ರಾಮಕೃಷ್ಣ ಡಬಲ್‌ ಸೆಂಚುರಿ

Team Udayavani, Jan 9, 2019, 9:02 AM IST

ramakrishna.jpg

ಹಿರಿಯ ನಟ ರಾಮಕೃಷ್ಣ ಇದೀಗ ಖುಷಿಯ ಮೂಡ್‌ನ‌ಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರು, “ಸಿನಿಮಾರಂಗದ ದಿಗ್ಗಜರೆಲ್ಲಾ ಆರಂಭದ ದಿನಗಳಲ್ಲಿ ನನ್ನ ಬೆನ್ನುತಟ್ಟಿದ್ದರು. ಅಷ್ಟೇ ಅಲ್ಲ, ಚೆನ್ನಾಗಿ ಕೆಲಸ ಮಾಡು ಎಂದು ಆಶೀರ್ವದಿಸಿದ್ದರು. ಆದರೆ, ನಾನು ಅವರ ನಂಬಿಕೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿದ್ದೇನೆ, ಇಲ್ಲಿಯವರೆಗೂ ನಾನೇನೂ ಮಾಡಿಯೇ ಇಲ್ಲವಲ್ಲಾ ಎಂಬ ಫೀಲ್‌’ ಇದೆ ಎಂದು ಹೇಳಿಕೊಂಡಿದ್ದರು.

ಈಗೇಕೆ ಅವರ ಮಾತಿನ ಪ್ರಸ್ತಾಪ ಎಂಬ ಪ್ರಶ್ನೆ ಎದುರಾಗಬಹುದು. ವಿಷಯ ಇದೆ. ಅವರೀಗ 200 ಚಿತ್ರಗಳನ್ನು ಪೂರ್ಣಗೊಳಿಸಿದ್ದಾರೆ. ಹೌದು, ರಾಮಕೃಷ್ಣ ಅವರು ಅಲ್ಲಿಂದ ಇಲ್ಲಿಯವರೆಗೆ ಮಾಡಿರುವ ಬಹುತೇಕ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳೇ ಸಿಕ್ಕಿವೆ. ಸಿಕ್ಕ ಪಾತ್ರವನ್ನು ಅಷ್ಟೇ ಶ್ರದ್ಧೆಯಿಂದ ನಿರ್ವಹಿಸುವ ಮೂಲಕ ತಮ್ಮ ಕೆಲಸವನ್ನು ಪ್ರೀತಿಯಿಂದ ಮಾಡಿಕೊಂಡು ಬಂದಿದ್ದಾರೆ.

ಹಳಬರು, ಹೊಸಬರು ಎಂಬ ಭೇದ-ಭಾವ ಇಲ್ಲದೆ, ಪಾತ್ರಕ್ಕೆ ಏನು ಬೇಕೋ, ನಿರ್ದೇಶಕ ಏನು ಹೇಳುತ್ತಾನೋ ಅಷ್ಟು ಮಾಡುವ ಮೂಲಕ ಸಿನಿಮಾವನ್ನು ಪ್ರೀತಿಸಿಕೊಂಡು ಬಂದಿದ್ದಾರೆ. ಈಗ ಅವರು ಡಬ್ಬಲ್‌ ಸೆಂಚುರಿ ಬಾರಿಸಿದ್ದಾರೆ. ಹೊಸಬರೇ ಸೇರಿ ಮಾಡುತ್ತಿರುವ “ಅಗ್ರಸೇನ’ ಎಂಬ ಚಿತ್ರದಲ್ಲಿ ರಾಮಕೃಷ್ಣ ನಟಿಸಿದ್ದಾರೆ. “ಅಗ್ರಸೇನ’ ಅವರ ಅಭಿನಯದ 200 ನೇ ಸಿನಿಮಾ ಎಂಬುದು ವಿಶೇಷತೆಗಳಲ್ಲೊಂದು.

ಈ ಚಿತ್ರಕ್ಕೆ ಎನ್‌.ಕೆ.ಮುರುಗೇಶ್‌ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಇವರೇ ಬರೆದಿದ್ದಾರೆ. ನೃತ್ಯ ನಿರ್ದೇಶಕ ಕಮ್‌ ನಿರ್ದೇಶಕ ಹರ್ಷ ಜೊತೆ ಕೆಲಸ ಮಾಡಿದ್ದ ಮುರುಗೇಶ್‌, ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಮಮತಾ ಜಯರಾಮರೆಡ್ಡಿ ಈ ಚಿತ್ರದ ನಿರ್ಮಾಪಕರು. ಈ ಚಿತ್ರದಲ್ಲಿ ರಾಮಕೃಷ್ಣ ಅವರಿಗೆ ಎರಡು ಶೇಡ್‌ ಪಾತ್ರಗಳಿವೆ ಎಂಬುದು ನಿರ್ದೇಶಕರ ಮಾತು.

ಇದು 80 ರ ದಶಕದಲ್ಲಿ ನಡೆಯೋ ಕಥೆ. ಹಾಗಂತ ಚಿತ್ರದುದ್ದಕ್ಕೂ ಅದೇ ಇರುವುದಿಲ್ಲವಂತೆ. ಒಂದು ವರ್ಷನ್‌ ಮಾತ್ರ ಆ ಕಾಲದ ಕಥೆ ಸಾಗಿದರೆ, ಇನ್ನೊಂದು ವರ್ಷನ್‌ ಈಗಿನ ವಸ್ತುಸ್ಥಿತಿಯ ಕಥೆ ಹೇಳಲಿದೆಯಂತೆ. ರಾಮಕೃಷ್ಣ ಅವರು ಹಳ್ಳಿಯೊಂದರ ಮುಖಂಡರಾಗಿ ಕಾಣಿಸಿಕೊಂಡಿದ್ದಾರಂತೆ.

ಅದೊಂದು ಫ್ಯಾಶ್‌ಬ್ಯಾಕ್‌ ಕಥೆಯಾಗಿದ್ದರಿಂದ, ರಾಮಕೃಷ್ಣ ಅವರಿಗೆ ವಿಶೇಷ ಗೆಟಪ್‌ ಹಾಕಿಸಿ, ಪಾತ್ರ ಮಾಡಿಸಲಾಗಿದೆ ಎನ್ನುವ ಚಿತ್ರತಂಡ, ಇದೊಂದು ಕೌಟುಂಬಿಕ ಹಿನ್ನೆಲೆಯ ಕಥೆಯಾಗಿದ್ದು, ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಇವೆ. ಇಲ್ಲಿ ಅಮರ್‌, ಯತ್ವಿಕೃಷ್ಣ ನಾಯಕರಾದರೆ, ರಚನಾ ದಶರಥ, ಉಗ್ರಂ ಮಂಜು ಇತರರು ನಟಿಸಿದ್ದಾರೆ. ಚಿತ್ರಕ್ಕೆ ಆರ್‌.ಪಿ.ರೆಡ್ಡಿ ಛಾಯಾಗ್ರಹಣವಿದೆ. ತ್ಯಾಗು ಅವರ ಸಂಗೀತವಿದೆ.

ಟಾಪ್ ನ್ಯೂಸ್

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

Satish Jaraki

Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

muhurta ceremony of Bandekavi movie

Sandalwood: ಮುಹೂರ್ತ ಕಂಡ ‘ಬಂಡೆಕವಿ’

Naveen Shankar starrer Nodidavaru Enantare Trailer

Naveen Shankar: ಮೆಚ್ಚುಗೆ ಪಡೆದ ‌ʼನೋಡಿದವರು ಏನಂತಾರೆʼ ಟ್ರೇಲರ್

Darshan: ಪೊಲೀಸರು ವಶಪಡಿಸಿಕೊಂಡಿದ್ದ ಹಣ ವಾಪಾಸ್ ತರಲು ಕೋರ್ಟ್‌ ಮೆಟ್ಟಿಲೇರಿದ ದರ್ಶನ್

Darshan: ಪೊಲೀಸರು ವಶಪಡಿಸಿಕೊಂಡಿದ್ದ ಹಣ ವಾಪಾಸ್ ತರಲು ಕೋರ್ಟ್‌ ಮೆಟ್ಟಿಲೇರಿದ ದರ್ಶನ್

Duniya Vijay: ‘ಲ್ಯಾಂಡ್‌ ಲಾರ್ಡ್‌’ ‘ಮಾರುತ’ದಲ್ಲಿ ವಿಜಯ್‌

Duniya Vijay: ‘ಲ್ಯಾಂಡ್‌ ಲಾರ್ಡ್‌’ ‘ಮಾರುತ’ದಲ್ಲಿ ವಿಜಯ್‌

Kiccha Sudeep:‌ ಬಿಗ್‌ಬಾಸ್ ನಿರೂಪಕನಾಗಿ ನನ್ನ ಕೊನೆಯ ಫಿನಾಲೆ.. ಕಿಚ್ಚ ಭಾವನಾತ್ಮಕ ಪೋಸ್ಟ್

Kiccha Sudeep:‌ ಬಿಗ್‌ಬಾಸ್ ನಿರೂಪಕನಾಗಿ ನನ್ನ ಕೊನೆಯ ಫಿನಾಲೆ.. ಕಿಚ್ಚ ಭಾವನಾತ್ಮಕ ಪೋಸ್ಟ್

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.