲ್ಲಿ ಅರಸದೆ ತಮ್ಮ ತನುಮನ ಭಾವ ಶುದ್ಧಿ ಮಾಡಿಕೊಂಡು ತಮ್ಮಲ್ಲಿಯೇ ಭಗವಂತನ ಸಾಕ್ಷಾತ್ಕಾರ ಮಾಡಿ ಕೊಳ್ಳಬಹುದಾಗಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಪ್ರೊ| ಅಶೋಕ ಮೈನಾಳೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಂತೆ ಇರುವ ಹಿರಿಯ ಜಾನಪದ ಕಲಾವಿದರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಕೆಲಸ ಪರಿಷತ್ ಮಾಡುತ್ತಿದೆ. ಜಾನಪದ ಕಲಾವಿದರಿಗೆ ಸರ್ಕಾರದಿಂದ ಸಾಕಷ್ಟು ಸವಲತ್ತು ಮತ್ತು ಅವಕಾಶಗಳಿವೆ. ಅವುಗಳನ್ನು ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.
ಜಗದೇವಿ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮ ಮಹಾರಾಜ ನೇತೃತ್ವ ಮತ್ತು ವೆಂಕಟರಾವ ಬುಜುರುಕ ಅಧ್ಯಕ್ಷತೆ ವಹಿಸಿದ್ದರು. ರಘುನಾಥರಾವ ಬಿರಾದಾರ, ಹಣಮಂತಪ್ಪ ಚಿದ್ರಿ, ಕೊಂಡಲ, ವೈಷ್ಣವಿ ಹೂಗಾರ, ಹರಿ ಓಂ, ನಿರಂಜಯ್ಯ ಸ್ವಾಮಿ, ಶಿವರಾಜ ಹೂಗಾರ, ವಿಜಯಕುಮಾರ ಹೂಗಾರ, ಮಲ್ಲಯ್ಯ ಸ್ವಾಮಿ, ಮಹಾದೇವ ಹೂಗಾರ, ಸೂರ್ಯಕಾಂತ, ಈಶ್ವರರಾವ, ರಘುನಾಥರಾವ ಇದ್ದರು.
ನಿವೇದಿತಾ ಹೂಗಾರ ಟ್ರಸ್ಟ್ ಅಧ್ಯಕ್ಷೆ ಶ್ರೀದೇವಿ ಹೂಗಾರ ನಿರೂಪಿಸಿದರು. ಶ್ರೀ ವಿಠಲ ರುಕ್ಮಿಣಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಶೈಕ್ಷಣಿಕ, ಸಾಂಸ್ಕೃತಿ ವ್ಯಕ್ತಿತ್ವ ವಿಕಸನ ಹಾಗೂ ಭಜನಾ ಜಾನಪದ ಕಲಾ ಅಭಿವೃದ್ಧಿ ಟ್ರಸ್ಟ್ ಪದಾ ಧಿಕಾರಿಗಳು ಭಜನ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.