ಮಂಗಳೂರಿನಲ್ಲಿ ಮೆದುಳು ನಿಷ್ಕ್ರಿಯ ಘೋಷಣೆ ವ್ಯವಸ್ಥೆ


Team Udayavani, Jan 8, 2019, 2:32 AM IST

brain-dead-7-1.jpg

ಮಂಗಳೂರು: ಇನ್ನು ಅಂಗಾಂಗ ದಾನ ಕುರಿತು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕೆ ಬೆಂಗಳೂರಿನಿಂದ ವೈದ್ಯರ ತಂಡ ಕರಾವಳಿಗೆ ದೌಡಾಯಿಸಬೇಕಾದ ಅಗತ್ಯವಿಲ್ಲ. ಈ ಪ್ರಕ್ರಿಯೆ ಸುಲಭ ಮತ್ತು ತ್ವರಿತವಾಗಿ ನಡೆಯಲು ‘ಮೆದುಳು ನಿಷ್ಕ್ರಿಯ ಘೋಷಣೆ’ ವ್ಯವಸ್ಥೆ ಮಂಗಳೂರಿನಲ್ಲಿ  ಅಸ್ತಿತ್ವಕ್ಕೆ  ಬಂದಿದೆ. ಅಂಗಾಂಗ ನಿಷ್ಕ್ರಿಯತೆ ಘೋಷಣೆಯ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಡೆಸಲು ಬೆಂಗಳೂರಿನಿಂದ ತಂಡ ಆಗಮಿಸುವುದಕ್ಕೆ ಕನಿಷ್ಠ ನಾಲ್ಕು ತಾಸು ಬೇಕು. 3-4 ತಿಂಗಳ ಹಿಂದಷ್ಟೇ ನಗರದ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯತೆ ಘೋಷಣೆಗೆ ಸರಕಾರದ ಜೀವ ಸಾರ್ಥಕತೆಯ ಸಮಿತಿ ರಚಿಸಲಾಗಿದೆ. ಇಬ್ಬರು ಸಂಯೋಜಕರು ಈ ಸಮಿತಿಯಲ್ಲಿದ್ದಾರೆ.

ಏನಿದು ಜೀವ ಸಾರ್ಥಕತೆ?
ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯೋರ್ವನ ಅಂಗಾಂಗ ದಾನ ಮಾಡುವುದಿದ್ದರೆ ಮೆದುಳು ನಿಷ್ಕ್ರಿಯತೆಯನ್ನು ಘೋಷಣೆ ಮಾಡಿ ಕಾನೂನು ಪ್ರಕ್ರಿಯೆಯ ಅನುಸಾರ ಅಂಗಾಂಗಗಳನ್ನು ತೆಗೆಯಬೇಕು. ಇದಕ್ಕಾಗಿ ಝೋನಲ್‌ ಕೋ- ಆರ್ಡಿನೇಶನ್‌ ಎಂಬ ಸಮಿತಿ ಕಾರ್ಯನಿರ್ವಹಿಸುತ್ತಿತ್ತು. ಅಂಗಾಂಗ ದಾನವನ್ನು ಕಾನೂನು ಚೌಕಟ್ಟಿನೊಳಗೆ ತರಲು ರಾಜ್ಯ ಸರಕಾರವು 2017ರಲ್ಲಿ ಜೀವ ಸಾರ್ಥಕತೆ ಎಂಬುದಾಗಿ ಮರು ನಾಮಕರಣ ಮಾಡಿತು. ಈಗ ಮಂಗಳೂರಿನ ವೆನ್ಲಾಕ್‌ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯತೆ ಘೋಷಣೆಗೆ ಜೀವ ಸಾರ್ಥಕತೆ ಉಪ ಸಮಿತಿಯನ್ನು ರಚಿಸಲಾಗಿದೆ.

9 ಆಸ್ಪತ್ರೆಗಳಲ್ಲಿ ಘೋಷಣೆ 
ಅಂಗಾಂಗ ದಾನಕ್ಕೂ ಮುನ್ನ ಮೃತ ವ್ಯಕ್ತಿಯ ಮೆದುಳು ನಿಷ್ಕ್ರಿಯತೆಯನ್ನು ಘೋಷಣೆ ಮಾಡಬೇಕು. ಅನಂತರವಷ್ಟೇ ಜೀವ ಸಾರ್ಥಕತೆ ತಂಡದವರು ಆ ಆಸ್ಪತ್ರೆಗೆ ತೆರಳಿ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಡೆಸುತ್ತಾರೆ. ಈ ಘೋಷಣೆಯನ್ನು ಸರಕಾರದಿಂದ ಪರವಾನಿಗೆ ಪಡೆದ ಮಂಗಳೂರು ಮತ್ತು ಮಣಿಪಾಲದ 9 ಆಸ್ಪತ್ರೆಗಳಲ್ಲಿ ಮಾತ್ರ ಮಾಡಲು ಸಾಧ್ಯ. ಮಣಿಪಾಲ ಆಸ್ಪತ್ರೆ, ಮಂಗಳೂರು ಕೆಎಂಸಿ, ಇಂಡಿಯಾನ ಆಸ್ಪತ್ರೆ, ಫಾ| ಮುಲ್ಲರ್‌ ಆಸ್ಪತ್ರೆ ಕಂಕನಾಡಿ, ಯೇನಪೊಯ ಸ್ಪೆಷಾಲಿಟಿ ಆಸ್ಪತ್ರೆ ಕೊಡಿಯಾಲಬೈಲ್‌, ಕೆ.ಎಸ್‌. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಯೇನಪೊಯ ಆಸ್ಪತ್ರೆ ದೇರಳಕಟ್ಟೆ, ಎ.ಜೆ. ಆಸ್ಪತ್ರೆ ಕುಂಟಿಕಾನ ಹಾಗೂ ಯುನಿಟಿ ಆಸ್ಪತ್ರೆಗಳಲ್ಲಿ ಇದಕ್ಕೆ ಸಂಬಂಧಿಸಿದ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಇವು ತಮ್ಮ ಆಸ್ಪತ್ರೆಗಳಲ್ಲಿ ನಿಯಮಾನುಸಾರ 2 ಬಾರಿ ಮೆದುಳು ನಿಷ್ಕ್ರಿಯತೆ ಘೋಷಿಸಿದ ಬಳಿಕ ಜೀವ ಸಾರ್ಥಕತೆ ಮೆದುಳು ನಿಷ್ಕ್ರಿಯ ಘೋಷಣೆ ಸಮಿತಿಗೆ ತಿಳಿಸಬೇಕು ಎಂದು ಜೀವ ಸಾರ್ಥಕತೆ ದ.ಕ. ಜಿಲ್ಲಾ ಸಂಯೋಜಕಿ ಲವೀನಾ ಗ್ಲಾಡಿಸ್‌ ಡಿ’ಸೋಜಾ ತಿಳಿಸಿದ್ದಾರೆ. ಇನ್ನೋರ್ವ ಸಂಯೋಜಕಿಯಾಗಿ ಪದ್ಮಾವತಿ ಅವರಿದ್ದಾರೆ.

15 ಮಂದಿಗೆ ಜೋಡಣೆ
ಓರ್ವ ವ್ಯಕ್ತಿಯಿಂದ ಎಂಟು ವ್ಯಕ್ತಿಗಳ ಜೀವ ಉಳಿಸಲು ಸಾಧ್ಯ. ಮರಣೋತ್ತರ ದಾನ, ಲೈವ್‌ ರಿಲೇಟೆಡ್‌ (ಜೀವಂತ ಇರುವಾಗಲೇ ನೀಡುವಂತಹದು) ಹಾಗೂ ಸಂಬಂಧಿಕರಲ್ಲದವರ ದಾನ ಎಂಬ ಮೂರು ವಿಧಗಳಿವೆ. ಕಿಡ್ನಿಗೆ ಹೆಚ್ಚಿನ ಬೇಡಿಕೆ ಇದ್ದು, ಇದು ದಾನಿಯು ಜೀವಂತ ಇರುವಾಗಲೇ ದಾನ ಮಾಡುವಂಥದ್ದು. ಮಂಗಳೂರಿನಲ್ಲಿ ಐದು ವರ್ಷಗಳ ಅವಧಿಯಲ್ಲಿ ಸುಮಾರು 15 ಮಂದಿಯ ಅಂಗಾಂಗಗಳನ್ನು ಇತರರಿಗೆ ಜೋಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ| ಸಚ್ಚಿದಾನಂದ ರೈ ತಿಳಿಸಿದ್ದಾರೆ. 

ನೋಂದಣಿ ಹೇಗೆ?
ಅಂಗಾಂಗ ದಾನದ ಇಚ್ಛೆಯುಳ್ಳವರು ಕುಟುಂಬಿಕರ ಅನುಮತಿ ಮತ್ತು ಕುಟುಂಬಿಕರೊಂದಿಗೆ ಆಗಮಿಸಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಆ ವ್ಯಕ್ತಿ ಮೃತಪಟ್ಟಲ್ಲಿ ಅಥವಾ ಅಪಘಾತದಂತಹ ಸಂದರ್ಭಗಳಲ್ಲಿ ಬದುಕುಳಿಯುವ ಸಾಧ್ಯತೆ ಕಡಿಮೆ ಇದ್ದಾಗ ಕುಟುಂಬಿಕರು ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಬೇಕು. ನೋಂದಣಿಯಾಗದಿದ್ದಲ್ಲಿ ಸ್ಥಳದಲ್ಲಿಯೇ ಕುಟುಂಬದವರಿಗೆ ಕೌನ್ಸೆಲಿಂಗ್‌ ನಡೆಸಿ ಅಂಗಾಂಗ ದಾನದ ಬಗ್ಗೆ ತಿಳಿಸುವ ಪ್ರಯತ್ನವನ್ನು ಜೀವ ಸಾರ್ಥಕತೆ ತಂಡ ಮಾಡುತ್ತದೆ.

ಈ ಹಿಂದೆ ಮೆದುಳು ನಿಷ್ಕ್ರಿಯತೆ ಘೋಷಣೆ ಬಳಿಕದ ಪ್ರಕ್ರಿಯೆಗಳನ್ನು ನಡೆಸಲು ಬೆಂಗಳೂರಿನಿಂದ ತಂಡ ಬರಬೇಕಿತ್ತು. ಕೆಲವು ತಿಂಗಳುಗಳಿಂದ ಜೀವ ಸಾರ್ಥಕತೆ ಯೋಜನೆಯ ಉಪ ಸಮಿತಿಯು ಸರಕಾರಿ ವೆನಾÉಕ್‌ ಆಸ್ಪತ್ರೆಯಲ್ಲಿ ಆರಂಭವಾಗಿರುವುದರಿಂದ ಪ್ರಕ್ರಿಯೆಗಳು ಸುಲಭವಾಗಿವೆ. 
– ಡಾ| ಜಿ.ಜಿ. ಲಕ್ಷ್ಮಣ ಪ್ರಭು, ಮುಖ್ಯಸ್ಥರು, ಯುರಾಲಜಿ ವಿಭಾಗ, ಕೆಎಂಸಿ ಮಂಗಳೂರು

— ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

14-sky

Subramanya: ಕುಕ್ಕೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

Hospital: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

13-thirthahalli

Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿ ಬಿಟ್ಟು ವ್ಯಕ್ತಿ ನದಿಗೆ; ಶಂಕೆ

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

9

Mangaluru: ಬೊಂದೇಲ್‌-ಕಾವೂರು ರಸ್ತೆಯಲ್ಲಿಲ್ಲ ಫುಟ್‌ಪಾತ್‌

5

Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ

4

Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್‌; ಪ್ರವಾಸಿಗರಿಗೆ ಹೊಸ ಆಕರ್ಷಣೆ

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

13(2)

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

12

Udupi: ವಿಸಿಲ್‌ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್‌ ನಿರ್ವಹಣೆ!

15-uv-fusion

Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ

11

Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!

Bangalore Premier League: ಡಿಸೆಂಬರ್‌ 12ರಿಂದ ಬಿಪಿಎಲ್‌ ಟೂರ್ನಿ

Bengaluru Premier League: ಡಿಸೆಂಬರ್‌ 12ರಿಂದ ಬಿಪಿಎಲ್‌ ಟೂರ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.