ಯಾವ ವಿಶೇಷ ಫಲ ಹೊಂದಬಹುದು ಗೊತ್ತಾ…ಇದು ಶಾಲಗ್ರಾಮದ ಮಹಿಮೆ!
Team Udayavani, Jan 8, 2019, 8:19 AM IST
ಸಾಮಾನ್ಯ ದೃಷ್ಟಿಗೆ ಕಪ್ಪು ಶಿಲೆಯಂತೆ ಕಾಣುವ, ನೇಪಾಳದ ಗಂಡಕೀ ನದಿಯಲ್ಲಿ ದೊರಕುವ, ಭಗವಂತನಾದ ನಾರಾಯಣನ ವಿಶೇಷ ಸನ್ನಿಧಾನವಿರುವ ಶಾಲಗ್ರಾಮವು ಬಹಳ ಪೂರ್ವ ಕಾಲದಿಂದಲೂ ಭರತ ದೇಶದಲ್ಲಿ ಭಗವದಾರಾಧನೆಯ ಒಂದು ಪ್ರತೀಕವಾಗಿದೆ.
ಈ ಶಾಲಗ್ರಾಮದಲ್ಲಿ ಲಕ್ಷ್ಮೀನಾರಾಯಣ, ವಾಸುದೇವ, ನರಸಿಂಹ, ವಾಮನ, ಗೋಪಾಲಕೃಷ್ಣ, ರತ್ನಗರ್ಭ ಮುಂತಾದ ಹಲವಾರು ಪ್ರಬೇಧಗಳಿವೆ. ಇವೆಲ್ಲವುಗಳನ್ನು ಆಯಾ ಶಾಲಗ್ರಾಮ ಶಿಲೆಯು ಹೊಂದಿರುವ ಪ್ರತ್ಯೇಕ ಲಕ್ಷಣದಿಂದ ಗುರುತಿಸಬಹುದಾಗಿದೆ. ಲಕ್ಷ್ಮೀನಾರಾಯಣಾದಿ ಶಾಲಗ್ರಾಮಗಳನ್ನು ಪೂಜಿಸುವುದರಿಂದ ಆಯಾ ಶಾಲಗ್ರಾಮಕ್ಕೆ ಸಂಬಂಧ ಪಟ್ಟಂತಹ ವಿಶೇಷ ಫಲಗಳನ್ನು ಹೊಂದಲು ಅವಕಾಶಗಳಿರುತ್ತವೆ. ಸಾಮಾನ್ಯವಾಗಿ ಶಾಲಗ್ರಾಮ ಶಿಲೆಗಳು ಕೃಷ್ಣವರ್ಣದ್ದಾಗಿದ್ದು ಅದಕ್ಕೆ ಆಸನ, ವದನ, ಚಕ್ರ ಮುಂತಾದ ಹಲವಾರು ಕುರುಹುಗಳಿಂದ ಕೂಡಿರುತ್ತದೆ ಹಾಗೂ ಸ್ಪರ್ಶಿಸಲು ತಂಪಾದ ಅನುಭವವನ್ನೂ ಉಂಟುಮಾಡುತ್ತದೆ.
ನಮ್ಮನ್ನು ಸೃಷ್ಟಿಮಾಡಿ ಎಲ್ಲಾ ವಿಧದಿಂದಲೂ ಸಲಹಿ ರಕ್ಷಿಸುತ್ತಿರುವ ಜಗನ್ನಿಯಾಮಕನಾದ ಭಗವಂತನನ್ನು ಪ್ರತಿದಿನವೂ ಆರಾಧಿಸಿ ಅವನ ಅನುಗ್ರಹವನ್ನು ಪಡೆಯುವುದು ಮನುಷ್ಯಜನ್ಮದ ಮುಖ್ಯ ಕರ್ತವ್ಯ. ಆದರೆ ಭಗವಂತನು ಅಪ್ರಬುದ್ಧರ ಸಾಮಾನ್ಯ ದೃಷ್ಟಿಗೆ ಅಗೋಚರನಾಗಿರುವುದರಿಂದ , ಋಷಿ-ಮುನಿಗಳು, ಪೃಥಿವೀ, ಆಪಃ (ಜಲ), ತೇಜಸ್ಸು (ಅಗ್ನಿ), ವಾಯು ,ಆಕಾಶ, ಆದಿತ್ಯ ,ಚಂದ್ರ, ಅಶ್ವತ್ಥಾದಿ ವೃಕ್ಷಗಳು, ಶಿಲಾ ಪ್ರತಿಮೆಗಳು, ಪಂಚಲೋಹದ ಪ್ರತಿಮೆಗಳು , ಸ್ವರ್ಣ-ರಜತಾದಿ ಪ್ರತಿಮೆಗಳು, ಮೃಣ್ಮಯ ಪ್ರತಿಮೆಗಳು, ಶಾಲಗ್ರಾಮ ಶಿಲೆಗಳು, ಹೀಗೆ ಹಲವಾರು ಪ್ರತೀಕಗಳಲ್ಲಿ ಭಗವಂತನನ್ನು ಉಪಾಸನೆ ಮಾಡಿ ಅವನ ಅನುಗ್ರಹವನ್ನು ಸಂಪಾದಿಸುವ ಮಾರ್ಗವನ್ನು ಕಂಡುಕೊಂಡಿದ್ದರು.
ಪ್ರತಿಮಾದಿ ಪ್ರತೀಕಗಳಲ್ಲಿ ಭಗವಂತನನ್ನು ಉಪಾಸನೆ ಮಾಡಲು ಹಲವಾರು ರೀತಿ-ರಿವಾಜುಗಳಿದ್ದು ದೇವಾಲಯದ ಗರ್ಭಗುಡಿಯಲ್ಲಿ ವಿಗ್ರಹವನ್ನು ಪ್ರತಿಷ್ಠೆಮಾಡುವ ಪೂರ್ವಭಾವಿಯಾಗಿ ಅಧಿವಾಸಾದಿ ಹಲವಾರು ಪ್ರಕ್ರಿಯೆಗಳನ್ನು ಪೂರೈಸಿ ವಿಗ್ರಹದ ಲಕ್ಷಣಕ್ಕೆ ಸರಿಯಾದ, ಧ್ಯಾನ ರೂಪಿಯಾದ ಭಗವಂತನನ್ನು ವಿಗ್ರಹದಲ್ಲಿ ಆವಾಹಿಸಿ, ನಿಗ್ರಹಾನುಗ್ರ ಶಕ್ತಿಯನ್ನು ಕೊಟ್ಟು ವಿಗ್ರಹವನ್ನು ಪ್ರತಿಷ್ಠಾಪಿಸಿ ನಂತರ ಆ ವಿಗ್ರಹದಲ್ಲಿ ದೇವರನ್ನು ಕಂಡು ಪೂಜಿಸುವುದು ಸಂಪ್ರದಾಯ . ಆದರೆ ಶಾಲಗ್ರಾಮ ಶಿಲೆಯಲ್ಲಿ ಪ್ರಾಕೃತಿಕವಾಗಿಯೇ ದೇವರ ಪೂರ್ಣ ಚೈತನ್ಯವಿರುವುದರಿಂದ ಪ್ರತಿಷ್ಠಾದಿ ಯಾವುದೇ ಕರ್ಮಗಳನ್ನು ನೆರವೇರಿಸದೆ ದೇವರನ್ನು ಪೂಜಿಸಬಹುದು.
ಶಾಲಗ್ರಾಮವನ್ನು ಮನೆಯಲ್ಲಿಟ್ಟು ನಿತ್ಯವೂ ಯಥಾವಿಧಿ ಪೂಜಿಸುವುದರಿಂದ, ಅದಕ್ಕೆ ನಮಸ್ಕರಿಸುವುದರಿಂದ ಪಾಪಗಳೆಲ್ಲವೂ ನಾಶವಾಗಿ ಸರ್ವಾಭೀಷ್ಟವು ಸಿದ್ಧಿಯಾಗುವುದು. ಶಾಲಗ್ರಾಮವನ್ನು ಪೂಜಿಸುವಾಗ ತುಳಸೀ ದಳವನ್ನು ಅಗತ್ಯವಾಗಿ ಉಪಯೋಗಿಸಬೇಕು. ಶಾಲಗ್ರಾಮಕ್ಕೆ ಅಭಿಷೇಕಮಾಡಿದ, ಮಂತ್ರದಿಂದ ಅಭಿಮಂತ್ರಿತವಾದ ತೀರ್ಥವನ್ನು ಪ್ರಾಶನ ಮಾಡುವುದರಿಂದ ದೇಹ ಶುದ್ದಿಯೂ, ಅಂತಃಕರಣ ಶುದ್ಧಿಯೂ ಉಂಟಾಗುವುದು. ಪಂಚಲೋಹಾದಿ ವಿಗ್ರಹಗಳನ್ನು ಆರಾಧನೆ ಮಾಡುವ ದೇವಸ್ಥಾನಗಳಲ್ಲಿಯೂ ಶಾಲಗ್ರಾಮವನ್ನಿಟ್ಟು ಪೂಜಿಸುತ್ತಾರೆ. ಶ್ರಾದ್ಧ, ಮಹಾಲಯಾದಿ ಪಿತೃ ಕಾರ್ಯವನ್ನು ಮಾಡುವ ಸಮಯದಲ್ಲಿಯೂ ಶಾಲಗ್ರಾಮ ನಿರ್ಮಾಲ್ಯ ಹಾಗೂ ತೀರ್ಥಗಳನ್ನು ವಿಶೇಷವಾಗಿ ಉಪಯೋಗಿಸುತ್ತಾರೆ.
ಶಿಲಾದಿ ವಿಗ್ರಹಗಳು ಅಕಸ್ಮಾತಾಗಿ ಭಿನ್ನವಾದರೆ ಅಥವಾ ವಿಗ್ರಹದ ಮರ್ಮಸ್ಥಾನಕ್ಕೆ ಹೊಡೆತಬಿದ್ದು ತುಂಡಾದರೆ, ಆ ವಿಗ್ರಹವು ಆರಾಧನೆಗೆ ಯೋಗ್ಯವಲ್ಲ. ಅಂತಹ ವಿಗ್ರಹದ ಚೈತನ್ಯವನ್ನು ಸಂಕೋಚಮಾಡಿ, ಯೋಗ್ಯವಾದ ನೂತನ ವಿಗ್ರಹಕ್ಕೆ ಆ ಚೈತನ್ಯವನ್ನು ಕೊಟ್ಟು ಭಿನ್ನವಾದ ವಿಗ್ರಹವನ್ನು ಯಥಾವಿಧಿ ವಿಸರ್ಜಿಸಬೇಕು. ಆದರೆ ಶಾಲಗ್ರಾಮ ಶಿಲೆಯು ಬಿರುಕುಬಿಟ್ಟರೂ, ಬಿನ್ನವಾದರೂ, ತುಂಡಾದರೂ, ಅದರಲ್ಲಿ ಪೂರ್ಣ ಚೈತನ್ಯವಿರುವುದರಿಂದ ಅದನ್ನು ಯಥಾಪ್ರಕಾರ ಪೂಜಿಸಿಕೊಂಡು ಬರಬೇಕು. ಶಾಲಗ್ರಾಮವು ಭಿನ್ನವಾಗಿ ಎರಡು ಭಾಗವಾದರೆ ಆ ಎರಡೂ ತುಂಡುಗಳನ್ನು ಸುದರ್ಶನ ಶಾಲಗ್ರಾಮವೆಂದು ಪೂಜಿಸುತ್ತಾರೆ.
ಇಂತಹ ವಿಶಿಷ್ಟ ಶಕ್ತಿಯುಳ್ಳ, ಪ್ರಾಕೃತಿಕವಾಗಿಯೇ ನಾರಾಯಣನ ಪೂರ್ಣ ಚೈತನ್ಯವಿರುವ ಶಾಲಗ್ರಾಮದಲ್ಲಿ ಭಗವಂತನ ಯಾವುದೇ ರೂಪವನ್ನು ಉಪಾಸನೆ ಮಾಡಿದರೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳೂ, ಇಹ-ಪರ ಸುಖಗಳೂ ಸಿದ್ಧಿಸುವುದು.
ಪಲ್ಲವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.