ಕಲಬುರಗಿ ಬಹಮನಿ ಕೋಟೆಯಲ್ಲಿ ಮಹತ್ವದ ತೋಪು

Team Udayavani, Jan 9, 2019, 11:40 AM IST

gul-10.jpg

ಕಲಬುರಗಿ: ಇಲ್ಲಿನ ಬಹಮನಿ ಕೋಟೆಯಲ್ಲಿ ಮಹತ್ವದ ತೋಪು ಪತ್ತೆಯಾಗಿದ್ದನ್ನು ಸುಮಾರು 30 ವರ್ಷಗಳ ಹಿಂದೆ ಸಂಶೋಧನೆ ಮೂಲಕ ಪತ್ತೆ ಹಚ್ಚಲಾಗಿದ್ದರೂ ಅದು ಮುಳ್ಳಿನ ಗಿಡಗಳಲ್ಲಿ ಮುಚ್ಚಿ ಹೋಗಿತ್ತು. ಈಗ ಮತ್ತೆ ವಿದ್ಯಾರ್ಥಿಗಳ ಸಹಾಯದಿಂದ ಪತ್ತೆ ಹಚ್ಚಿದ್ದೇನೆ ಎಂದು ಡಾ| ಶಂಭುಲಿಂಗ ಎಸ್‌. ವಾಣಿ ಹೇಳಿದರು.

ಸರಕಾರಿ ಕಾಲೇಜಿನ ಇತಿಹಾಸ ವಿಭಾಗದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಇನಟೆಕ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಐತಿಹಾಸಿಕ ಬಹಮನಿ ಕೋಟೆ ವೀಕ್ಷಣೆ ಸಮಯದಲ್ಲಿ ಅವರು ಇತಿಹಾಸದ ಕುರಿತು ಮಾಹಿತಿ ನೀಡಿದರು.

ಭಾರತದಲ್ಲಿಯೇ ಮೊಟ್ಟ ಮೊದಲ ಭಾರಿಗೆ ಯುದ್ಧ ಭೂಮಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮದ್ದು ಗುಂಡುಗಳು ಹಾಗೂ ತೋಪುಗಳ ಬಳಕೆ ಜಾರಿಗೆ ತಂದವರು ಬಹಮನಿ ಸುಲ್ತಾನರು. ಪರ್ಶಿಯನ್‌ ಮೂಲದ ಈ ತಂತ್ರಜ್ಞಾನ ದಕ್ಷಿಣ ಭಾರತದ ಕಲಬುರಗಿಯಲ್ಲಿ ಯಶಸ್ವಿಯಾಗಿ 1365ರಲ್ಲಿ ಬಳಸಲಾಯಿತು. ಅಲ್ಲದೇ ಕೋಟೆ ರಕ್ಷಣೆಗಾಗಿ ಸುಮಾರು 26 ವಿವಿಧ ಆಕಾರದ ತೋಪುಗಳನ್ನು ಅಳವಡಿಸಲಾಗಿತ್ತು.

ಅವುಗಳಲ್ಲಿ ಪ್ರಸ್ತುತ 14 ತೋಪುಗಳನ್ನು ಕೋಟೆಯ ಒಳಗೋಡೆ ಮೇಲೆ ನೋಡಬಹುದು. ಇವುಗಳಲ್ಲಿ ಎರಡು ತೋಪುಗಳು ನಂತರದ ಬಹಮನಿ ಸುಲ್ತಾನರ ಕಾಲದಲ್ಲಿ ನಿರ್ಮಿಸಲಾಗಿವೆ. ಇವು ಏಳು ಅಡಿ ಉದ್ದ, ಒಂದು ಅಡಿ ಎತ್ತರದಿಂದ ಕೂಡಿದ್ದು, ಕೆಂಪುವರ್ಣದಲ್ಲಿ ಕಾಣುತ್ತವೆ. ಇದರ ಮೇಲೆ ಐದು ಹಂತದಲ್ಲಿ ರಚನೆ ಮಾಡಿದ ವೃತ್ತಾಕಾರದ ಹೂಬ್ಬಳಿ ರಚನೆ, ಮುಂಭಾಗದಲ್ಲಿ ಸಮಾನ ಆಕಾರದ ಚಿತ್ರಗಳು, ಅದರ ಹಿಂದಿನ ಭಾಗದಲ್ಲಿ ಎರಡು ಮೀನುಗಳು ವೃತ್ತಾಕಾರದಲ್ಲಿ ತಿರುಗುತ್ತಿರುವ ಚಿತ್ರವಿದೆ. ಇದು ತೋಪಿನ ಬಳಕೆ ಸಂಕೇತವಾಗಿರಬಹುದು ಎಂದು ತಿಳಿಸಿದರು.

ತೋಪಿನ ಹಿಂಭಾಗದಲ್ಲಿ ಎರಡು ಸಾಲುಗಳ ಪರ್ಶಿಯನ್‌ ಶಾಸನವಿದೆ. ಕಲಬುರಗಿ ಬಹಮನಿಯರ ಕಾಲದಲ್ಲಿ ನಿರ್ಮಿಸಲಾದ ಯಾವುದೇ ತೋಪುಗಳ ಮೇಲೆ ಶಾಸನಗಳು ಕಂಡುಬರುವುದಿಲ್ಲ. ಈ ಶಾಸನ ಕುರಿತು ಪ್ರೊ| ಅಬ್ದುಲ್‌ ರಬ್‌ ಮುಖ್ಯಸ್ಥರು ಉರ್ದು ವಿಭಾಗ, ಗು.ವಿ.ಕ. ಹಾಗೂ ಇತರ ಪರ್ಶಿಯನ್‌ ಭಾಷೆ ಪರಿಣಿತರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು. ಮೊದಲಿನ ಸಾಲುಗಳ ಕೆಲವು ಅಕ್ಷರಗಳು ಅಸ್ಪಷ್ಟವಾಗಿದ್ದು, ಉಳಿದ ಅಕ್ಷರಗಳಲ್ಲಿ ನವಾಬ್‌ ರುಕ್ನು ದೌಲಾ ಎಂದು ಹಾಗೂ 1184 ಅ.ಹಿ. (ಕ್ರಿ.ಶ.1770-71) ಎರಡನೇ ಸಾಲಿನಲ್ಲಿ ಮುಜಾಹೀದ್‌ ಬಹಾದ್ದೂರ ಝಾಫರ್‌-ಉದ್‌-ದೌಲಾ ಎಂದು ಬರೆಯಲಾಗಿದೆ ಎನ್ನುವ ಕುರಿತು ಡಾ| ರಬ್‌ ಮಾಹಿತಿ ನೀಡಿದರು.

ಟಾಪ್ ನ್ಯೂಸ್

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.