ತೆಲುಗನ್ನಡಿಗರತ್ತ ಕಣ್ತೆರೆದು ನೋಡಿ


Team Udayavani, Jan 9, 2019, 2:02 AM IST

x-18.jpg

ಆಂಧ್ರದ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು, ಶಿಕ್ಷಕರ ನೇಮಕ, ಬಡ್ತಿ, ತರಬೇತಿ, ಪಠ್ಯಪುಸ್ತಕಗಳನ್ನು ಸರ್ಕಾರವು ಸಕಾಲದಲ್ಲಿ ಒದಗಿಸುತ್ತದೆ. ಪ್ರಥಮ ಭಾಷೆ ಕನ್ನಡ ಪಠ್ಯವನ್ನು ಮಾತ್ರ ಕರ್ನಾಟಕ ಸರ್ಕಾರ ಶಾಲೆ ಪ್ರಾರಂಭವಾಗುವ ಸಮಯಕ್ಕೆ ಸರಿಯಾಗಿ ಪೂರೈಕೆಯನ್ನು ಮಾಡಬೇಕು. ಅನ್ಯಭಾಷೆ ಎಂಬ ತಾರತಮ್ಯವಿಲ್ಲದಂತೆ ತೆಲುಗು, ಕನ್ನಡವನ್ನು ಸರಿಸಮಾನವಾಗಿ ನೋಡಿದಲ್ಲಿ ಭಾಷಾ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಎಂದಿನಂತೆ, ಸಮ್ಮೇಳನದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ವಿಷಯಗಳು ಚರ್ಚೆಯ ವಸ್ತುವಾದವು. ಕನ್ನಡ ಶಾಲೆಗಳ ವಿಚಾರ ಇವುಗಳಲ್ಲಿ ಪ್ರಮುಖವಾಗಿತ್ತು. ಈ ಕಾರಣಕ್ಕಾಗಿಯೇ ಈ ಹೊತ್ತಿನಲ್ಲಿ ಹೊರನಾಡು, ಗಡಿನಾಡಿನಲ್ಲಿರುವ ಶಾಲೆಗಳ ಸಮಸ್ಯೆಯತ್ತ ಗಮನಹರಿಸುವುದು ಸಂದಭೋìಚಿತ ವೆನಿಸುತ್ತದೆ… 

1956ರ ನವೆಂಬರ್‌ನಲ್ಲಿ ಭಾಷಾವಾರು ಪ್ರಾಂತಗಳು ರಚನೆಯಾಗಿ ಅನೇಕ ವರ್ಷಗಳ ನಂತರವೂ ಕರ್ನಾಟಕ ಆಂಧ್ರದ ಎರಡೂ ಗಡಿಗಳಲ್ಲಿ ತೆಲುಗನ್ನಡಿಗರು ಸಹಜವಾಗಿಯೇ ಇದ್ದಾರೆ. ಆಂಧ್ರ ಗಡಿಯಲ್ಲಿ ಅನೇಕರು ಕನ್ನಡ ಮೂಲದವರೇ ಆಗಿದ್ದು ಕನ್ನಡವನ್ನು ಅಪ್ಪಟವಾಗಿ ಪ್ರೀತಿಸುವವರಾಗಿದ್ದಾರೆ. ಇವರಲ್ಲಿ ಕನ್ನಡ ಭಾಷೆ ಮಾತ್ರವಲ್ಲ ಆಚಾರ-ವಿಚಾರ, ಸಂಸ್ಕ ೃತಿಯೂ ನೆಲೆನಿಂತಿದೆ. ಇವರು ಅತ್ಯಂತ ಆಪ್ತತೆಯಿಂದ ತಮ್ಮ ಮಕ್ಕಳನ್ನು ಈ ಭಾಗದ ಕನ್ನಡ ಶಾಲೆಗಳಿಗೆ ಸೇರಿಸುತ್ತಾರೆ.

ಕರ್ನಾಟಕದ ಗಡಿ ಭಾಗಗಳಲ್ಲಿಯೂ ಸಹ ಅನೇಕ ತೆಲುಗನ್ನಡಿಗರಿದ್ದಾರೆ. ಇವರು ಮಾತೃ ಭಾಷೆ ತೆಲುಗು, ಭೌಗೋಳಿಕವಾಗಿ ಕರ್ನಾಟಕದಲ್ಲಿದ್ದರೂ ತೆಲುಗನ್ನು ಪ್ರೀತಿಸುವವರಾಗಿದ್ದಾರೆ. ವಲಸೆ, ವ್ಯಾಪಾರ, ವ್ಯವಸಾಯ, ವೈವಾಹಿಕ ಸಂಬಂಧ ಮುಂತಾದ ಕಾರಣಗಳಿಂದ ಕರ್ನಾಟಕ ನೆಲದಲ್ಲಿ ನೆಲೆಯೂರಿರುವ ಇವರು ತೆಲುಗನ್ನು ಅಭ್ಯಾಸಮಾಡುವವರಾಗಿದ್ದಾರೆ.

ಎರಡು ರಾಜ್ಯಗಳಲ್ಲಿ ನೆಲಸಿರುವ ತೆಲುಗನ್ನಡಿಗರಿಗೆ ಅವರದೇ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿಸುವುದು ಆಯಾ ರಾಜ್ಯ ಸರ್ಕಾರಗಳ ಹೊಣೆಯಾಗಿದೆ. ಸಂವಿಧಾನಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಬೇಕಾದ ಹೊಣೆ ಈ ಎರಡು ಸರ್ಕಾರಗಳ ಮೇಲಿದೆ. ಇಲ್ಲಿನ ತೆಲುಗನ್ನಡಿಗರಿಗೆ ಆಯಾ ಸರ್ಕಾರಗಳು ನೈತಿಕ ಬೆಂಬಲ ನೀಡುವುದರೊಂದಿಗೆ ಕಾನೂನಾತ್ಮಕವಾಗಿ ತಮಗೆ ಸಾಧ್ಯವಿರುವ ವ್ಯಾಪ್ತಿಯಲ್ಲಿ ಈ ಶಾಲೆಗಳ ಉಳಿವಿಗೆ ಆಯಾ ಸರ್ಕಾರಗಳು ಕ್ರಮಕೈಗೊಳ್ಳಬೇಕು.

ಆಂಧ್ರಪ್ರದೇಶದ ಇಬ್ಭಾಗಕ್ಕಿಂತ ಮುಂಚಿತವಾಗಿಯೇ ಗಡಿ ಜಿಲ್ಲೆಗಳಾದ ಮೆಹಬೂಬ್‌ನಗರ್‌, ಮೆದಕ್‌, ಹೈದ್ರಾಬಾದ್‌, ಕರ್ನೂಲ್‌, ಅನಂತಪುರಂ ಜಿಲ್ಲೆಗಳಲ್ಲಿ ಸುಮಾರು 85ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳನ್ನು ಹೊಂದಿವೆ. ಇಂದಿಗೂ ಈ ಶಾಲೆಗಳಲ್ಲಿ ಸುಮಾರು 17,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡದಲ್ಲಿ ಅಭ್ಯಸಿಸುತ್ತಿರುವುದು ಜೀವಂತ ಸಾಕ್ಷಿ, ಆಂಧ್ರ ವಿಭಜನೆ 02 ಜೂನ್‌ 2014ರ ನಂತರ ಆಂಧ್ರದ ಗಡಿ ಜಿಲ್ಲೆಗಳಾದ ಕರ್ನೂಲ್‌, ಅನಂತಪುರಂ ಜಿಲ್ಲೆಗಳಲ್ಲಿ ಸುಮಾರು 65ಕ್ಕಿಂತಲೂ ಹೆಚ್ಚು ಕನ್ನಡ ಶಾಲೆಗಳಿವೆ. ಇನ್ನೂ ಹಲವಾರು ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಇಳಿಕೆಯಿಂದಾಗಿ ಮುಚ್ಚಲ್ಪಟ್ಟಿವೆ. ಇನ್ನೂ ಕೆಲವು ಅವನತಿ ಅಂಚಿನಲ್ಲಿವೆ. 

ಎರಡು ರಾಜ್ಯಗಳಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ತೆಲುಗನ್ನಡಿಗರಿಗೆ ದ್ವಿಭಾಷೆಗಳಲ್ಲಿ ಬೋಧನೆ ದೊರಕುವಂತಾಗಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎರಡು ಭಾಷೆಗಳನ್ನು ಬಳಸಿ ಬೋಧಿಸಬೇಕು. ಈ ಎರಡು ರಾಜ್ಯಗಳಲ್ಲಿ ಈ ಎರಡು ಭಾಷೆಗಳು ಜೀವಂತವಾಗಿ ಉಳಿಯ ಬೇಕಾದಲ್ಲಿ ಎರಡು ಸರ್ಕಾರಗಳು ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು, ಅವುಗಳನ್ನು ಜಾರಿಗೊಳಿಸಬೇಕು.

ಪ್ರಥಮವಾಗಿ ಆಂಧ್ರದ ಗಡಿಭಾಗದ ಕನ್ನಡ ಪ್ರಾಂತಗಳನ್ನು (ಆದೋನಿ, ರಾಯದುರ್ಗ, ಮಡಕಶಿರ) ಗೆಜಟ್‌ನಲ್ಲಿ ಹೊರರಾಜ್ಯದ ಕನ್ನಡಿಗರೆಂದು ಸೇರಿಸಿ, ಅವರಿಗೆ ವಿಶೇಷ ಸವಲತ್ತುಗಳನ್ನು ಕರ್ನಾಟಕ ಸರ್ಕಾರವು ಒದಗಿಸಬೇಕು. ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿ ಸೌಲಭ್ಯಗಳನ್ನು ಗಡಿ ಭಾಗದ ಮಕ್ಕಳಿಗೆ ಕಲ್ಪಿಸಿ ಅವರನ್ನು ಕರ್ನಾಟಕ ವಿದ್ಯಾರ್ಥಿಗಳೆಂಬಂತೆ ಪರಿಗಣಿಸಬೇಕು. ಉದಾಹರಣೆಗೆ ಸಮವಸ್ತ್ರ ವಿತರಣೆ, ವಿದ್ಯಾರ್ಥಿವೇತನ, ಬೈಸಿಕಲ್‌, ಷೂ, ಬ್ಯಾಗ್‌, ಬಿಸಿಯೂಟ, ಉಚಿತ ಬಸ್‌ಪಾಸ್‌, ಪ್ರವಾಸ ಇನ್ನೂ ಮುಂತಾದ ಸೌಲಭ್ಯಗಳು.

ಪಠ್ಯಪುಸ್ತಕಗಳ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರ ಸರ್ಕಾರವು ಪ್ರಥಮಭಾಷೆ ಕನ್ನಡ ಪಠ್ಯಪುಸ್ತಕವನ್ನು ಹೊರತುಪಡಿಸಿ ಉಳಿದೆಲ್ಲಾ ಪುಸ್ತಕ (ಗಣಿತ, ಸಮಾಜ, ವಿಜ್ಞಾನ)ಗಳನ್ನು ಕನ್ನಡದಲ್ಲೇ ಮುದ್ರಿಸಿ ಸಕಾಲಕ್ಕೆ ಪೂರೈಸುತ್ತದೆ. ಕನ್ನಡ ಪ್ರಥಮಭಾಷೆ ಪಠ್ಯಪುಸ್ತಕವನ್ನು ಮಾತ್ರ ಕರ್ನಾಟಕ ಸರ್ಕಾರ ಸರಿಯಾದ ಸಮಯಕ್ಕೆ ಪೂರೈಸಬೇಕು.

ಆಂಧ್ರದ ಕನ್ನಡ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯಲು ನೀಡಿರುವ ಮೀಸಲಾತಿ ಶೇಕಡ 5% ಆದೇಶ ಕ್ರ.ಸಂ.ವಾ.ಪು. 73ಕೆ ಒಎಲ್‌2011 (ಭಾಗ-1) ಬೆಂಗಳೂರು ದಿನಾಂಕ 13-07-2011ರಂತೆ ಸಮರ್ಪಕವಾಗಿ ಎಲ್ಲಾ ಸರ್ಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸುವಂತೆ ಕ್ರಮಕೈಗೊಳ್ಳಬೇಕು. ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರುವಂತೆ ಕರ್ನಾಟಕ ಸರ್ಕಾರವು ಕ್ರಮಕೈಗೊಳ್ಳಬೇಕು.

ಆಂಧ್ರದ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು, ಶಿಕ್ಷಕರ ನೇಮಕ, ಬಡ್ತಿ, ತರಬೇತಿ, ಪಠ್ಯಪುಸ್ತಕಗಳನ್ನು ಸರ್ಕಾರವು ಸಕಾಲದಲ್ಲಿ ಒದಗಿಸುತ್ತದೆ. ಪ್ರಥಮ ಭಾಷೆ ಕನ್ನಡ ಪಠ್ಯವನ್ನು ಮಾತ್ರ ಕರ್ನಾಟಕ ಸರ್ಕಾರ ಶಾಲೆ ಪ್ರಾರಂಭವಾಗುವ ಸಮಯಕ್ಕೆ ಸರಿಯಾಗಿ ಪೂರೈಕೆಯನ್ನು ಮಾಡಬೇಕು. ಅನ್ಯಭಾಷೆ ಎಂಬ ತಾರತಮ್ಯವಿಲ್ಲದಂತೆ ತೆಲುಗು, ಕನ್ನಡವನ್ನು ಸರಿಸಮಾನವಾಗಿ ನೋಡಿದಲ್ಲಿ ಭಾಷಾ ಬೆಳವಣಿಗೆಗೆ ಸಹಾಯಕವಾಗುತ್ತದೆ. ಆಂಧ್ರದ ಗಡಿಯಲ್ಲಿ ಓದಿದ ಮಕ್ಕಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಸಮಾವಕಾಶ ಒದಗಿಸಿದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮಧ್ಯದಲ್ಲಿಯೇ ಮಕ್ಕಳು ಶಾಲೆಯನ್ನು ತೊರೆದು ಬಾಲ ಕಾರ್ಮಿಕರಾಗುತ್ತಾರೆ.

ಆಂಧ್ರದ ಕರ್ನೂಲು ಮತ್ತು ಅನಂತಪುರಂ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕರ್ನಾಟಕದ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಈ ಮಕ್ಕಳ ಉನ್ನತ ವ್ಯಾಸಂಗಕ್ಕೆ ಶಾಲಾ ಕಾಲೇಜುಗಳಲ್ಲಿ ಅವಕಾಶ ದೊರಕಿಸಿಕೊಡಬೇಕು. ಗ್ರಾಮೀಣ ಪ್ರಾಂತಗಳಿಂದ ಈ ನಗರಗಳಿಗೆ ವಿದ್ಯಾಭ್ಯಾಸಕ್ಕೆ ಹೋಗಿಬರಲು ಸಾರಿಗೆ ವ್ಯವಸ್ಥೆ (ಬಸ್‌ ಮತ್ತು ಉಚಿತ ಬಸ್‌ಪಾಸ್‌) ಮಾಡಬೇಕು. ವಸತಿ ಸೌಲಭ್ಯ, ವಿದ್ಯಾರ್ಥಿವೇತನ ಮುಂತಾದವುಗಳನ್ನು ಕರ್ನಾಟಕ ಸರ್ಕಾರವು ಹೊರರಾಜ್ಯದ ಕನ್ನಡ ಮಕ್ಕಳಿಗೆ ಕಲ್ಪಿಸಿಕೊಡಬೇಕು. 

ಕರ್ನಾಟಕದಲ್ಲಿ ಅಭ್ಯಸಿಸುತ್ತಿರುವ ತೆಲುಗು ವಿದ್ಯಾರ್ಥಿಗಳಿಗೆ ಆಂಧ್ರ ಮತ್ತು ಕರ್ನಾಟಕ ಸರ್ಕಾರಗಳೆರಡು ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಅನೇಕ ತೆಲುಗು ಶಾಲೆಗಳಿವೆ, ಅವುಗಳಿಗೆ ಸಮರ್ಪಕವಾದ ಪಠ್ಯಪೂರೈಕೆ ಸೇರಿದಂತೆ ಉಳಿದೆಲ್ಲಾ ಅನುಕೂಲತೆಗಳನ್ನು ದೊರಕಿಸಿಕೊಡಬೇಕು. ಎಲ್ಲಾ ಅನುಕೂಲತೆಗಳು ಈ ಶಾಲೆಗಳಿಗೆ ಸಿಗುವಂತಾದಲ್ಲಿ ತೆಲುಗು ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಎರಡೂ ರಾಜ್ಯಗಳಲ್ಲಿ ಎರಡು ಭಾಷೆಗಳ ಮಕ್ಕಳಿಗೆ ವ್ಯವಸ್ಥಿತವಾದ ನೆರವು ಕಲ್ಪಿಸಿದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲಾರದು. ಅಲ್ಲಿ ಬೋಧಿಸುವ ಶಿಕ್ಷಕರಿಗೂ ತರಬೇತಿಗಳನ್ನು, ವರ್ಗಾವಣೆ, ಬಡ್ತಿ ಮುಂತಾದ ಅನುಕೂಲತೆಗಳನ್ನು ಕಲ್ಪಿಸಿಕೊಡಬೇಕು. ಶಿಕ್ಷಕರಿಗೆ ಗೌರವ ದೊಂದಿಗೆ ಪ್ರೇರೇಪಿಸಿದಲ್ಲಿ ಇಲ್ಲಿನ ಶಾಲೆಗಳು ಸಜೀವವಾಗಿ ಉಳಿಯುತ್ತವೆ.

(ಲೇಖಕರು ಅನಂತಪುರಂ ಜಿಲ್ಲೆ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷರು)

ಎಂ. ಗಿರಿಜಾಪತಿ, ಶಿಕ್ಷಕರು, ಅನಂತಪುರಂ

ಟಾಪ್ ನ್ಯೂಸ್

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ

Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.