ಉದ್ಯಾನ ಅಭಿವೃದ್ಧಿಗೆ ಅಧಿಕಾರಿಗಳ ಅಡ್ಡಿ


Team Udayavani, Jan 8, 2019, 10:31 AM IST

has.jpg

ಸಕಲೇಶಪುರ: ಕಳೆದ ಎಂಟು ವರ್ಷಗಳ ಹಿಂದೆ ದಾನಿಗಳ ನೆರವಿನಿಂದ ಚಂಪಕನಗರದ ಫಿಲ್ಟರ್‌ ಹೌಸ್‌ ಆವರಣದಲ್ಲಿ ನಿರ್ಮಿಸಲಾಗಿದ್ದ ಪಾರ್ಕ್‌ ಸಂಪೂರ್ಣ ಹಾಳಾಗಿದೆ. ಲಯನ್ಸ್‌ ಸಂಸ್ಥೆಯವರು ತಮ್ಮ ಸ್ವಂತ ಹಣದಿಂದ ಉದ್ಯಾನವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದರೂ ಕಾರಣಗಳ ನೆಪವೊಡ್ಡಿ ಪಾರ್ಕ್‌ನ್ನು ಲಯನ್ಸ್‌ ಸಂಸ್ಥೆಗೆ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಸರದ ಸೌಂದರ್ಯ ಹೆಚ್ಚಿಸಲು, ಮಕ್ಕಳು ಆಡಿ ನಲಿಯಲು, ವೃದ್ಧರು, ಹೆಂಗಸರು ಹಾಗೂ ಸಾರ್ವಜನಿಕರು ವಾಯು ವಿಹಾರ ನಡೆಸಲು ಬಡಾವಣೆಗೆ ಒಂದಾದರೂ ಪಾರ್ಕ್‌ ಇರಬೇಕು ಎಂಬುದು ಬಹುತೇಕ ಎಲ್ಲರ ಬಯಕೆಯಾಗಿದೆ. ಇಡೀ ಪಟ್ಟಣದಲ್ಲಿ ಇಂದಿಗೂ ಒಂದೇ ಒಂದು ಉದ್ಯಾನವನ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.

2005ರಲ್ಲಿ ಪಾರ್ಕ್‌ ನಿರ್ಮಾಣ: 2005ನೇ ಇಸವಿಯಲ್ಲಿ ಅಂದಿನ ಉಪವಿಭಾಗಾಧಿಕಾರಿ ಏಕ್‌ರೂಪ್‌ ಕೌರ್‌ ಹಾಗೂ ಪುರಸಭೆಯ ಅಧ್ಯಕ್ಷೆಯಾಗಿದ್ದ ಲಕ್ಷ್ಮಮ್ಮ ಅವರು ದಿಟ್ಟ ನಿರ್ಧಾರವೊಂದನ್ನು ಕೈಗೊಂಡು, ಚಂಪಕನಗರ ಬಡಾವಣೆಯ ನೀರಿನ ಟ್ಯಾಂಕ್‌ (ಫಿಲ್ಟರ್‌ ಹೌಸ್‌) ಆವರಣದಲ್ಲಿ ಸುಂದರ ಪಾರ್ಕ್‌ ನಿರ್ಮಿಸುವ ನಿರ್ಧಾರ ಕೈಗೊಂಡು ಇದಕ್ಕೆ ದಾನಿಗಳಿಂದ ಹಣ ಸಂಗ್ರಹಿಸಿ ಉದ್ಯಾನವನ ನಿರ್ಮಿಸಲಾಯಿತು.

ಟಾಟಾ ಕಾಫಿ ಲಿಮಿಟೆಡ್‌ ಸಂಸ್ಥೆಯಿಂದ ಸುಮಾರು ಒಂದು ಲಕ್ಷ ರೂ.ಗೂ ಹೆಚ್ಚಿನ ನೆರವು ಲಭ್ಯವಾಗಿತ್ತು. ಇದಕ್ಕೆ ಕೆಲವು ಸ್ಥಳೀಯ ಖಾಸಗಿ ವಕ್ತಿಗಳು ಕೂಡ ಕೈ ಜೋಡಿಸಿ ಹಣ ನೀಡಿದ್ದರು. ಇದರಿಂದಾಗಿ ಮಕ್ಕಳು ಆಟವಾಡಲು ಸಲಕರಣೆಗಳು, ವೃದ್ಧರು ಹೆಂಗಸರು ವಾಯುವಿಹಾರ ನಡೆಸಲು ವಿಶ್ರಾಂತಿ ತೆಗೆದುಕೊಳ್ಳಲು ಉದ್ಯಾನವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಪುರಸಭೆ ನಿರ್ಲಕ್ಷ್ಯ: ಪುರಸಭೆಯ ಆಡಳಿತದ ನಿರ್ಲಕ್ಷ್ಯದಿಂದ ಇಂದು ಅಲ್ಲಿ ಎಲ್ಲವೂ ಮಾಯುವಾಗಿವೆ. ಅಳವಡಿಸಲಾಗಿದ್ದ ವಿದ್ಯುತ್‌ ದೀಪಗಳು ಒಡೆ ದುಹೋಗಿದ್ದು, ಕಬ್ಬಿಣದ ಪೈಪುಗಳು ಮಾತ್ರ ಉಳಿದಿವೆ. ಕುಳಿತುಕೊಳ್ಳಲು ನಿರ್ಮಿಸಲಾಗಿದ್ದ ಗುಡಿ
ಸಲುಗಳು ಮಾಯವಾಗಿ, ಕಟ್ಟಡಗಳ ಅವಶೇಷಗಳ ಜೊತೆಗೆ ಇತರೆ ಒಂದಷ್ಟು ಪಳೆಯುಳಿಕೆಗಳು ಮಾತ್ರ ಕಾಣಸಿಗುತ್ತವೆ.

ಜನರಿಗೆ ಹೇಗಾದರೂ ಮಾಡಿ ಉದ್ಯಾನವನದ ಕೊರತೆ ನೀಗಿಸುವ ಪಣ ತೊಟ್ಟು, ಸುಸಜ್ಜಿತ ಉದ್ಯಾನವನದ ಕಲ್ಪನೆ ಹೊಂದಿದ್ದ ಉಪವಿಭಾಗಾಧಿಕಾರಿಯಾಗಿದ್ದ ಏಕ್‌ರೂಪ್‌ ಕೌರ್‌ ಇದಾದ ಒಂದೆರಡು ವರ್ಷದಲ್ಲಿಯೆ ವರ್ಗಾವಣೆಗೊಂಡರು. ಪುರಸಭೆ ಅಧ್ಯಕ್ಷ ಸ್ಥಾನದಿಂದ ಲಕ್ಷ್ಮಮ್ಮ ಅಧಿಕಾರದಿಂದ ಕೆಳಗಿಳಿದ ನಂತರ ಕೆಲವೇ ವರ್ಷಗಳಲ್ಲಿ ದಿವಂಗತರಾದರು.

ನಂತರದ ದಿನಗಳಲ್ಲಿ ನಿರ್ವಹಣೆ ಜವಾಬ್ದಾರಿ ಹೊತ್ತ ಪುರಸಭೆ ಇತ್ತ ತಿರುಗಿ ನೋಡಲೆ ಇಲ್ಲ. ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲವೇನೋ ಎಂಬಂತೆ ಅಧಿಕಾರ ಹಿಡಿದ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರಿದರು. ಇದರ ಫ‌ಲವಾಗಿ ಉದ್ಯಾನವನ ಸಂಪೂರ್ಣ ಮಾಯವಾಗಿದೆ. 

ಬಡಾವಣೆಗೊಂದು ಉದ್ಯಾನ ನಿರ್ಮಿಸಿ: ಬಡಾವಣೆಗೊಂದು ಉದ್ಯಾನವನ ನಿರ್ಮಿಸುವ ಜವಾಬ್ದಾರಿ ಹೊರಬೇಕಿರುವ ಪುರಸಭೆ, ಅಂದೂ ಕೂಡ ಇದಕ್ಕಾಗಿ ಬಿಡಿಗಾಸು ಖರ್ಚು ಮಾಡಿರಲಿಲ್ಲ. ಬೇಕಾದಷ್ಟು ನೀರಿನ ಸೌಕರ್ಯ, ಉತ್ತಮ ವಾತಾವರಣ, ಸುಂದರ ಪರಿಸರ ಆಯ್ಕೆ ಮಾಡಿಕೊಂಡು, ಪಟ್ಟಣದ ಉದ್ಯಾನ ವನದ ಕೊರತೆ ನೀಗಿಸುವ ನಿಟ್ಟಿನಲ್ಲಿ ನಿರ್ಮಾಣಗೊಂಡ ಈ ಪಾರ್ಕನ್ನು ನಿರ್ವಹಣೆ ಮಾಡುವ ಕನಿಷ್ಠ ಹೊಣೆಯನ್ನು ಯಾರಾದರೂ ಹೊತ್ತಿದ್ದರೆ, ಜನರ ವಾಯುವಿಹಾರ, ಶಾಂತಿ ಹಾಗೂ ನೆಮ್ಮದಿಯ ತಾಣ ವಾಗುತ್ತಿದ್ದುದರಲ್ಲಿ ಯಾವುದೇ ಸಂಶಯವೂ ಇಲ್ಲ.

ಪುಂಡು ಪೋಕರಿಗಳ ತಾಣ: ಸಾರ್ವಜನಿಕರ ಹಣದ ನೆರನೊಂದಿಗೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡ ಇದರ, ಇಂದಿನ ಸ್ಥಿತಿ ಕಂಡರೆ ಎಂತಹವರಿಗೂ ಅಯ್ಯೋ ಎನಿಸುತ್ತದೆ. ಇದೇ ರೀತಿ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಸಹ ಪಾರ್ಕ್‌ಗಾಗಿ ಮೀಸಲಿಟ್ಟಿ ರುವ ಜಾಗ ಪುಂಡಪೋಕರಿಗಳ ತಾಣವಾಗಿದೆ. ದೊಡ್ಡ ಕೆರೆಯನ್ನು ಪುರಸಭೆಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಮಲ್ಲಿಕಾರ್ಜುನ ನಗರದಲ್ಲೂ ಸಹ ಪಾರ್ಕ್‌ಗಾಗಿ ಮೀಸಲಿಟ್ಟಿರುವ ಜಾಗವೊಂದು ಕಬಳಿ ಕೆಯಾಗಿರುವ ಆರೋಪಗಳಿದೆ. ಇದರಿಂದ ಮಕ್ಕಳಿಗೆ ಪಟ್ಟಣದಲ್ಲಿ ಉದ್ಯಾನವನವೇ ಇಲ್ಲದಂತಾಗಿದೆ.

ಲಯನ್ಸ್‌ ಸಂಸ್ಥೆ ಆಸಕ್ತಿ: ಲಯನ್ಸ್‌ ಸಂಸ್ಥೆಯವರು ಸುಮಾರು 10ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್‌ನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದು ಆದರೆ ಪುರಸಭೆಯವರು ಇವರಿಗೆ ನೀಡಲು ಪುರಸಭೆಯಲ್ಲಿ ಸದಸ್ಯರು ಅಧಿಕಾರ ಸ್ವೀಕರಿಸಿ ನಂತರ ಸಭೆಯಲ್ಲಿ ತೀರ್ಮಾನ ವಾಗಬೇಕೆಂದು ಹೇಳುತ್ತಿದ್ದಾರೆ. ಇದರಿಂದ ದೇವರು ಕೊಟ್ಟರು ಪೂಜಾರಿ ಕೊಡುತ್ತಿಲ್ಲ ಎಂಬಂತಾಗಿದೆ. 

ಶಾಸಕರು ಸಹ ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ.  ಜೀವನದಿ ಹೇಮಾವತಿ ದಡದಲ್ಲಿ ಬೆಳೆದಿರುವ ಈ ಪಟ್ಟಣದ ಸುತ್ತಲೂ, ಹಸಿರು ವನಸಿರಿ, ಸುಂದರ ಬೆಟ್ಟ ಗುಡ್ಡ ಇಂತಹ ಪ್ರಕೃತಿ ಸೌಂದರ್ಯಕ್ಕೇನೂ ಕೊರತೆ ಇಲ್ಲ, ಇವೆಲ್ಲವನ್ನೂ ನೋಡಿ ಕಣ್ತುಂಬಿಸಿಕೊಳ್ಳಬಹುದು. ಆದರೆ ಪಟ್ಟಣದ ಜನರ ನೆಮ್ಮದಿಗೆ ಒಂದೇ ಒಂದು ಉದ್ಯಾನವನ ಇಲ್ಲದಿರುವುದು ದುರಂತವಾಗಿದೆ.  

ಪುರಸಭೆ ಹಾಗೂ ಖಾಸಗಿ ಸಹಭಾಗಿತ್ವ ದಲ್ಲಿ ಶೇ.50ರ ಹಣ ವಿನಿಯೋಗ ಯೋಜನೆಯಲ್ಲಿ ಪಟ್ಟಣದ ಫಿಲ್ಟರ್‌ ಹೌಸ್‌
ಜಾಗದಲ್ಲಿರುವ ಉದ್ಯಾನವನ್ನು ಅಭಿವೃದ್ಧಿ ಮಾಡಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡೀಸಿ ಅನುಮೋದನೆ ನಂತರ ಉದ್ಯಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. 
ವಿಲ್ಸನ್‌, ಮುಖ್ಯಾಧಿಕಾರಿ ಸಕಲೇಶಪುರ ಪುರಸಭೆ

ಪಟ್ಟಣದಲ್ಲಿ ಮಕ್ಕಳಿಗಾಗಿ ಯಾವುದೇ ಉದ್ಯಾನವನವಿಲ್ಲ. ಈ ನಿಟ್ಟಿನಲ್ಲಿ ಈ ಹಿಂದೆ ಉದ್ಯಾನವನವಿದ್ದ ಫಿಲ್ಟರ್‌ ಹೌಸ್‌
ಜಾಗದಲ್ಲಿ ಲಯನ್ಸ್‌ ಕ್ಲಬ್‌ ವತಿಯಿಂದ ಉದ್ಯಾನವನ್ನು ಪುನರ್‌ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಪುರಸಭೆಯವರು ಪಾರ್ಕ್‌ ಅಭಿವೃದ್ಧಿ ಪಡಿಸಲು ಜಾಗವನ್ನು ಹಸ್ತಾಂತರ ಮಾಡುತ್ತಿಲ್ಲ.
ಸಂಜೀತ್‌ ಶೆಟ್ಟಿ, ಲಯನ್ಸ್‌ ಕ್ಲಬ್‌ ವಲಯ ಅಧ್ಯಕ್ಷ 

ಸುಧೀರ್‌ ಎಸ್‌.ಎಲ್‌.

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.